ಯುಎಸ್ ನ ಓಹಟ್ಚಿಯಲ್ಲಿ ಪ್ರಬಲ ಸುಂಟರಗಾಳಿಗೆ 5 ಜನ ಸಾವು : 20ಕ್ಕೂ ಹೆಚ್ಚು ಜನ ಗಾಯ!

ಪ್ರಬಲ ಸುಂಟರಗಾಳಿಯಿಂದ ಗುರುವಾರ ಅಮೇರಿಕಾದ ಉತ್ತರ ಅಲಬಾಮಾದಲ್ಲಿ ಐದು ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮಾತ್ರವಲ್ಲದೇ ಸಂಪೂರ್ಣವಾಗಿ ನೆರೆಹೊರೆಗಳು ನಾಶವಾಗಿದೆ.

ಕಾಲ್ಹೌನ್ ಕೌಂಟಿ ತುರ್ತುಸ್ಥಿತಿ ನಿರ್ವಹಣಾ ಏಜೆನ್ಸಿಯ ಪ್ರಕಾರ, ರಾಜ್ಯದ ವಾಯುವ್ಯ ಮೂಲೆಯಲ್ಲಿ ಸುಮಾರು 1,200 ಜನರ ಪಟ್ಟಣವಾದ ಓಹಟ್ಚಿಯಲ್ಲಿ ಐದು ಜನ ಸಾವನ್ನಪ್ಪಿದ್ದು ದೃಢಪಟ್ಟಿದೆ.

ಸಾವನ್ನಪ್ಪಿದವರ ಪೈಕಿ ಮೂವರು ಕುಟುಂಬ ಸದಸ್ಯರಾಗಿದ್ದಾರೆ. ಇದಲ್ಲದೆ ಓರ್ವ ವಯಸ್ಕ ಮತ್ತು ಓರ್ವ ಹೆಣ್ಣುಮಗಳು ಇದ್ದಾರೆ. ಘಟನೆಯಲ್ಲಿ ಹೆಚ್ಚಿನ ಸಾವುನೋವುಗಳು ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ರಕ್ಷಣಾಕಾರ್ಯ ಮುಂದುವರೆದಿದೆ. ಜೊತೆಗೆ ಗಾಯಗೊಂಡು ಬದುಕುಳಿದವರನ್ನು ಆಸ್ಪತ್ರೆಗೆ ಕಳುಹಿಸುತ್ತಿದ್ದು ಬಲಿಪಶುಗಳನ್ನು ರಕ್ಷಣಾ ಸಿಬ್ಬಂದಿ ಹುಡುಕುತ್ತಿದ್ದಾರೆ.

ಯುಎಸ್ನ ಅಲಬಾಮಾದ ಸೆಂಟರ್ವಿಲ್ಲೆಯಲ್ಲಿ ಸುಂಟರಗಾಳಿಯ ನಂತರ ಹಾನಿ ಮತ್ತು ಭಗ್ನಾವಶೇಷಗಳ ವೀಡಿಯೊ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವೈರಲ್ ಫೋಟೋಗಳಲ್ಲಿ ಓಹಟ್ಚೀ ಬಳಿ ಕಟ್ಟಡಗಳ ಕುಸಿತ, ನೆಲಕ್ಕಚ್ಚಿದೆ ಛಾವಣಿಗಳು, ಪೀಠೋಪಕರಣಗಳನ್ನು ಕಾಣಬಹುದು.

ಓಹಟ್ಚಿಯಿಂದ ನೈರುತ್ಯಕ್ಕೆ 60 ಮೈಲಿ ದೂರದಲ್ಲಿರುವ ಅಲಬಾಮಾದ ಪೆಲ್ಹಾಮ್ನಲ್ಲಿ ಸುಮಾರು 60 ಮನೆಗಳು ಹಾನಿಗೀಡಾಗಿವೆ. ಆದರೆ ಯಾವುದೇ ಸಾವುನೋವುಗಳು ಅಥವಾ ಗಾಯಗಳು ವರದಿಯಾಗಿಲ್ಲ. ಆದರೆ ನೂರಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights