ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಕುಸಿದ ಮುಕೇಶ್‌ ಅಂಬಾನಿ!

ಏಷ್ಯಾದ ಅತಿ ಶ್ರೀಮಂತ ಎಂಬ ಹೆಗ್ಗಳಿಕೆ ಹೊಂದಿರುವ ಮುಕೇಶ ಅಂಬಾನಿಯ ಆದಾಯ ಕೊರೊನಾ ಲಾಕ್‌ಡೌನ್‌ ಸಮಯದಲ್ಲಿಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಇದರಿಂದಾಗಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿದ್ದರು. ಆದರೆ,  ಆರ್ಥಿಕ ವರ್ಷದ 2ನೇ ತ್ರೈಮಾಸಿಕದಲ್ಲಿ ಲಾಭದ ಆದಾಯದಲ್ಲಿ ಭಾರೀ ಇಳಿಕೆಯಾಗಿದ್ದು, ಮುಕೇಶ್‌ ಅಂಬಾನಿ ಅವರ ಸಂಪತ್ತಿನಲ್ಲಿ 5 ಬಿಲಿಯನ್‌ ಡಾಲರ್‌ಗಳಷ್ಟು (ಸುಮಾರು 37 ಸಾವಿರ ಕೋಟಿ ರೂಪಾಯಿ) ನಷ್ಟ ಉಂಟಾಗಿದೆ. ಈ ಬೆನ್ನಲ್ಲೇ ವಿಶ್ವದ ಅತಿ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿ (ಫೋರ್ಬ್ಸ್‌ ಶ್ರೀಮಂತರ ಪಟ್ಟಿ) ಮುಕೇಶ್ ಅಂಬಾನಿ ಅವರು 9ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ಗೆ‌ ಷೇರುಗಳ ಬೆಲೆ ಸೋಮವಾರ (ನಿನ್ನೆ) ಶೇ.8ಕ್ಕೂ ಹೆಚ್ಚು ಇಳಿಕೆಯಾಗಿದೆ. ಮೇ 12ರ ನಂತರ ಇದೇ ಮೊದಲ ಬಾರಿಗೆ ಕಂಪನಿಯ ಷೇರು ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ. ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌ ಪ್ರಕಾರ, ರಿಲಯನ್ಸ್‌ ಷೇರು ಮೌಲ್ಯ ಕುಸಿತದಿಂದಾಗಿ ಮಾರ್ಚ್‌ ಬಳಿಕ ಇದೇ ಮೊದಲ ಬಾರಿಗೆ ಮುಕೇಶ್‌ ಅಂಬಾನಿ ಅವರ ಸಂಪತ್ತಿನಲ್ಲಿ ಇಳಿಕೆಯಾಗಿದ್ದು, 73 ಬಿಲಿಯನ್‌ ಡಾಲರ್‌ಗೆ ತಲುಪಿತ್ತು.

ಇತ್ತೀಚೆಗಷ್ಟೇ ಮುಕೇಶ್ ಅಂಬಾನಿ ಅವರು ಜಗತ್ತಿನ 5ನೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿ ಪಡೆದುಕೊಂಡಿದ್ದರು. ನಂತರದಲ್ಲಿ 6ನೇ ಸ್ಥಾನಕ್ಕೆ ಇಳಿದಿದ್ದ ಇವರು, ಇದೀಗ ಒಂದೇ ಬಾರಿಗೆ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಗೂಗಲ್‌ ಸ್ಥಾಪಕ ಲ್ಯಾರಿ ಪೇಜ್‌ ಅವರ ನಂತರದ ಸ್ಥಾನದಲ್ಲಿ ಮುಕೇಶ್ ಅಂಬಾನಿ ಇದ್ದಾರೆ.


ಇದನ್ನೂ ಓದಿ: “ನಾನು ನಿವೃತ್ತಿ ಹೊಂದಿದ್ದೇನೆ” ಎಂದ ಪಿವಿ ಸಿಂಧು: ಅಭಿಮಾನಿಗಳಿಗೆ ಕೊನೆಯಲ್ಲಿ ಟ್ವಿಸ್ಟ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights