ಆಗ್ರಾದ ಮೊಘಲ್ ಮ್ಯೂಸಿಯಂಗೆ ಶಿವಾಜಿ ಹೆಸರಿಡಲು ಯೋಗಿ ಸರ್ಕಾರ ನಿರ್ಧಾರ!

ಮೊಘಲ್ ಸಾಮ್ರಾಜ್ಯದ ನೆನಪಿನಲ್ಲಿ ಉತ್ತರ ಪ್ರದೇಶದ ತಾಜ್‌ಮಹಲ್‌ ನಗರ ಆಗ್ರಾದಲ್ಲಿ ‘ಮೊಘಲ್‌ ಮ್ಯೂಸಿಯಂ’ ನಿರ್ಮಿಸಲಾಗುತ್ತಿದೆ. ಆದರೆ, ಈ ಮ್ಯೂಸಿಯಂಗೆ ಮೊಘಲ್ ಮ್ಯೂಸಿಯಂ ಎಂಬ ಹೆಸರಿಡುವ ಬದಲು ಛತ್ರಪತಿ ಶಿವಾಜಿ ಅವರ ಹೆಸರಿಡಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ನಿರ್ಧರಿಸಿದೆ.

ಮೊಘಲರು ಎಂದಿಗೂ ನಮಗೆ ಆದರ್ಶವಾಗಲಾರರು. ನಮ್ಮ ದೇಶದ ಹೆಮ್ಮೆಯನ್ನು ನಾವು ಪ್ರಚಾರ ಮಾಡಬೇಕು. ಛತ್ರಪತಿ ಶಿವಾಜಿ ಮಹಾರಾಜ್ ನಮ್ಮ ದೇಶದ ಹೆಮ್ಮೆ. ಹೀಗಾಗಿ, ಮೊಘಲ್ ಮ್ಯೂಸಿಯಂಗೆ ಛತ್ರಪತಿ ಶಿವಾಜಿ ಮಹಾರಾಜ್ ಹೆಸರನ್ನಿಡಲು ನಿರ್ಧರಿಸಲಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

ಮೊಘಲರೆಂದೂ ನಮ್ಮ ಹೀರೋಗಳಾಗಲು ಸಾಧ್ಯವಿಲ್ಲ. ಆದರೆ, ಛತ್ರಪತಿ ಶಿವಾಜಿ ಮಹಾರಾಜ್ ನಮಗೆಲ್ಲ ಆದರ್ಶ. ರಾಷ್ಟ್ರೀಯತೆಯ ಪ್ರತೀಕವಾದ ಅವರ ಹೆಸರನ್ನೇ ಮ್ಯೂಸಿಯಂಗೆ ಇಡಲು ಹಲವು ಕಾರಣಗಳಿವೆ. 6 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಈ ಮ್ಯೂಸಿಯಂ ಮೂಲಕ ಶಿವಾಜಿ ಮಹಾರಾಜ್ ಜೀವನವನ್ನು ತೆರೆದಿಡಲಾಗುವುದು ಎಂದು ಯೋಗಿ ಸರ್ಕಾರ ತಿಳಿಸಿದೆ.

ಆಗ್ರಾದ ಶಿಲಾಗ್ರಾಮದ ತಾಜಮಹಲ್ ದ್ವಾರದ ಬಳಿ140 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ. ಇದರಲ್ಲಿ ಶಿವಾಜಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಭಾರತದಲ್ಲಿ ಮೊಘಲ್ ಆಡಳಿತಾವಧಿಯ ಇತಿಹಾಸವನ್ನು ಬಿತ್ತರಿಸಲಾಗುವುದು. 2016ರಲ್ಲಿ ಅಂದಿನ ಸಿಎಂ ಆಗಿದ್ದ ಅಖಿಲೇಶ್‌ ಯಾದವ್‌ ಮೊಘಲ್‌ ಮ್ಯೂಸಿಯಂ ನಿರ್ಮಿಸಲು ಶಂಕು ಸ್ಥಾಪನೆ ಮಾಡಿದ್ದರು. ಮ್ಯೂಸಿಯಂನ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಲೋಕಾರ್ಪಣೆಯಾಗಲಿದೆ.


ಇದನ್ನೂ ಓದಿ:  ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಚಾಲನೆ: ವಿಷ್ಣು ವಿಚಾರದಲ್ಲಿ 10 ವರ್ಷಗಳಿಂದಾದ ಬೆಳವಣಿಗೆಗಳೇನು ಗೊತ್ತೇ? ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights