ಮೆಟ್ರೋ ರೈಲು ಫುಲ್ ರಶ್ : ಮೆಟ್ರೋದಲ್ಲಿಲ್ವಾ ಕೊರೊನಾ ರೂಲ್ಸ್? ಸರ್ಕಾರಕ್ಕೆ ಸಾರ್ವಜನಿಕರ ಪ್ರಶ್ನೆ!

ಸಾರಿಗೆ ನೌಕರರ ಮುಷ್ಕರದಿಂದಾಗಿ ಇಂದಿನಿಂದ ಸಾರಿಗೆ ಎಲ್ಲಾ ನಿಗಮಗಳ ಬಸ್ ಸಂಚಾರ ಬಂದ್ ಆಗಿದ್ದು, ಸಾರ್ವಜನಿಕರು ಮೆಟ್ರೋ ಕಡೆಗೆ ಮುಖ ಮಾಡಿದ್ದಾರೆ. ಹೀಗಾಗಿ ಬೆಳಿಗ್ಗೆಯಿಂದಲೂ ಮೆಟ್ರೋ ಪ್ರಯಾಣಿಕರಿಂದ ಫುಲ್ ರಶ್ ಆಗಿದ್ದು ಕೊರೊನಾ ನಿಯಮಗಳು ಮೆಟ್ರೋದಲ್ಲಿ ಪಾಲಿಸಲಾಗಲ್ವಾ ಅಂತ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಹೌದು… ನಿನ್ನೆ ಮಧ್ಯಾಹ್ನದಿಂದಲೇ ಆರನೇ ವೇತನಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಪ್ರಾರಂಭಿಸಿದ್ದಾರೆ. ಹೀಗಾಗಿ ಇಂದು ಬೆಳಿಗ್ಗೆಯಿಂದಲೇ ಖಾಸಗೀ ಬಸ್ ಗಳು ಬೀದಿಗಿಳಿದು ಸುಲಿಗೆಗೆ ಮುಂದಾಗಿವೆ. ಆಟೋ, ಕ್ಯಾಬ್, ಟ್ಯಾಕ್ಸಿ ಹೀಗೆ ಖಾಸಗೀ ವಾಹನಗಳಿಗೆ ಭಾರೀ ಬೇಡಿಕೆ ಶುರುವಾಗಿದೆ. ಹೀಗಾಗಿ ದುಬಾರಿ ಹಣ ವ್ಯಯ ಮಾಡಿ ಪ್ರಯಾಣಿಸುವುದಕ್ಕಿಂತ ಕಡಿಮೆ ಹಣ ನೀಡಿ ಮೆಟ್ರೋದಲ್ಲಿ ಪ್ರಯಾಣಿಸಲು ಜನ ನಿರ್ಧರಿಸಿದ್ದಾರೆ.

ಹೀಗಾಗಿ ಮುಂಜಾನೆಯಿಂದಲೇ ಮೊಟ್ರೋ ರಶ್ ಆಗಿದೆ. ಎಲ್ಲೆಡೆ ಕೊರೊನಾ ನಿಯಮಗಳನ್ನು ಕಡ್ಡಾಯಗೊಳಿಸುವ ಸರ್ಕಾರಕ್ಕೆ ಮೆಟ್ರೋ ಮಾತ್ರ ಕಾಣಿಸುತ್ತಿಲ್ವಾ ಅನ್ನೋ ಪ್ರಶ್ನೆಯನ್ನು ಜನ ಹಾಕುತ್ತಿದ್ದಾರೆ. ಮುಷ್ಕರ ಕೈಗೊಂಡರೆ ಕಠಿಣ ಕ್ರಮ ಜಾರಿಗೊಳಿಸುವುದಾಗಿ ಎಚ್ಚರಿಸುವ ಸರ್ಕಾರದ ಕಣ್ಣೀಗೆ ಮೆಟ್ರೋ ಬೀಳುತ್ತಿಲ್ವಾ..? ಅಥವ ಮುಷ್ಕರ ತಡೆಯುವ ಭರದಲ್ಲಿ ಕೊರೊನಾ ಹೆಸರು ಹೇಳಿಕೊಳ್ತಾ? ಅನ್ನೋ ಪ್ರಶ್ನೆಯನ್ನು ಜನ ಹಾಕುತ್ತಿದ್ದಾರೆ.

ಈಗಾಗಲೇ ಕೆಲವು ಕಡೆ ಕೊರೊನಾ ಹರಡುವುದನ್ನ ತಡೆಯಲು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ. ಮೆಟ್ರೋದಲ್ಲಿಯೋ ಒಂದು ಸೀಟ್ ನ್ನು ಬಿಟ್ಟು ಮತ್ತೊಂದು ಸೀಟ್ ನಲ್ಲಿ ಪ್ರಯಾಣಿಕರು ಕುಳಿತುಕೊಳ್ಳಬೇಕಿತ್ತು. ನಿಂತುಕೊಳ್ಳುವಾಗಲೂ ಅಂತರ ಕಾಯ್ದುಕೊಳ್ಳಬೇಕಿತ್ತು. ಆದರಿಂದು ಇದ್ಯಾವ ನಿಯಮ ಕೂಡ ಮೆಟ್ರೋದಲ್ಲಿ ಕಾಣಸಿಗಲಿಲ್ಲ. ಕೊರೊನಾ ಮುಂಚೆ ಮೆಟ್ರೋ ಹೇಗೆ ರಸ್ ಇರುತ್ತಿತ್ತೋ ಹಾಗೇ ಇಂದು ಕೂಡ ಕಂಡು ಬಂದಿದೆ. ಹೀಗಾಗಿ ಜನ ಕಿಕ್ಕಿರಿದು ಸೇರುವ ಮೆಟ್ರೋದಲ್ಲಿ ಮಾತ್ರ ಯಾಕೆ ಕೊರೊನಾ ನಿಯಮ ಕಡ್ಡಾಯಗೊಳಿಸಿಲ್ಲ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಹೋರಾಡಲು ಹೊರಟಾಗಲೆಲ್ಲಾ ಕೊರೊನಾ ಮುಂದಿಟ್ಟುಕೊಂಡು 144 ಸೆಕ್ಷನ್ ಜಾರಿ ಬಗ್ಗೆ ಮಾತನಾಡುತ್ತದೆ. ಆದರೆ ಇದಕ್ಕೆ ಮೆಟ್ರೋ ಮಾತ್ರ ಹೊರತಾಗಿದಿಯಾ..? ಅಥವಾ ಮೆಟ್ರೋದಲ್ಲಿ ಕೊರೊನಾ ಬರೋದೇ ಇಲ್ವಾ ಅಂತ ಜನ ಸರ್ಕಾರದ ವಿರುದ್ಧ ಕೆಂಡ ಕಾರುತ್ತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights