MeToo ಆಂದೋಲನ: ಪತ್ರಕರ್ತೆ ವಿರುದ್ಧ ಮಾನನಷ್ಟ ಮೊಕದಮೆ; ಪ್ರಕರಣ ವಜಾಗೊಳಿಸಿದ ದೆಹಲಿ ಕೋರ್ಟ್‌!

ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣವನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿರುವ ದೆಹಲಿ ನ್ಯಾಯಾಲಯವು ರಮಣಿ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿ ತೀರ್ಪು ನೀಡಿದೆ.

2018ರಲ್ಲಿ ಭಾರೀ ಸಂಚಲನ ಹುಟ್ಟುಹಾಕಿದ್ದ #MeToo ಚಳುವಳಿಯ ಸಂದರ್ಭದಲ್ಲಿ ಅಕ್ಬರ್‌ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಎಂಎಸ್‌ ರಮಣಿ ಅವರು ಆರೋಪಿಸಿದ್ದರು.

ರಮಣಿ ಅವರ ಆರೋಪವನ್ನು ನಿರಾಕಸಿದ್ದ ಅಕ್ಬರ್‌ ಅವರು ದೆಹಲಿ ನ್ಯಾಯಾಲಯದಲ್ಲಿ ರಮಣಿ ವಿರುದ್ದ ಮಾನನಷ್ಟ ಮೊಕದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ದೆಹಲಿ ನ್ಯಾಯಾಲಯವು, ‘ಲೈಂಗಿಕ ಕಿರುಕುಳದಂತಹ ಪ್ರಕರಣಗಳ ಬಗ್ಗೆ ಮಹಿಳೆಯರು ದನಿ ಎತ್ತಿದ್ದಕ್ಕಾಗಿ ಮಹಿಳೆಯರಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ. ಭಾರತೀಯ ಸಂವಿಧಾನವು ಮಹಿಳೆಯರಿಗೆ ತಮ್ಮ ಸಂಕಷ್ಟಗಳು-ಸಮಸ್ಯೆಗಳನ್ನು ಯಾವುದೇ ವೇದಿಕೆಯಲ್ಲಿ ಮತ್ತು ಯಾವುದೇ ಸಮಯದಲ್ಲಿ ಮಂಡಿಸಲು ಅವಕಾಶ ನೀಡಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

“ಮುಚ್ಚಿದ ಬಾಗಿಲುಗಳ ಹಿಂದೆ ದೌರ್ಜಗಳು, ಲೈಂಗಿಕ ಕಿರುಕುಳನ್ನು ನೀಡಲಾಗಿದೆ ಎಂಬುದನ್ನು ನಿರ್ಲಕ್ಷಿಸಲಾಗುವುದಿಲ್ಲ. ಕಿರುಕುಳಕ್ಕೆ ಒಳಗಾಗುವ ಹೆಚ್ಚಿನ ಮಹಿಳೆಯರು ತಮ್ಮ ವ್ಯಕ್ತಿತ್ವದ ಮೇಲೆ ಹೇರಲಾಗುವ ಕಳಂಕ ಮತ್ತು ದಾಳಿಯಿಂದಾಗಿ ಮುಕ್ತವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ” ಎಂದು ನ್ಯಾಯಾಧೀಶರು ಹೇಳಿದರು.

ಸುಮಾರು 20 ವರ್ಷಗಳ ಹಿಂದೆ, ಅಕ್ಬರ್ ಅವರು ಏಷ್ಯನ್ ಏಜ್‌ ಎಂಬ ಪತ್ರಿಕೆಯ ಮುಖ್ಯಸ್ಥನಾಗಿದ್ದಾಗ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು. ಅವರು ಉದ್ಯೋಗದ ಸಂದರ್ಶನಕ್ಕಾಗಿ ತಮ್ಮನ್ನು ಹೋಟೆಲ್‌ನ ಕೋಣೆಗೆ ಕರೆದೊಯ್ದು ಅನುಚಿತವಾಗಿ ವರ್ಥಿಸಿದ್ದರು ಎಂದು ಪತ್ರಿಕೆಯ ಲೇಖನವೊಂದರಲ್ಲಿ ಎಂ.ಎಸ್. ರಮಣಿ ಬರೆದಿದ್ದರು.

ಇದಾದ ನಂತರ, ಮಾಜಿ ಸಂಪಾದಕ, ಮಾಜಿ ಸಚಿವರ ವಿರುದ್ಧ ಒಂದು ಡಜನ್‌ಗೂ ಹೆಚ್ಚು ಮಹಿಳೆಯರು ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ.

ಅದೇ ವರ್ಷದ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಚಿವರಾಗಿದ್ದ ಅಕ್ಬರ್ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅಲ್ಲದೆ, ಅದಾದ ಎರಡು ದಿನಗಳ ನಂತರ ಅಕ್ಟೋಬರ್ 17, 2018 ರಂದು ರಾಜೀನಾಮೆ ನೀಡಿದ್ದರು.

ಮಾನನಷ್ಟ ಮೊಕದಮೆಯು ‘ಉದ್ದೇಶಪೂರ್ವಕವಾಗಿ ತಮ್ಮನ್ನು ಗುರಿಮಾಡಲಾಗಿದೆ. ಇದು ನನ್ನನ್ನು ಬೆದರಿಸುವ ಪಯತ್ನ’ ಎಂದು ಎಂಎಸ್‌ ರಮಣಿ ಆರೋಪಿಸಿದ್ದಾರೆ.

ಇದನ್ನೂ ಓದಿ: #MeToo ಆರಂಭಕ್ಕೆ ಮಹಿಳೆಯರು ಉದ್ಯೋಗಕ್ಕೆ ಹೋಗಿದ್ದೇ ಕಾರಣ: ಮುಖೇಶ್‌ ಖನ್ನಾ ಹೇಳಿಕೆಗೆ ನೆಟ್ಟಿಗರ ತರಾಟೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights