ಮೆಸ್ಸಿಯ ಅರ್ಜೆಂಟೀನಾ ತಂಡಕ್ಕೆ ಕೋಪಾ ಅಮೇರಿಕಾ ಪ್ರಶಸ್ತಿ…!

ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್​ನಲ್ಲಿ ಆತಿಥೇಯ ಬ್ರೆಜಿಲ್ ವಿರುದ್ಧ ಅರ್ಜೆಂಟೀನಾ 1-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿದೆ. ಶನಿವಾರ ನಡೆದ ಕೋಪಾ ಅಮೇರಿಕಾ ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ 1-0 ಗೋಲುಗಳಿಂದ ಬ್ರೆಜಿಲ್ ತಂಡವನ್ನು ಮಣಿಸಿ 28 ವರ್ಷಗಳಲ್ಲಿ ರಾಷ್ಟ್ರೀಯ ತಂಡದ ಮೊದಲ ಪ್ರಶಸ್ತಿ ಹಾಗೂ ಪ್ರಮುಖ ಅಂತರರಾಷ್ಟ್ರೀಯ ಟ್ರೋಫಿಯನ್ನು ಗೆದ್ದುಕೊಂಡಿತು. ಪಂದ್ಯ ಮುಗಿದಾಗ, ಕಣ್ಣೀರಾಕಿದ್ದ ಮೆಸ್ಸಿಯನ್ನು ಅವರ ತಂಡದ ಸದಸ್ಯರು ಗಾಳಿಯಲ್ಲಿ ತೇಲಿಸಿದ್ದಾರೆ.

ಬ್ರೆಜಿಲ್ ರಾಜಧಾನಿ ರಯೋ ಡೀ ಜನೇರೋದ ಮರಕಾನ ಸ್ಟೇಡಿಯಂನದಲ್ಲಿ ನಡೆದ ಫೈನಲ್ ಪಂದ್ಯ ತುರುಸಿನ ಪೈಪೋಟಿ ಕಂಡಿತು. 22ನೇ ನಿಮಿಷದಲ್ಲಿ ಅರ್ಜೆಂಟೀನಾದ 33 ವರ್ಷದ ಸ್ಟ್ರೈಕರ್ ಏಂಜೆಲ್ ಡೀ ಮಾರಿಯಾ ಗೋಲು ಗಳಿಸಿ ಗೆಲುವಿನ ಮುನ್ನಡೆ ತಂದರು. ರೋಡ್ರಿಗೋ ಡೀ ಪೌಲ್ ನೀಡಿದ ಲಾಂಗ್ ಪಾಸ್ ಅನ್ನು ಗೋಲ್​ಕೀಪರ್ ಎಡೆರ್ಸನ್ ಕೈಗೆಟುಕದಂತೆ ಚೆಂಡು ಮೇಲೋಗುವಂತೆ ಲಾಬ್ ಮಾಡಿ ಗೋಲು ಗಳಿಸಿದರು. ಇದು ಇಡೀ ಟೂರ್ನಿಯಲ್ಲಿ ಬ್ರೆಜಿಲ್ ತಮ್ಮ ಎದುರಾಳಿಗಳಿಗೆ ಬಿಟ್ಟುಕೊಟ್ಟ ಮೂರನೇ ಗೋಲು ಮಾತ್ರ.

ಅದಾದ ಬಳಿಕ ಬ್ರೆಜಿಲ್ ತಂಡದ ಸ್ಟಾರ್ ಆಟಗಾರ ನೆಯ್ಮರ್ ಗೋಲು ಗಳಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಚೆಂಡು ಅರ್ಜೆಂಟೀನಾ ಗೋಲ್ ಕೀಪರ್ ದಾಟಿ ಗೋಲು ಪೆಟ್ಟಿಗೆ ಸೇರಲಿಲ್ಲ. ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಬ್ರೆಜಿಲ್ ತಂಡಕ್ಕೆ ಪಂದ್ಯವೊಂದರಲ್ಲಿ ಗೋಲು ಗಳಿಸಲು ಸಾಧ್ಯವಾಗದೇ ಹೋಗಿದ್ದು.

ಈ ಟೂರ್ನಿಯಾದ್ಯಂತ ಆಕರ್ಷಕ ಪ್ರದರ್ಶನ ನೀಡಿದ್ದ ಲಯೋನೆಲ್ ಮೆಸ್ಸಿ ಅವರಿಂದ ಫೈನಲ್ ಪಂದ್ಯದಲ್ಲಿ ನಿರೀಕ್ಷಿತ ಆಟ ಬರಲಿಲ್ಲ. 88ನೇ ನಿಮಿಷದಲ್ಲಿ ಗೋಲು ಗಳಿಸುವ ಸನಿಹಕ್ಕೆ ಹೋದರಾದರೂ ಸಾಧ್ಯವಾಗಲಿಲ್ಲ. ಆದರೆ, ನಾಯಕನಾಗಿ ಅರ್ಜೆಂಟೀನಾ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟ ಸಮಾಧಾನ ಮೆಸ್ಸಿಗೆ ಸಿಕ್ಕಿದೆ.

ಆದಾಗ್ಯೂ ಜಗದ್ವಿಖ್ಯಾತ ಕ್ರೀಡಾತಾರೆ ತನ್ನ ವೃತ್ತಿಜೀವನದುದ್ದಕ್ಕೂ ಎಲ್ಲಾ ವಿವಾದದ ನಂತರ ರಾಷ್ಟ್ರೀಯ ತಂಡಕ್ಕಾಗಿ ಆಡುವ ಪರಿಣಾಮಕಾರಿತ್ವದ ಬಗ್ಗೆ ಸ್ವಲ್ಪ ಸಮಾಧಾನ ಹೊಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights