ಕಂಗನಾ ಬೆನ್ನತ್ತಿದ ಮಾಧ್ಯಮಗಳು, ವಿಮಾನದಲ್ಲಿ ಕೊರೊನಾ ನಿಯಮಗಳನ್ನು ಮೀರಿ ವರ್ತಿಸಿವೆ! 

ಕಂಗನಾ ರಣವತ್‌ ಅವರು ಚಂಡೀಗಢದಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣ ನಡೆಸಿದ ಬಗ್ಗೆ ವರದಿ ಮಾಡಿದ್ದ ಮಾಧ್ಯಮಗಳು ಸಂಪೂರ್ಣವಾಗಿ ಸಾಮಾಜಿಕ ಅಂತರದ ಪ್ರೋಟೋಕಾಲ್‌ಅನ್ನು ಧಿಕ್ಕರಿವೆ ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

6E-264 ವಿಮಾನದಲ್ಲಿ ಮಾಧ್ಯಮಗಳು ಸುರಕ್ಷತೆ ಮತ್ತು ಸಾಮಾಜಿಕ ಅಂತರದ ಪ್ರೋಟೋಕಾಲ್‌ ಅನ್ನು ಉಲ್ಲಂಘಿಸಿರುವ ಬಗ್ಗೆ ಇಂಡಿಗೋದಿಂದ ಡೈರೆಕ್ಟರೇಟ್‌ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಆರೋಪದ ವರದಿಯನ್ನು ಕೋರಿದೆ. ವೀಡಿಯೊಗಳನ್ನು ಗುರುತಿಸುವಲ್ಲಿ ಕಾರ್ಯನಿರ್ವಹಿಸಲು ವಾಯುಯಾನ ನಿಯಂತ್ರಕ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ, ಶಿವಸೇನೆಯೊಂದಿಗೆ ಜಟಾಪಟಿಗೆ ಇಳಿದಿರುವ ಕಂಗನಾ ಕಣಾವತ್ ಅವರು ಮುಂಬೈಗೆ ಮರಳುತ್ತಿದ್ದಾಗ, ವರದಿಗಾರರು ತಮ್ಮ ಚಾನೆಲ್‌ಗಳಿಗಾಗಿ ವರದಿಮಾಡಲು ವಿಮಾನದ ಮಧ್ಯೆನಿಂತು ತಮ್ಮ ಮೈಕ್‌ಗಳಲ್ಲಿ ಮಾತನಾಡುತ್ತಿರುವುದು ಅಥವಾ ಮೊಬೈಲ್ ಫೋನ್ ವೀಡಿಯೊಗಳನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ.

Media Chaos On Kangana Ranaut's Flight, Regulator Seeks IndiGo Report

ಕ್ಯಾಮೆರಾ ಸಿಬ್ಬಂದಿ ಫೇಸ್‌ ಶೀಲ್ಡ್‌ಗಳನ್ನು ಧರಿಸಿದ್ದರೂ, ಮಾಸ್ಕ್‌ಗಳು ಅವ್ಯವಸ್ಥೆಗೊಂಡಿರುವ ಹಾಗೂ ಕಂಗನಾ ಅವರ ಉತ್ತಮ ನೋಟಕ್ಕಾಗಿ ತಮಾಷೆ ಮಾಡುತ್ತಾ ಜಗ್ಗಾಡುತ್ತಿರುವುದು ಸಾಮಾಜಿಕ ಅಂತರದ ಉದ್ದೇಶವನ್ನು ಕಡೆಗಣಿಸಿದೆ.

ಮುಂಬೈನ ಪಾಲಿಕೆ ಕಂಗನಾ ಅವರ ಕಚೇರಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಕೆಡವಲು ಮುಂದಾದಾಗಲೂ ಮಾಧ್ಯಮಗಳು ಅವ್ಯವಸ್ಥಿತವಾಗಿ ವರ್ತಿಸಿದ್ದು ಹಾಗೂ ಹೈಡ್ರಾಮಕ್ಕಾಗಿ ನಿರೀಕ್ಷಿಸುತ್ತಿದ್ದದ್ದು ಕಂಡು ಬಂದಿದೆ. ಅದಕ್ಕಾಗಿಯೇ ಮಾಧ್ಯಮಗಳು ಕಂಗನಾ ಅವರ ಬೆನ್ನತ್ತಿದ್ದವು.

ವಿಮಾನ ಸಿಬ್ಬಂದಿ ಮತ್ತು ಕ್ಯಾಪ್ಟನ್‌ಗಳು, ವಿಮಾನದಲ್ಲಿ ಪೋಟೋ ತೆಗೆಯುವ ಮತ್ತು ವಿಡಿಯೋ ಮಾಡುವುದನ್ನು ನಿರ್ಬಂಧಿಸಿರುವುದಾಗಿ, ಸಾಮಾಜಿಕ ಅಂತರ ಅನುಸರಿಸುವಂತೆ ಮತ್ತು ಸುರಕ್ಷತೆಯನ್ನು ಕಾಪಾಡುವಂತೆ ಪ್ರಕಟಣೆಯಲ್ಲಿ ಮತ್ತೆ ಹೇಳಿದ್ದಾರೆ. ಎಲ್ಲಾ ರೀತಿಯ ಪ್ರೋಟೋಕಾಲ್‌ಗಳ ಬಗ್ಗೆ ತಿಳಿಸಿದ್ದಾರೆ ಮತ್ತು ಅನುಸರಿಸಿದ್ದಾರೆ ಎಂದು ಇಂಡಿಗೂ ವಿಮಾನ ಸಂಸ್ಥೆಯು ಹೇಳಿದೆ.

ಈ ಬಗ್ಗೆ ಎನ್‌ಡಿ ಟಿವಿ ವರದಿ ಮಾಡಿದ್ದು, ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ.


ಇದನ್ನೂ ಓದಿ: ಕಂಗನಾ, ಮಹಾ ಸರ್ಕಾರದ ಕಿತ್ತಾಟದಲ್ಲಿ ಮರ್ಯಾದೆ ಕಳೆದುಕೊಂಡ ಮಾಧ್ಯಮಗಳು!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights