ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್- ಉಪಮೇಯರ್ ಮೀಸಲಾತಿ ಪ್ರಕಟ; ಪಟ್ಟಿ ಹೀಗಿದೆ!

ಕರ್ನಾಟಕದ ಹತ್ತು ಮಹಾನಾಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್‌ಗಳ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ರಾಜ್ಯ ಸರ್ಕಾರಕ್ಕೆ ಈ ಸ್ಥಾನಗಳಿಗೆ ಮೀಸಲಾತಿಯನ್ನು ನಿಗಧಿ ಮಾಡಿ ಅಧಿಕೃತ ಪಟ್ಟಿ ಪ್ರಕಟಿಸಿದೆ.

2021ರ ಜನವರಿ 21ರಂದು ಎಲ್ಲಾ ಮಹಾನಗರ ಪಾಲಿಕೆಗಳಿರುವ 10 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮಾರ್ಗಸೂಚಿ ಹೊರಡಿಸಿದ್ದ ಸರ್ಕಾರ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಅವರ ಸಲಹೆ ಮೇರೆಗೆ ಮೀಸಲಾತಿ ನಿಗಧಿ ಮಾಡಿದೆ ಎಂದು ತಿಳಿದು ಬಂದಿದೆ.

ಗುರುವಾರ ಮೇಯರ್ – ಉಪ ಮೇಯರ್‌ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿರುವ ಸರ್ಕಾರ, ಈ ಸ್ಥಾನಗಳಿಗೆ ಚುನಾವಣೆ ನಡೆಸಲು ಅವಕಾಶ ನೀಡಿದೆ.

ಮೀಸಲಾತಿ ಪಟ್ಟಿ ಹೀಗಿದೆ:

ಶಿವಮೊಗ್ಗ: ಮೇಯರ್ -ಹಿಂದುಳಿದ ವರ್ಗ ಎ ಮಹಿಳೆ, ಉಪಮೇಯರ್ -ಸಾಮಾನ್ಯ

ಮೈಸೂರು: ಮೇಯರ್ -ಸಾಮಾನ್ಯ ಮಹಿಳೆ, ಉಪಮೇಯರ್ -ಸಾಮಾನ್ಯ

ಬಳ್ಳಾರಿ: ಮೇಯರ್ –ಸಾಮಾನ್ಯ, ಉಪಮೇಯರ್ -ಹಿಂದುಳಿದ ವರ್ಗ ಮಹಿಳೆ

ಬೆಳಗಾವಿ: ಮೇಯರ್ –ಸಾಮಾನ್ಯ, ಉಪಮೇಯರ್ -ಸಾಮಾನ್ಯ ಮಹಿಳೆ

ದಾವಣಗೆರೆ: ಮೇಯರ್ -ಪರಿಶಿಷ್ಟ ಜಾತಿ ಮಹಿಳೆ, ಉಪಮೇಯರ್ -ಸಾಮಾನ್ಯ ಮಹಿಳೆ

ಹುಬ್ಬಳ್ಳಿ-ಧಾರವಾಡ: ಮೇಯರ್ -ಹಿಂದುಳಿದ ವರ್ಗ ಎ, ಉಪಮೇಯರ್ -ಪರಿಶಿಷ್ಟ ಜಾತಿ ಮಹಿಳೆ

ಮಂಗಳೂರು: ಮೇಯರ್ –ಸಾಮಾನ್ಯ, ಉಪಮೇಯರ್ -ಹಿಂದುಳಿದ ವರ್ಗ ಎ ಮಹಿಳೆ

ತುಮಕೂರು: ಮೇಯರ್ -ಪರಿಶಿಷ್ಟ ಪಂಗಡ, ಉಪಮೇಯರ್ -ಸಾಮಾನ್ಯ ಮಹಿಳೆ

ಕಲಬುರ್ಗಿ: ಮೇಯರ್ -ಸಾಮಾನ್ಯ ಮಹಿಳೆ, ಉಪ ಮೇಯರ್ -ಹಿಂದುಳಿದ ವರ್ಗ ಬಿ

ವಿಜಯಪುರ: ಮೇಯರ್ -ಪರಿಶಿಷ್ಟ ಜಾತಿ, ಉಪಮೇಯರ್ -ಹಿಂದುಳಿದ ವರ್ಗ ಎ

 


ಇದನ್ನೂ ಓದಿ: ಸಮೀಕ್ಷೆ: ಅಮೆರಿಕಾದಲ್ಲಿರುವ 61% ಭಾರತೀಯ ಇಂಜಿನಿಯರ್‌ಗಳು ಮೋದಿಯನ್ನು ಬೆಂಬಲಿಸುತ್ತಾರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights