ಮಾಸ್ಕ್‌ 3 ರೂ, ಫೇಸ್‌ಶೀಲ್ಡ್‌ 21 ರೂ, ಗ್ಲೌಸ್‌ 5 ರೂ; ಅಗತ್ಯ ವಸ್ತುಗಳಿಗೆ ಕಡಿಮೆ ಬೆಲೆ ನಿಗದಿ ಮಾಡಿ ಮಾದರಿಯಾದ ಪಿಣರಾಯಿ ಸರ್ಕಾರ!

ಕೊರೊನಾ ಸೋಂಕು ಉಲ್ಬಣಗೊಂಡಿರುವ ಸಂದರ್ಭದಲ್ಲಿ ಹಲವು ರಾಜ್ಯಗಳು ಲಾಕ್‌ಡೌನ್‌ ಜಾರಿ ಮಾಡಿ ಜನರನ್ನು ಮನೆಯಲ್ಲಿ ಕಟ್ಟಿಹಾಕಿವೆ. ಆದರೆ, ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಜನರು ದುಡಿಮೆಯೂ ಇಲ್ಲದೆ, ಅಗತ್ಯ ವಸ್ತುಗಳನ್ನು ಕೊಳ್ಳಲೂ ಆಗದೇ ಪರದಾಡುತ್ತಿದ್ದಾರೆ. ಈ ವೇಳೆ ಕೇರಳ ಸರ್ಕಾರ ಅಗತ್ಯ ವಸ್ತುಗಳಾದ ಮಾಸ್ಕ್, ಸ್ಯಾನಿಟೈಜರ್‌, ಫೇಸ್‌ಶೀಲ್ಡ್‌ಗೆ ಸೇರಿದಂತೆ ಹಲವು ವಸ್ತುಗಳಿಗೆ ಕಡಿಮೆ ಬೆಲೆ ನಿಗದಿ ಮಾಡಿದ್ದು, ದೇಶಕ್ಕೆ ಮಾದರಿಯಾಗಿದೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರ, ಕೇರಳ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ- 1986 ಕಾಯ್ದೆ ಜಾರಿಗೆ ತಂದಿದೆ. ಕೊರೊನಾ ಉಲ್ಬಣವಾಗುತ್ತಿರುವ ಈ ಸಮಯದಲ್ಲಿ ಅಗತ್ಯ ವಸ್ತುಗಳು ಜನರ ಕೈಗೆಟುಕುವಂತೆ ಮಾಡಲು ಈ ಕಾಯ್ದೆ ಜಾರಿಗೊಳಿಸಲಾಗಿದೆ.

ಕೇರಳ ಸರ್ಕಾರ ಹೊರಡಿಸಿರುವ ಅಗತ್ಯ ವಸ್ತುಗಳ ಗರಿಷ್ಠ ದರ ಪಟ್ಟಿ ಹೀಗಿದೆ.

ಪಿಪಿಣ ಕಿಟ್- 273 ರೂಪಾಯಿ

ಎನ್‌95 ಮಾಸ್ಕ್- 22 ರೂಪಾಯಿ,

ಟ್ರಿಪಲ್ ಲೇಯರ್ ಮಾಸ್ಕ್- 3 ರೂಪಾಯಿ 90 ಪೈಸೆ,

ಎನ್‌ಆರ್‌ಬಿ ಮಾಸ್ಕ್- 80 ರೂಪಾಯಿ

ಫೇಸ್‌ಶೀಲ್ಡ್ – 21 ರೂಪಾಯಿ

ಡಿಸ್‌ಪೋಸಬಲ್ ಏಪ್ರಾನ್‌- 12 ರೂಪಾಯಿ,

ಸರ್ಜಿಕಲ್ ಗೌನ್- 65 ರೂಪಾಯಿ,

ಗ್ಲೌಸ್- 5 ರೂಪಾಯಿ 75 ಪೈಸೆ

ಅರ್ಧ ಲೀಟರ್‌ ಹ್ಯಾಂಡ್ ಸ್ಯಾನಿಟೈಸರ್ 192 ರೂ, 200 ಎಂಎಲ್‌ಗೆ 98 ರೂಪಾಯಿ ಮತ್ತು 100 ಎಂಎಲ್‌ಗೆ 55 ರೂಪಾಯಿ

ಆಕ್ಸಿಜನ್ ಮಾಸ್ಕ್ – 54 ರೂಪಾಯಿ

ಪಲ್ಸ್ ಆಕ್ಸಿಮೀಟರ್ – 1500 ರೂಪಾಯಿ

ದರ ಪಟ್ಟಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಜನರಿಗೆ ತಿಳಿಸಿದ್ದಾರೆ. ಜೊತೆಗೆ ಮೇ 23 ರವರೆಗೆ ಲಾಕ್‌ಡೌನ್ ವಿಸ್ತರಿಸಿರುವ ಕೇರಳದಲ್ಲಿ ಜೂನ್ ತಿಂಗಳಲ್ಲೂ ದಿನಸಿ ಕಿಟ್ ವಿತರಣೆ ಮುಂದುವರೆಯಲಿದೆ ಎಂದಿದ್ದಾರೆ.

“ಲಾಕ್‌ಡೌನ್ ಅನ್ನು ಮೇ 23 ರವರೆಗೆ ವಿಸ್ತರಿಸಲಾಗಿದೆ .ತಿರುವನಂತಪುರಂ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂನಲ್ಲಿ ಟ್ರಿಪಲ್ ಲಾಕ್ ಡೌನ್ ವಿಧಿಸಲಾಗಿದೆ. ಜೂನ್‌ನಲ್ಲಿಯೂ ಉಚಿತ ದಿನಸಿ ಕಿಟ್‌ಗಳನ್ನೂ ವಿತರಿಸಲಾಗುತ್ತದೆ. 823.23 ಕೋಟಿ ಹಣವನ್ನು ಮೇ ತಿಂಗಳಲ್ಲಿ ವೆಲ್‌ಫೇರ್‌ ಪಿಂಚಣಿಗಳಾಗಿ ವಿತರಿಸಲಾಗುವುದು. ವೆಲ್‌ಫೇರ್‌ ಬೋರ್ಡ್ ಸದಸ್ಯರಿಗೆ 1,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: ಟಿಎಂಸಿ ತೊರೆದು ಬಂದವರನ್ನು ಕಣಕ್ಕಿಳಿಸಿದ್ದು ತಪ್ಪು; ಬಿಜೆಪಿ ವಿರುದ್ದ ಆರ್‌ಎಸ್‌ಎಸ್‌ ಗರಂ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights