ವಿಧಾನಸಭೆ ಪ್ರವೇಶ ದ್ವಾರದಲ್ಲಿ 12 ಮಾರ್ಷಲ್ಸ್ ಸೆಕ್ಯೂರಿಟಿ ನಿಯೋಜನೆ : ಸಂಗಮೇಶ್ಗೆ ನೋ ಎಂಟ್ರಿ!

ವಿಧಾನಸಭೆ ಪ್ರವೇಶ ದ್ವಾರದಲ್ಲಿ ಮಾರ್ಷಲ್ಸ್ ಸೆಕ್ಯೂರಿಟಿ ನಿಯೋಜನೆ ಮಾಡಲಾಗಿದೆ. 12ಕ್ಕೂ ಹೆಚ್ಚು ಮಾರ್ಷಲ್ಸ್ ನಿಯೋಜನೆ ಮಾಡಿ ಭದ್ರತೆ ಒದಗಿಸಲಾಗಿದೆ.

ನಿನ್ನೆ ವಿಧಾನಸಭೆ ಕಲಾಪದಲ್ಲಿ ಭದ್ರವತಿ ಶಾಸಕ ಬಿಕೆ ಸಂಗಮೇಶ್ ಶರ್ಟ್ ಬಿಚ್ಚಿ ಆಕ್ರೋಶ ಹೊರಹಾಕಿದ್ದರು. ಬಳಿಕ ಸಂಗಮೇಶ್ ಅವರನ್ನು ಅಮಾನತು ಮಾಡಲಾಗಿದೆ. ಆದರೂ ಅವರನ್ನು ನಿನ್ನೆ ಬಲವಂತವಾಗಿ ವಿಧಾನಸಭೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆ ಕಲಾಪಕ್ಕೆ ಕರೆದೊಯ್ದಿದ್ದರು. ಇಂದು ಸಿದ್ದರಾಮಯ್ಯ ಸಂಗಮೇಶ್ ಅವರನ್ನು ವಿಧಾನಸಭೆಗೆ ಕರೆತರುವ ಸಾಧ್ಯತೆ ಇದ್ದರಿಂದ ಪ್ರವೇಶ ದ್ವಾರದಲ್ಲಿ ಮಾರ್ಷಲ್ಸ್ ಸೆಕ್ಯೂರಿಟಿ ನಿಯೋಜನೆ ಮಾಡಲಾಗಿತ್ತು. ಸಂಗಮೇಶ್ ಅವರನ್ನು ವಿದಾನಸಭೆಗೆ ಪ್ರವೇಶಿಸದಂತೆ ನೋಡಿಕೊಳ್ಳಲು ಸ್ಪೀಕರ್ ಸೂಚಿಸಿದ್ದರು.

ಹೀಗಾಗಿ ಮಾರ್ಷಲ್ಸ್ ಸಂಗಮೆಶ್ ಅವರನ್ನು ತಡೆದರು. ಈ ವೇಳೆ ಸಿದ್ದರಾಮಯ್ಯ, “ ಅವರೇನು ಭಯೋತ್ಪಾದಕರಾ? ಎಂದು ಪ್ರಶ್ನಸಿದ್ದಾರೆ. ಭದ್ರಾವತಿ ಕಿಂಗ್ ಸಂಗಮೇಶ್” ಎಂದು ಮಾರ್ಷಲ್ಸ್ ಗೆ ಸಿದ್ದು ತರಾಟೆ ತೆಗೆದುಕೊಂಡಿದ್ದಾರೆ.

ಆದರೆ ವಿಪಕ್ಷ ನಾಯಕರ ಪ್ರಯತ್ನ ಫಲವಾಗಲಿಲ್ಲ. ಸ್ಪೀಕರ್ ಆದೇಶ ಇರುವುದರಿಂದ ಮಾರ್ಷಲ್ಸ್ ಸಂಗಮೇಶ್ ಅವರನ್ನು ಒಳಪ್ರವೇಶಿಸಲು ಬಿಡಲಿಲ್ಲ. ಕೊನೆಗೆ ಸಂಗಮೇಶ್ ಅವರನ್ನು ಮೊದಲ ಮಹಡಿಯಲ್ಲಿ ಬಿಟ್ಟು ವಿಧಾನಸಭೆಗೆ ಸಿದ್ದರಾಮಯ್ಯ ತೆರಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights