Mallya : ಹಸ್ತಾಂತರ ಆದೇಶದ ವಿರುದ್ಧ ಮಲ್ಯಗೆ ಸೋಲು, ಭಾರತಕ್ಕೆ ಹಸ್ತಾಂತರ ಸನ್ನಿಹಿತ..

ಭಾರತದ ಬ್ಯಾಂಕುಗಳಿಗೆ ಟೋಪಿ ಹಾಕಿ ತಲೆಮರೆಸಿಕೊಂಡಿರುವ ವಂಚಕ ಉದ್ಯಮಿ ವಿಜಯ್ ಮಲ್ಯ ಬ್ರಿಟನ್ನಿನಿಂದ ಗಡೀಪಾರಾಗವ ದಿನ ಸನ್ನಿಹಿತವಾಗಿದೆ.  ಇನ್ನೊಂದು ತಿಂಗಳಲ್ಲಿ ಮಲ್ಯ ಭಾರತಕ್ಕೆ ಹಸ್ತಾಂತರವಾಗುವ ಸಾಧ್ಯತೆ ಇದೆ. ಹಸ್ತಾಂತರದ ಆದೇಶದ ವಿರುದ್ಧದ ಮಲ್ಯ ಅರ್ಜಿಯನ್ನು ಅಲ್ಲಿನ ಹೈಕೋರ್ಟ್ ವಜಾ ಮಾಡಿದೆ..

ಅದರ ವಿರುದ್ಧ ಅಲ್ಲಿನ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಮಲ್ಯಗೆ ಅವಕಾಶವನ್ನು ಮಲ್ಯನಿಗೆ ನಿರಾಕರಿಸಲಾಗಿದೆ… ಈ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸುವುದು ಖಚಿತವಾಗಿದೆ. ಭಾರತೀಯ ಮೂಲದ ಬ್ರಿಟನ್ ಸಚಿವೆ ಪ್ರೀತಿ ಪಟೇಲ್ ಕೈಯಲ್ಲಿ ಮಲ್ಯ ಹಸ್ತಾಂತರ ಅರ್ಜಿ ಇದ್ದು, ಇನ್ನೊಂದ ತಿಂಗಳಲ್ಲಿ ಅವರು ಅದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ.

ಮಲ್ಯಗಿದ್ದ ಕಡೇ ಅವಕಾಶವೂ ತಪ್ಪಿದ್ದು ಶೀಘ್ರ ಹಸ್ತಾಂತರಕ್ಕೆ ಸಂಬಂಧಿಸಿದ ವಿನಂತಿ ಪ್ರಕ್ರಿಯೆಯನ್ನು ಭಾರತವು ಆದಷ್ಟು ಶೀಘ್ರ ಮಾಡಲಿದೆ ಎನ್ನಲಾಗಿದೆ. ಇದಕ್ಕೆ ಮುನ್ನ ಗುರುವಾರ ಬೆಳಗ್ಗೆಯಷ್ಟೇ ಟ್ವೀಟಿಸಿದ್ದ ವಿಜಯ್ ಮಲ್ಯ ತನ್ನ ಎಲ್ಲ ಸಾಲವನ್ನೂ ತೀರಿಸುವುದಾಗಿ ಹಾಗೂ ತನ್ನ ಮೇಲಿನ ಪ್ರಕರಣ ಕೈಬಿಡುವಂತೆಯೂ ಬರೆದುಕೊಂಡಿದ್ದ.

ಸ್ಟೇಟ್ ಬ್ಯಾಂಕ್ ಸೇರಿ ಭಾರತದ ವಿವಿಧ ಬ್ಯಮಾಖುಗಳಿಗೆ ಸುಮಾರು ಹತ್ತು ಸಾವಿರ ಕೋಟಿ ರೂಗಳ ವಂಚನೆ ಆರೋಪ ಮಲ್ಯ ಮೇಲೆ ಇದೆ. ಭಾರತಕ್ಕೆ ಬಂದೊಡನೇ ಮಲ್ಯಗೆ ಆತಿಥ್ಯ ನೀಡಲು ಮುಂಬೈನ ಆರ್ಥರ್‍ ರಸ್ತೆಯಲ್ಲಿಉರವ ಜೈಲಿನಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಮಲ್ಯ ಹಸ್ತಾಂತರ ಭಾರತಕ್ಕೆ ಪ್ರಮುಖವಾಗಿದ್ದು ಇತರ ವಂಚಕ ಉದ್ಯಮಿಗಳಾದ ನೀರವ್ ಮೋದಿ, ಚೋಕ್ಸಿ, ಲಲಿತ್ ಮುಂತಾದವರನ್ನು ವಾಪಸ್ ಕರೆತರಲು ಅನುಕೂಲವಾಗಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights