ದೇಶದಲ್ಲಿ 4 ತಿಂಗಳಲ್ಲಿ ಕಡಿಮೆ ಕೊರೊನಾ ಕೇಸ್ ದಾಖಲು : ಸಾವಿನ ಸಂಖ್ಯೆಯಲ್ಲಿ ಏರಿಕೆ!

ಭಾರತದಲ್ಲಿ ಸುಮಾರು 4 ತಿಂಗಳಲ್ಲಿ ಕಡಿಮೆ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಭಾರತದಲ್ಲಿ 24 ಗಂಟೆಗಳಲ್ಲಿ 2020 ಸಾವುಗಳು ಸಂಭವಿಸಿದ್ದು, 31,443 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. 118 ದಿನಗಳಲ್ಲಿ ದೇಶ ಕಂಡ ಪ್ರಕರಣಗಳಲ್ಲಿ ಇದು ಅತ್ಯಂತ ಕಡಿಮೆ ದೈನಂದಿನ ಸ್ಪೈಕ್ ಆಗಿದೆ.

ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2020 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದ ಒಟ್ಟು ಸಾವಿನ ಸಂಖ್ಯೆ 410784ಕ್ಕೇ ಏರಿಕೆಯಾಗಿದೆ.

ಈ ಆತಂಕಕಾರಿ ಬೆಳವಣಿಗೆಯಲ್ಲಿ ಒಂದು ನೆಮ್ಮದಿ ವಿಚಾರ ಎಂದರೆ ಕಳೆದ ನಾಲ್ಕು ತಿಂಗಳಲ್ಲಿ ಭಾರತದಲ್ಲಿ ಅತಿ ಕಡಿಮೆ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ 31443 ಹೊಸ ಕೇಸ್ ದಾಖಲಾಗಿವೆ.

ಇನ್ನೂ ಇಂದಿನ ಕೋವಿಡ್ ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಅಧಿಕ ಸಾವಿನ ಪ್ರಕರಣಗಳು ಮಧ್ಯಪ್ರದೇಶದಲ್ಲಿ (481) ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 146 ಮತ್ತು ಕೇಳದಲ್ಲಿ 100 ಸಾವುಗಳು ವರದಿಯಾಗಿವೆ.

ದೇಶದಲ್ಲಿ ಈವರೆಗೆ ಕೋವಿಡ್ ನಿಂದಾಗಿ ಮೃತಪಟ್ಟವರ ಸಂಖ್ಯೆಯಲ್ಲಿ ಮಹಾರಾಷ್ಟ್್ರದಲ್ಲಿ 126024, ಕರ್ನಾಟಕದಲ್ಲಿ 35896, ತಮಿಳುನಾಡಿನಲ್ಲಿ 33454, ದೆಹಲಿಯಲ್ಲಿ 25018, ಉತ್ತರ ಪ್ರದೇಶದಲ್ಲಿ 22700, ಪಶ್ಚಿಮ ಬಂಗಾಳದಲ್ಲಿ 17927 ಮತ್ತು ಪಂಜಾಬ್ ನಲ್ಲಿ 16193 ಜನ ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಒಂದೇ 17 ಲಕ್ಷದ 40 ಸಾವಿರದ 325 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, 43 ಕೋಟಿಯ 40 ಲಕ್ಷದ 58 ಸಾವಿರದ 138 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights