ಲವ್ ಜಿಹಾದ್ : ಯುಪಿಯ 33 ವರ್ಷದ ಮುಸ್ಲೀಂ ವ್ಯಕ್ತಿ ಬಂಧನಕ್ಕೆ ಅಲಹಬಾದ್ ಹೈಕೋರ್ಟ್ ತಡೆಯಾಜ್ಞೆ!

ಕೇರಳ, ಕರ್ನಾಟಕದಲ್ಲಿ ಕೇಳಿಬರುತ್ತಿದ್ದ ಲವ್ ಜಿಹಾದ್ ಆರೋಪಗಳು ಉತ್ತರ ಪ್ರದೇಶಕ್ಕೂ ಕಾಲಿಟ್ಟಿದ್ದು ಜೀವ ಕಳೆ ಬಂದಿದೆ. ಇದೇ ವಿಷಯ ಇಟ್ಟುಕೊಂಡು ಸಮಾಜವಾದಿ ಪಕ್ಷದ ವಿರುದ್ಧ ಬಿಜೆಪಿ ಹರಿಹಾಯ್ದಿದೆ. ಸದ್ಯ ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಸಂಬಂಧಿಸಿದಂತೆ ಸಾಕಷ್ಟು ಪರ ಮತ್ತು ವಿರೋಧಗಳು ವ್ಯಕ್ತವಾಗುತ್ತಿವೆ. ಈ ನಡುವೆ ಉತ್ತರ ಪ್ರದೇಶ ಸರ್ಕಾರದ ಮತಾಂತರ ನಿಷೇಧ ಕಾಯ್ದೆ ಅಡಿ ಬಂಧಿಸಲಾಗಿದ್ದ 33 ವರ್ಷದ ಮುಸ್ಲೀಂ ವ್ಯಕ್ತಿಯ ಬಂಧನಕ್ಕೆ ಅಲಹಾಬಾದ್ ಕೋರ್ಟ್ ತಡೆಯಾಜ್ಞ ನೀಡಿದೆ. ವ್ಯಕ್ತಿ ಬಂಧನದಿಂದ ಖಾಸಗೀತನಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಅಲಹಾಬಾದ್ ಕೋರ್ಟ್ ವಿಚಾರಣೆ ವೇಳೆ ಹೇಳಿದೆ.

ಮತಾಂತರ ನಿಷೇಧ ಕಾಯ್ದೆ ಅಡಿ ನದೀಮ್ ಮತ್ತು ಸಲ್ಮಾನ್ ವಿರುದ್ಧ ಮುಜಾಫರ್ ನಗರದಲ್ಲಿ ಅಕ್ಷಯ್ ಕುಮಾರ್ ತ್ಯಾಗಿ ಕಳೆದ ತಿಂಗಳು ದೂರು ನೀಡಿದ್ದರು.

ಖಾಸಗೀ ಕಂಪನಿಯಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಅಕ್ಷಯ್ ಕುಮಾರ್ ಮುಜಾಫರ್ ನಗರದಲ್ಲಿ ಸಲ್ಮಾನ್ ಹಾಗೂ ನದೀಮ್ ವಿರುದ್ಧ ದಾಖಲಿಸಿದ್ದರು.ಆಗಾಗ ಮನೆಗೆ ಬಂದು ಹೋಗುತ್ತಿದ್ದ ನದೀಮ್ ನನ್ನ ಹೆಂಡತಿಯೊಂದಿಗೆ ಸಲೀಗೆಯಿಂದ ವರ್ತಿಸಿ, ಆಕೆ ಮುಸ್ಲೀಂ ಧರ್ಮಕ್ಕೆ ಮತಾಂತರ ಹೊಂದಲು ಪ್ರೇರೇಪಿಸಿದ್ದಾನೆ. ಮಾತ್ರವಲ್ಲದೇ ಆಕೆಗೆ ಹೋಸ ಮೊಬೈಲ್ ಕೊಡಿಸಿ ಪ್ರತಿನಿತ್ಯ ಈ ಬಗ್ಗೆ ಚರ್ಚೆ ಮಾಡಿದ್ದಾನೆ. ಉದ್ದೇಶಪೂರ್ವಕವಾಗಿ ನಾಟಕವಾಡಿದ ನದೀಮ್ ಆಕೆಯನ್ನು ಮದುವೆಯಾಘುವುದಾಗಿ ನಂಬಿಸಿದ್ದಾನೆ ಎಂದು ಅಕ್ಷಯ್ ದೂರಿನಲ್ಲಿ ದಾಖಲಿಸಿದ್ದಾರೆ.ಹೀಗಾಗಿ ಮತಾಂತರ ನಿಷೇಧ ಕಾಯ್ದೆ ಅಡಿ ನದೀಮ್ ಮೇಲೆ ಕೇಸ್ ದಾಖಲಾಗಿತ್ತು.

ಆದರೆ ಈ ದೂರು ತಳ್ಳಿ ಹಾಕಿದಿ ನದೀಮ್ ಹೈಕೋರ್ಟ್ ನಲ್ಲಿ ವಿಚಾರಣೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಅಲಹಬಾದ್ ಕೋರ್ಟ್ ಪೊಲೀಸರು ವ್ಯಕ್ತಿಯನ್ನು ಬಂಧಿಸುವಂತಿಲ್ಲ ಎಂದು ತಡೆಯಾಜ್ಞೆ ಹೊರಡಿಸಿದೆ. ನದೀಮ್ ಅಕ್ಷಯ್ ಪತ್ನಿಯನ್ನು ಮತಾಂತರಗೊಳಿಸಲು ಪ್ರಯತ್ನಿಸಿದ್ದಾ ಎನ್ನುವದಕ್ಕೆ ಯಾವುದೇ ಸಾಕ್ಷಿಪುರಾವೆಗಳಿಲ್ಲ ಎಂದು ಹೈಕೋರ್ಟ್ ಹೇಳಿದೆ.ಹೀಗಾಗಿ ಮುಂದಿನ ವಿಚಾರಣೆವರೆಗೂ ಆತನನ್ನು ಬಂಧಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ತಡೆಯಲು ಬಲವಂತ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿತ್ತು. ಇದೇ ರೀತಿ ಕಾನೂನನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೂ ತರುವ ತಯಾರಿ ನಡೆದಿದೆ. ಆದರಿದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಮಸ್ಲೀಂ ಯುವಕರು ಬಲವಂತವಾಗಿ ಹಿಂದೂ ಮಹಿಳೆಯರನ್ನು ತಮ್ಮ ಧರ್ಮಕ್ಕೆ ಮತಾಂತರಗೊಳಿಸುವ ಪ್ರಯತ್ನದಕ್ಕಿದ್ದಾರೆಂದು ಈ ಕಾನೂನು ಜಾರಿಗೆ ತರುವ ಬಿಜೆಪಿ ತಿರ್ಮಾನಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights