ಹರಿಯಾಣ ಚುನಾವಣೆಯಲ್ಲೂ BJPಗೆ ಸೋಲು; ಭಾರೀ ಮುಖಭಂಗಕ್ಕೆ ಒಳಗಾದ ಕೇಸರಿ ಪಡೆ!

ಕೃಷಿ ಕಾಯ್ದೆಗಳ ವಿರುದ್ಧ ಹರಿಯಾಣ-ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಸಾವಿರರ ರೈತರ ಹೋರಾಟ ಒಂದು ತಿಂಗಳು ದಾಡಿದೆ. ಈ ನಡುವೆ ನಡೆದ ಹರಿಯಾಣದ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ-ಜೆಜೆಪಿ ಮೈತ್ರಿಯು ಭಾರೀ ಹಿನ್ನಡೆ ಅನುಭವಿಸಿದ್ದು, ಮುಖಭಂಗಕ್ಕೆ ಒಳಗಾಗಿವೆ.

ಹರಿಯಾಣ ವಿಧಾನಸಭಾ ಚುನಾವಣೆಯ ಒಂದು ವರ್ಷದ ನಂತರ ನಡೆದ ಸೋನಿಪತ್‌ ಮತ್ತು ಅಂಬಾಲಾ ಮುನ್ಸಿಪಾಲಿಟಿ ಚುನಾವಣೆಯನ್ನು ಪ್ರತಿಷ್ಟಿತ ರಾಜಕೀಯ ಕಾಳಗ ಎಂದು ಕರೆಯಲಾಗಿತ್ತು. ಈ ಪುರಸಭಾ ಪಾಲಿಕೆಗಳಲ್ಲಿ ಆಡಳಿತಾರೂಢ ಮೈತ್ರಿಯು ಸೋಲನ್ನು ಅನುಭವಿಸಿದೆ. ಅಲ್ಲದೆ, ಉಪಮುಖ್ಯಮಂತ್ರಿ ದುಶ್ಯಂತಯ್‌ ಚೌತಲಾ ನೇತೃತ್ವದ ಜನ್ನಾಯಕ್ ಜನತಾ ಪಕ್ಷ (ಜೆಜೆಪಿ)ಯು ಪ್ರಾಬಲ್ಯ ಹೊಂದಿದ್ದ ಹಿಸಾರ್‌ನ ಉಕಲಾನಾ ಮತ್ತು ರೇವಾರಿಯ ಧರುಹೆರಾದಲ್ಲಿ ಸೋಲನ್ನು ಅನುಭವಿಸಿದೆ.

ಕಾಂಗ್ರೆಸ್ ಸುಮಾರು 14,000 ಮತಗಳ ಅಂತರದಿಂದ ಸೋನಿಪತ್ ಗೆದ್ದಿತು. ನಿಖಿಲ್ ಮದನ್ ಸೋನಿಪತ್‌ನ ಮೊದಲ ಮೇಯರ್ ಆಗಲಿದ್ದಾರೆ.

“ಸೋನಿಪತ್ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಅಂತರದಿಂದ ಜಯಗಳಿಸಿದೆ. ಕಾಂಗ್ರೆಸ್: 72,111. ಬಿಜೆಪಿ: 58,300. (ಸೋನಿಪತ್ ಸಿಂಗು ಗಡಿಯ ಅಂಚಿನಲ್ಲಿಯೇ ಇದೆ. ಅಲ್ಲದೆ, ಹರಿಯಾಣ ಮತ್ತು ಯುಪಿಯಲ್ಲಿ ರೈತ ಆಂದೋಲನದ ಕೇಂದ್ರಬಿಂದುವಾಗಿದೆ.)

ಇದನ್ನೂ ಓದಿ: BJPಗೆ ಉತ್ತರದಲ್ಲಿ JDU, ದಕ್ಷಿಣದಲ್ಲಿ AIADMK ಖಡಕ್‌ ಎಚ್ಚರಿಕೆ ನೀಡಿವೆ: ಕಾರಣವೇನು ಗೊತ್ತಾ?

ಅಂಬಾಲಾದಲ್ಲಿ, ಹರಿಯಾಣ ಜನಚೇತನ ಪಕ್ಷದ ಶಕ್ತಿ ರಾಣಿ ಶರ್ಮಾ ಅವರು 8,000 ಮತಗಳಿಂದ ಜಯಗಳಿಸಿದ್ದು, ಮೇಯರ್ ಆಗಲಿದ್ದಾರೆ.

ಪಂಚಕುಲದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ.  ಬಲವಾದ ನೆಲೆ ಹೊಂದಿದ್ದ ಬಿಜೆಪಿಯ ಮಿತ್ರಪಕ್ಷ ಜೆಜೆಪಿ, ರೇವಾರಿಯ ಧರುಹೆರಾ ಮತ್ತು ಹಿಸಾರ್‌ನ ಉಕ್ಲಾನಾದಲ್ಲಿ ಸೋತಿದೆ.

ಅಂಬಾಲಾ, ಪಂಚಕುಲ, ಸೋನಿಪತ್, ರೇವಾರಿಯ ಧರುಹೆರಾ, ರೋಹ್ಟಕ್ನ ಸಂಪ ಮತ್ತು ಹಿಸಾರ್‌ನ ಉಕ್ಲಾನಾದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಭಾನುವಾರ ನಡೆದಿತ್ತು. ಮತ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿತ್ತು.

ಕಳೆದ ತಿಂಗಳು, ರೈತರು ದೆಹಲಿಗೆ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದ ಸಂದರ್ಭದಲ್ಲಿ ಹರಿಯಾಣದ ಸಿಎಂ ಮನೋಹರ್ ಲಾಲ್ ಖಟ್ಟರ್ ಸರ್ಕಾರವು ರೈತರ ಮೇಲೆ ನೀರಿನ ಫಿರಂಗಿಗಳನ್ನು ಮತ್ತು ಲಾಠಿಚಾರ್ಜ್‌ ದಾಳಿ ಮಾಡಿತ್ತು. ಈ ಕಾರಣಕ್ಕಾಗಿ ದೇಶಾದ್ಯಂತ ಟೀಕೆಗೆ ಗುರಿಯಾಗಿತ್ತು.

ಹೊಸ ಕೃಷಿ ಕಾನೂನುಗಳ ವಿರುದ್ಧದ ರೈತರ ಅಸಮಾಧಾನವೇ ಬಿಜೆಪಿಯ ಸೋಲಿಗೆ ಕಾರಣ ಎಂದು ಪ್ರತಿಸ್ಪರ್ಧಿ ಕಾಂಗ್ರೆಸ್ ಹೇಳಿದೆ.


ಇದನ್ನೂ ಓದಿ: BJP ಮತ್ತು JDS ವಿಲೀನವಲ್ಲದ ಹೊಂದಾಣಿಕೆ BJPಗೆ ಹೆಚ್ಚು ಲಾಭ: ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights