BJP ಮುಕ್ತವಾಗುತ್ತಿವೆ ಸ್ಥಳೀಯ ಸಂಸ್ಥೆಗಳು; ಆಂಧ್ರದ 3,221 ಪಂಚಾಯತ್‌ ಸ್ಥಾನಗಳಲ್ಲಿ BJP ಗೆದ್ದಿದ್ದು 13 ಮಾತ್ರ!

2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದಿದ್ದ ಬಿಜೆಪಿಗೆ ಇದೀಗ ಎಲ್ಲಾ ರಾಜ್ಯಗಳ ಸ್ಥಳೀಯ ಚುನಾವಣೆಗಳಲ್ಲೂ ಮುಖಭಂಗವಾಗುತ್ತಿದೆ. ಕೃಷಿ ಕಾಯ್ದೆಗಳು ಅಂಗೀಕಾರಗೊಂಡ ನಂತರ ನಡೆಯುತ್ತಿರುವ ರೈತ ಹೋರಾಟ ಸಾಕಷ್ಟು ರಾಜ್ಯಗಳ ಸ್ಥಳೀಯ ಚುನಾವಣೆಗಳ ಮೇಲೆ ಪ್ರಭಾವ ಭೀರಿದ್ದು, ಬಿಜೆಪಿ ಸ್ಥಳೀಯ ಸಂಸ್ಥೆಗಳಲ್ಲಿ ಧೂಳಿಪಟವಾಗುತ್ತಿದೆ.

ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್ ಸ್ಥಳೀಯ‌ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿಗೆ, ಆಂಧ್ರಪ್ರದೇಶದಲ್ಲೂ ಅಂತದ್ದೇ ಪರಿಸ್ಥಿತಿ ಎದುರಾಗಿದೆ. ನಿನ್ನೆ (ಶುಕ್ರವಾರ) ಪ್ರಕಟವಾದ ಆಂಧ್ರಪ್ರದೇಶದ ಮೂರನೇ ಹಂತದ ಪಂಚಾಯತಿ ಚುನಾವಣೆಯ ಫಲಿತಾಂಶವು ಬಿಜೆಪಿಗೆ ದಿಕ್ಕು-ದೆಸೆ ಇಲ್ಲದಂತಾಗಿಸಿದೆ.

ಮೂರು ದಿನಗಳ ಹಿಂದೆ ನಡೆದಿದ್ದ 160 ಮಂಡಳಿಗಳ 3,221 ಸ್ಥಾನಗಳ ಪೈಕಿ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷವು 2,291 ಪಂಚಾಯತ್‌ಗಳನ್ನು ಗೆದ್ದಿದ್ದರೆ, ಟಿಡಿಪಿ ಬೆಂಬಲಿಗರು 263 ಹಾಗೂ ಬಿಜೆಪಿ ಕೇವಲ 13 ಸ್ಥಾನಗಳನ್ನಷ್ಟೇ ಗೆದ್ದಿದೆ. ಅಲ್ಲದೆ, ಇತರರು 579 ಸ್ಥಾನಗಳನ್ನು ಗೆದ್ದಿದ್ದಾರೆ.

ಪಂಚಾಯತ್ ರಾಜ್ ಆಯುಕ್ತ ಎಂ.ಗಿರಿಜಾ ಶಂಕರ್ ಮಾತನಾಡಿ, ರಾಜ್ಯದ ಎಲ್ಲಾ 13 ಜಿಲ್ಲೆಗಳಲ್ಲಿ 55.75 ಲಕ್ಷ ಮತದಾರರಲ್ಲಿ 80.71 ರಷ್ಟು ಜನರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 1,977 ಮತಗಟ್ಟೆಗಳು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿದ್ದರೆ, 3,127 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತ್ತು 4,118 ಸೂಕ್ಷ್ಮ ಮತಗಟ್ಟೆಗಳು ಎಂದು ಪರಿಗಣಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪಂಜಾಬ್‌ ಸ್ಥಳೀಯ ಸಂಸ್ಥೆಗಳನ್ನು ಬಾಚಿಕೊಂಡ ಕಾಂಗ್ರೆಸ್‌; ನೆಲೆಯಿಲ್ಲದೆ ಧೂಳಿಪಟವಾದ BJP!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights