Live Budget : ರೈತರಿಗೆ 10 ಸಾವಿರ ಸಹಾಯಧನ : ಪ್ರಮುಖ ಯೋಜನೆಗಳು ಮುಂದುವರಿಕೆ

ರಾಜ್ಯದ ಬಹು ನಿರೀಕ್ಷಿತ ಬಜೆಟ್ ಪತ್ರವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಮಂಡಿಸುತ್ತಿದ್ದು, ರೈತರಿಗೆ ಕೇಂದ್ರದಿಂದ 6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 4 ಸಾವಿರ ಸಹಾಯ ಧನ ನೀಡುವ ಮತ್ತು ಕೃಷಿಗೆ ಶೇ 9.5 ರಷ್ಟು ಅನುದಾನ ಮೀಸಲು ಬಗ್ಗೆ ಪ್ರಸ್ತಾಪಿಸಿದ್ದಾರೆ.

ಹೌದು.. 2020-12 ಬಜೆಟ್ ನಲ್ಲಿ ಪ್ರಮುಖ ಯೋಜನೆಗಳನ್ನು ಮುಂದುವರಿಸಲಾಗಿದೆಭಾಗ್ಯಲಕ್ಷ್ಮಿ ಯೋಜನೆ, ಶಾಲಾ ಮಕ್ಕಳಿಗೆ ಬೈಸಿಕಲ್ ಯೋಜನೆ ಅನೇಕ ಯೋಜನೆಗಳನ್ನು ಮುಂದುವರೆಸುವುದಾಗಿ ಸಿಎಂ ಬಜೆಟ್ ನಲ್ಲಿ ತಿಳಿಸಿದ್ದಾರೆ.

ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ನಿರ್ಧಾರಿಸುವುದಾಗಿ, ಕೃಷಿಗೆ 9.5 ರಷ್ಟು ಅನುದಾನ ಮೀಸಲು, ಹೊಸ ಕೃಷಿ ನೀತಿ ಜಾರಿ,  ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಗೆ 2600 ಮೀಸಲು,

ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ 10 ಸಾವಿರ ರೂ, ವಾರ್ಷಿಕ ನೆರವು, ರೈತರು ಅತಿ ಹೆಚ್ಚು ಬಡ್ಡಿಯಿಂದ ತಪ್ಪಿಸಿಕೊಳ್ಳಲು ಹೊಸ ಕಾರ್ಯಕ್ರಮ, ರೈತರಿಗೆ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್, ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಗಳ ಸ್ಥಾಪನೆ, ರೈತರಿಗೆ ಮನೆಬಾಗಿಲಿಗೆ ಕೀಟನಾಶಕ, ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ, ಸಮಗ್ರ ವರಾಹ ಅಭಿವೃದ್ಧಿ ಯೋಜನೆ, ನೀರಿನಲ್ಲಿ ಕರಗುವ ಗೊಬ್ಬರ ವಿರತಣೆ, ಬಿತ್ತನೆ ಬೀಜ, ರಸಗೊಬ್ಬರ ಸಂಬಂಧಿಸಿ ಹೊಸ ನೀತಿ ಜಾರಿ ಮಾಡುವ ವಿಚಾರಗಳನ್ನ ಪ್ರಸ್ತಾಪಿಸಿದ್ದಾರೆ.

youtube.com/watch?v=YLvAzJr9rB8

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights