ಯುವರಾಜ್, ಹರ್ಭಜನ್ ಸಿಂಗ್ ಮಾತು ಕೇಳಿ ಸಚಿನ್ ತೆಂಡೂಲ್ಕರ್ ಕಾಲಿಗೆ ಬಿದ್ದಿದ್ರಂತೆ ಕೊಹ್ಲಿ!

ಯುವರಾಜ್, ಹರ್ಭಜನ್ ಸಿಂಗ್ ಮಾತು ಕೇಳಿ ಸಚಿನ್ ತೆಂಡೂಲ್ಕರ್ ಕಾಲಿಗೆ ಬಿದ್ದಿದ್ರಂತೆ ವಿರಾಟ್ ಕೊಹ್ಲಿ. ಹೌದು..ಈ ವಿಚಾರವನ್ನು ಸಚಿನ್ ತೆಂಡೂಲ್ಕರ್ ಅವರೇ  ಬಹಿರಂಗಪಡಿಸಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇಷ್ಟಪಡದ ಜನರೇ ಇಲ್ಲ.  ಕ್ರಿಕೆಟ್ ದೇವರಿಗೆ ಕೋಟ್ಯಾಂತರ ಅಭಿಮಾನಿ ಬಳಗವಿದೆ. ಇವರೊಂದಿಗೆ ಜೊತೆ ಸ್ವಲ್ಪ ಸಮಯ ಕಳೆದ್ರೂ ಜೀವನ ಸಾರ್ಥಕ ಎನ್ನುವವರಿದ್ದಾರೆ. ಆದ್ರೆ ಅನೇಕ ಕ್ರಿಕೆಟರ್ಸ್ ಅವ್ರ ಜೊತೆ ಮೈದಾನ , ಡ್ರೆಸ್ಸಿಂಗ್ ರೂಮಿನಲ್ಲಿ ಸಮಯ ಕಳೆದಿದ್ದಾರೆ. ಅವರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಒಬ್ಬರು.

ಸಚಿನ್ ಜೊತೆಗಿರುವಾಗ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್ ಮತ್ತು ಮುನಾಥ್ ಪಟೇಲ್, ವಿರಾಟ ಜೊತೆ ಫ್ರ್ಯಾಂಕ್ ಮಾಡಿದ್ದರಂತೆ. ಆ ತಮಾಷೆ ಸಮಯವನ್ನು ಸಚಿನ್ ತೆಂಡೂಲ್ಕರ್ ಬಹಿರಂಗಪಡಿಸಿದ್ದಾರೆ. ಯುಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿದ ಸಚಿನ್ ತೆಂಡಲ್ಕರ್, 2008ರಲ್ಲಿ ಕೊಹ್ಲಿ ಟೀಂ ಇಂಡಿಯಾ ಸೇರಿದಾಗ ಉಳಿದ ಆಟಗಾರರು ಹೇಗೆ ತಮಾಷೆ ಮಾಡಿದ್ದರು ಎಂಬುದನ್ನು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಕಾಲುಗಳ ಮೇಲೆ ಬಿದ್ದಾಗ ಸಚಿನ್ ಅಚ್ಚರಿಗೊಂಡಿದ್ದರಂತೆ. ಏನು ಮಾಡ್ತಿದ್ದಾರೆಂಬುದು ಅರ್ಥವಾಗ್ಲಿಲ್ಲವಂತೆ . ನೀವು ಹೀಗೆಲ್ಲ ಮಾಡುವ ಅಗತ್ಯವಿಲ್ಲವೆಂದು ಸಚಿನ್ ಹೇಳಿದ್ದರಂತೆ. ಕೊಹ್ಲಿ ಹಿಂದೆ ನಿಂತಿದ್ದ ಯುವರಾಜ್ ಸಿಂಗ್, ಹರ್ಭಜನ ಸಿಂಗ್ ನಗ್ತಿದ್ದರಂತೆ.

ಯುವರಾಜ್, ಹರ್ಭಜನ್ ಸಿಂಗ್, ಕೊಹ್ಲಿಗೆ ಹೀಗೆ ಮಾಡುವಂತೆ ಹೇಳಿದ್ದರಂತೆ. ಸಚಿನ್ ಡ್ರೆಸ್ಸಿಂಗ್ ರೂಮಿಗೆ ಬರ್ತಿದ್ದಂತೆ ಕಾಲಿಗೆ ಬೀಳಬೇಕು. ಇದು ನಮ್ಮ ಪದ್ದತಿ. ಎಲ್ಲರೂ ಇದನ್ನು ಪಾಲಿಸಿದ್ದೇವೆ. ಈಗ ನಿಮ್ಮ ಸರದಿ ಎಂದಿದ್ದರಂತೆ. ಇದನ್ನು ನಂಬಿದ ಕೊಹ್ಲಿ ಸಚಿನ್ ಕಾಲಿಗೆ ಬಿದ್ದಿದ್ದರಂತೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights