ದೇಶವನ್ನು ಕೊರೊನಾ ಮುಕ್ತಗೊಳಿಸೋಣ: ಲಸಿಕೆ ಹಾಕಿಸಿಕೊಂಡ ಪ್ರಧಾನಿ ಮೋದಿ!

ಕೊವಾಕ್ಸಿನ್‌ ವಿತರಣೆ ಆರಂಭವಾದ ಹಲವು ದಿನಗಳ ನಂತರ ಪ್ರಧಾನಿ ಮೋದಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಎರಡನೇ ಹಂತದ ಲಸಿಕೆ ವಿತರಣೆ ಮಾರ್ಚ್‌ 01ರಿಂದ ಆರಂಭವಾಗಿದ್ದು, ಈ ಭಾಗವಾಗಿ ಮೋದಿಯವರೂ ಲಸಿಕೆಯನ್ನು ಹಾಕಿಸಿಕೊಂಡಿದ್ದು, “ಭಾರತವನ್ನು ಕೊರೊನಾ ಮುಕ್ತಗೊಳಿಸೋಣ” ಎಂದು ಟ್ವೀಟ್‌ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, “ಏಮ್ಸ್‌ನಲ್ಲಿ ನನ್ನ ಮೊದಲ ಕೋವಿಡ್‌–19 ಲಸಿಕೆಯ ಡೋಸ್‌ ಹಾಕಿಸಿಕೊಂಡೆ. ಕೋವಿಡ್‌–19 ವಿರುದ್ಧದ ಜಾಗತಿಕ ಹೋರಾಟದಲ್ಲಿ ನಮ್ಮ ವೈದ್ಯರು ಹಾಗೂ ವಿಜ್ಞಾನಿಗಳು ಅಲ್ಪಾವಧಿಯಲ್ಲೇ ನಡೆಸಿದ ಕಾರ್ಯಾಚರಣೆ ಅಸಾಧಾರಣವಾದುದು. ಅರ್ಹರಿರುವ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ. ನಾವೆಲ್ಲರೂ ಜೊತೆಯಾಗಿ ಭಾರತವನ್ನು ಕೋವಿಡ್‌–19 ಮುಕ್ತವಾಗಿಸೋಣ” ಎಂದು ಕರೆ ನೀಡಿದ್ದಾರೆ.

60 ವರ್ಷ ದಾಟಿದವರು ಮತ್ತು 2022ರ ಜನವರಿ 1ಕ್ಕೆ 60 ವರ್ಷ ತುಂಬುವವರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಅರ್ಹರಾಗಿದ್ದಾರೆ. ಬೇರೆ ರೋಗಗಳನ್ನು ಹೊಂದಿರುವ, 2022ರ ಜನವರಿ 1ಕ್ಕೆ 45 ವರ್ಷ ತುಂಬುವವರು ಮತ್ತು ಈಗಾಗಲೇ 45 ದಾಟಿದವರು ಕೂಡ ನೋಂದಣಿಗೆ ಅರ್ಹರು. 20 ಕಾಯಿಲೆಗಳನ್ನು ಆರೋಗ್ಯ ಸಚಿವಾಲಯವು ಪಟ್ಟಿ ಮಾಡಿದೆ. ಲಸಿಕೆ ನೋಂದಣಿಯ ಕೋ–ವಿನ್‌ 2.0 ಆ್ಯಪ್‌ ಅಥವಾ ಪೋರ್ಟಲ್‌ ಸೋಮವಾರ ಬೆಳಿಗ್ಗೆ 9 ಗಂಟೆಗೆ ಸಕ್ರಿಯವಾಗಲಿದೆ.

ಇದನ್ನೂ ಓದಿ: ಬ್ರಿಟಿಷರನ್ನೇ ಭಾರತದಿಂದ ಓಡಿಸಿದವರಿಗೆ BJPಯನ್ನು ಅಧಿಕಾರದಿಂದ ಇಳಿಸುವುದೇ ಕಷ್ಟವಲ್ಲ?: ರಾಹುಲ್‌ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights