ಉದ್ಯೋಗ ಕೇಳಿದ್ದಕ್ಕೆ ಜನರ ಮೇಲೆ ಲಾಠಿಚಾರ್ಜ್‌; ಬಿಜೆಪಿ ಮತಯಾಚನೆಗೆ ಬಂದಾಗ ಇದನ್ನು ನೆನಪಿಸಿಕೊಳ್ಳಿ: ರಾಹುಲ್‌ಗಾಂಧಿ

ಉದ್ಯೋಗ ಸೃಷ್ಟಿ ಮತ್ತು ಉದ್ಯೋಗ ಖಾತ್ರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ವಿಚಾರವಾಗಿ ಬಿಜೆಪಿ ವಿರುದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಘಟನೆಗೆ ಸಂಭದಿಸಿದ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, ಉತ್ತರ ಪ್ರದೇಶ ಸರ್ಕಾರ ಉದ್ಯೋಗ ಕೇಳಿದವರ ಮೇಲೆ ಲಾಠಿ ಚಾರ್ಜ್‌ ನಡೆಸಿದೆ. ಬಿಜೆಪಿ ಮತಯಾಚನೆಗೆ ಬಂದಾಗ ಈ ಘಟನೆಯನ್ನು ಜನರು ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

2019ರ ಉತ್ತರ ಪ್ರದೇಶ ಶಿಕ್ಷಕರ ಅರ್ಹತಾ ಪರೀಕ್ಷೆ ನ್ಯಾಯಯುತವಾಗಿ ನಡೆದಿಲ್ಲ ಎಂದು ಆರೋಪಿಸಿರುವ ಯುವಜನರು ಶನಿವಾರ ಸಂಜೆ ಲಖನೌನಲ್ಲಿ ಮೇಣದಬತ್ತಿ ಹಿಡಿದು ಶಾಂತಿಯುವ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ, ಪ್ರತಿಭಟನಾನಿರತ ಯುವಜನರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ ಎಂದು ವರದಿಯಾಗಿದೆ.

‘ಉದ್ಯೋಗಕ್ಕಾಗಿ ಎದಿರು ನೋಡುತ್ತಿರುವ ಜನರ ಮೇಲೆ ಉತ್ತರ ಪ್ರದೇಶ ಸರ್ಕಾರ ಲಾಠಿಯಿಂದ ಹಲ್ಲೆ ನಡೆಸಿದೆ. ಇದನ್ನು ಬಿಜೆಪಿ ಮತಯಾಚನೆಗೆ ಬಂದಾಗ ಜನರು ನೆನಪಿಸಿಕೊಳ್ಳಬೇಕು’ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಪೂರ್ವ ಭಾಗದಲ್ಲಿ ಜವಾದ್ ಚಂಡಮಾರುತದ ಅಬ್ಬರ; ರಾಜ್ಯದ 21 ಜಿಲ್ಲೆಗಳಲ್ಲಿ ಮತ್ತೆ ಮಳೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights