ಜಾಲಮಂಗಲದ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಕುಮಾರಸ್ವಾಮಿ ‘ತಪ್ಪು ಕಾಣಿಕೆ’ ಯಾತ್ರೆ..

ರಾಮನಗರ ಜಾಲಮಂಗಲದ ಲಕ್ಷ್ಮೀನಾರಾಯಣ ದೇವಾಲಯದಲ್ಲಿಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ‘ತಪ್ಪು ಕಾಣಿಕೆ’ ನೀಡಿ ಪೂಜೆ ಸಲ್ಲಿಸಿದ್ದಾರೆ.

ರಾಮನಗರದಲ್ಲಿ ಮಾಧ್ಯಮದ ಮುಂದೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, “ನಾನು ಮೊದಲ ಬಾರಿಗೆ ರಾಮನಗರ ಜಾಲಮಂಗಲದ ಲಕ್ಷ್ಮೀನಾರಾಯಣ ದೇವಾಲಯಕ್ಕೆ ಬಂದಿದ್ದೆ. ಆಗ ದೇವಾಲಯದ ಆವರಣದಲ್ಲಿರುವಾಗ ಇಲ್ಲಿನ ಜನ ನಾನೇ ಮುಂದಿನ ಸಿಎಂ ಎಂದು ಘೋಷಣೆ ಕೂಗಿದರು. ಆ ಸಮಯದಲ್ಲಿ ನಾನು ನನಗೆ ಯಾವ ಅಧಿಕಾರದ ಆಸೆ ಇಲ್ಲ. ಜನರ ಮನದಲ್ಲಿ ನೆಲೆ ಸಿಕ್ಕರೆ ಸಾಕು ಎಂದಿದ್ದೆ. ಆದರೆ ಈ ಮಣ್ಣಿನ ಆಶೀರ್ವಾದದಿಂದ ನಾನು ಎರಡು ಬಾರಿ ಸಿಎಂ ಆದೆ. ಆದರೆ ಪೂರ್ಣಾವಧಿಯಾಗಿ ಸಿಎಂ ಆಗಿ ಮುಂದುವರೆಯಲಿಲ್ಲ. ಆದ್ದರಿಂದ ನಾನು ಅವತ್ತು ಹೇಳಿದ ಮಾತು ತಪ್ಪಾಯಿತೆನೋ ಎಂದು ನನಗೆ ಅನ್ನಿಸಿದೆ. ಹೀಗಾಗಿ ‘101 ತಪ್ಪು ಕಾಣಿಕೆ’ ಕೊಟ್ಟು ಪೂಜೆ ಸಲ್ಲಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

2004ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದಾಗ ಕುಮಾರಸ್ವಾಮಿ ಜಾಲಮಂಗಲದ ಲಕ್ಷ್ಮೀನಾರಾಯಣ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಈ ವೇಳೆ ಅವರು ತಮಗೆ ಯಾವುದೇ ಅಧಿಕಾರದ ಆಸೆ ಎಲ್ಲ ಎನ್ನುವ ಮಾತನಾಡಿದ್ದರು. ದೇವಾಲಾಯದಲ್ಲಿ ನಿಂತು ತಾವು ಹೇಳಿದ ವಿಚಾರ ತಪ್ಪಾಗಿದ್ದರೆ ಅದಕ್ಕೆ ಕ್ಷಮೆ ಕೇಳಿ ‘ತಪ್ಪು ಕಾಣಿಕೆ’ ನೀಡಿದ್ದೇನೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights