KSRTC ಬಸ್ ಕಂಡಕ್ಟರ್ ನಿಂದ ಮಹಿಳೆ ಜೊತೆ ಅಸಭ್ಯ ವರ್ತನೆ : ವಿಡಿಯೋ ವೈರಲ್

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಹಾಸನ ಮಾರ್ಗದ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ನಿಂದ ಮಹಿಳೆ ಜೊತೆ ಅಸಭ್ಯ ವರ್ತನೆಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಸುದ್ದಿ ಮಾಡಿದೆ.

ಹಾಸನದಿಂದ ಪುತ್ತೂರಿಗೆ ಚಲಿಸುತ್ತಿದ್ದ ಬಸ್ ನಲ್ಲಿ ಕಂಡಕ್ಟರ್ ನಿಂದ ಅನುಚಿತ ವರ್ತನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಸ್ ನ ಸೀಟಿನಲ್ಲಿ ಮಹಿಳೆಯ ಪಕ್ಕದಲ್ಲಿ ಕುಳಿತು ಕಂಡಕ್ಟರ್ ನಿಂದ ಅನುಚಿತ ವರ್ತನೆಯ ವಿಡಿಯೋ ಮಾಡಲಾಗಿದೆ.

ಮಹಿಳೆ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಮಹಿಳೆಯ ಕೈ ಹಿಡಿದುಕೊಂಡು ಅನುಚಿತವಾಗಿ ಕಂಡಕ್ಟರ್ ವರ್ತಿಸಿದ್ದಾನೆ. ಕಂಡಕ್ಟರ್ ನ ಈ ಕೃತ್ಯವನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಸ್ಥಳೀಯರು ಹಾಕಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights