ಕರ್ನಾಟಕ ಮತ್ತು ತಮಿಳುನಾಡು ನಡುವೆ ಸಾಮರಸ್ಯ ಸೇತುವೆಯಂತಿದ್ದ ಕೆ.ಆರ್ ಕೃಷ್ಣಂರಾಜು ನಿಧನ

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಾಮರಸ್ಯದ ಸೇತುವೆಯಂತಿದ್ದ ಕೆ.ಆರ್ ಕೃಷ್ಣಂರಾಜು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಮಾದರಿಯಲ್ಲೇ ಬೆಂಗಳೂರು ಕಲಾಸಿಪಾಳ್ಯದಲ್ಲಿ ಒಂದು ರೂಪಾಯಿಗೆ ಇಡ್ಲಿ ಯೋಜನೆಯನ್ನು ರೂಪಿಸಿದ್ದರು. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು.

ಕೆ ಆರ್ ಕೃಷ್ಣಂರಾಜು ಅವರು ತಮಿಳುನಾಡಿನ ಪ್ರದೇಶಿಕ ಪಕ್ಷ ಅಖಿಲ ಭಾರತ ಅಣ್ಣಾ ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿದ್ದರು.

ಕರ್ನಾಟಕದಲ್ಲಿ ಎಡಿಎಂಕೆ ಪಕ್ಷವು ಬೃಹತ್ ಪ್ರಮಾಣದಲ್ಲಿ ಬೆಳೆಯಲು ಕೃಷ್ಣರಾಜ ಅವರು ಸಂಘಟಿಸಿ ಪಕ್ಷಕ್ಕಾಗಿ ದುಡಿಯುತ್ತಿದ್ದ ಇವರು, ಇತ್ತೀಚಿಗೆ ಕರ್ನಾಟಕ ಅಣ್ಣಾ ಡಿಎಂಕೆ ಪಕ್ಷ ವನ್ನು ಆರಂಭಿಸಿದ್ದರು.

ಕಾವೇರಿ ನದಿ ನೀರಿನ ಹೋರಾಟದ ಸಂದರ್ಭದಲ್ಲಿ ಆಗಿನ ಕರ್ನಾಟಕ ಸರ್ಕಾರದ ಕಾವೇರಿ ನೀರಿನ ಅಭಿಪ್ರಾಯ ಬೆಂಬಲಿಸಿ ಕೆಜಿಎಫ್ ನಿಂದ ಬೆಂಗಳೂರಿನವರೆಗೆ ತಮಿಳರನ್ನು ಒಟ್ಟು ಸೇರಿಸಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಎಂದು ಪಾದಯಾತ್ರೆ ನಡೆಸಿದರು.

ಕರ್ನಾಟಕದಲ್ಲಿ ಇರುವ ತಮಿಳರು ಸಹ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಮನವೊಲಿಸಿ ಪ್ರಪ್ರಥಮವಾಗಿ ತಮಿಳರಿಂದ ಜಯನಗರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದರು…

72 ವರ್ಷದ ಕೆ ಆರ್ ಕೃಷ್ಣಂರಾಜು ಅವರು ಅಮ್ಮನ ಸಾಧನೆಯ ಕ್ರಾಂತಿ ಎಂಬ ಪುಸ್ತಕವನ್ನು ಕನ್ನಡ ಮತ್ತು ತಮಿಳಿನಲ್ಲಿ ಬರೆದಿದ್ದು ತೆಲುಗು , ಇಂಗ್ಲಿಷ್, ಹಿಂದಿ ಭಾಷೆಗಳಿಗೆ ಅನುವಾದಗೊಂಡಿದೆ. ಅಲ್ಲದೆ, ಭಾರತರತ್ನ ಡಾಕ್ಟರ್ ಎಂಜಿಆರ್ ಎಂಬ ಮತ್ತೊಂದು ಪುಸ್ತಕವನ್ನು ಕನ್ನಡದಲ್ಲಿ ಬರೆದಿದ್ದಾರೆ.


ಇದನ್ನೂ ಓದಿ: ಮರ್ಯಾದೆ ಗೇಡು ಹತ್ಯೆಗೆ ಯುವತಿ ಬಲಿ; ಆರೋಪಿಗಳ ರಕ್ಷಣೆಗಿಳಿದ ಪೊಲೀಸರ ಅಮಾನತಿಗೆ ಸಂಘಟನೆಗಳ ಆಗ್ರಹ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights