ಜೆಡಿಎಸ್ ತೊರೆದ ಮಾಜಿ ಶಾಸಕ ಕೋನರೆಡ್ಡಿ; ಕಾಂಗ್ರೆಸ್ ಸೇರುವ ಸುಳಿವು!

ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಗೆಲ್ಲುವ ವಿಶ್ವಾಸವಿಲ್ಲ. ಪಕ್ಷದ ನಾಯಕ ಹೆಚ್‌ಡಿ ಕುಮಾರಸ್ವಾಮಿ ಅವರ ಮೇಲೆ‌ ವಿಶ್ವಾಸವೂ ಇಲ್ಲ ಎಂದು ಹೇಳಿರುವ ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ ಅವರು ಜೆಡಿಎಸ್ ತೊರೆದಿದ್ದಾರೆ. ಅವರು ಕಾಂಗ್ರೆಸ್ ಸೇರುವುದಾಗಿ ಸುಳಿವು ನೀಡಿದ್ದಾರೆ. ಅಲ್ಲದೆ, 2023ರ ಚುನಾವಣೆಯಲ್ಲಿಯೂ ಸ್ಪರ್ಧಿಸುವುದಾಗಿ ತಿಳಸಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಕೋನರೆಡ್ಡಿ ಅವರ ಪ್ರಭಾವವಿತ್ತು. ಆದರೆ, ಈಗ ಅವರು ಜೆಡಿಎಸ್ ತೊರೆದಿರುವುದರಿಂದ, ಪಕ್ಷಕ್ಕೆ ಹೊಡೆತ ಬೀಳಲಿದೆ, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಮುಖಂಡರ ನಿರ್ಲಕ್ಷ್ಯ ಮತ್ತು ಹಾಗೂ ಸರಿಯಾದ ರೀತಿಯ ಬೆಂಬಲ ನೀಡದ‌ಕ ಕಾರಣದಿಂದಾಗಿ ಪಕ್ಷ ತೊರೆದಿರುವುದಾಗಿ ಅವರು ಹೇಳಿದ್ದಾರೆ.

ತಮ್ಮ ಬೆಂಬಲಿಗರ ಸಲಹೆ ಮೇರೆಗೆ ತಾವು ಕಾಂಗ್ರೆಸ್ ಸೇರುತ್ತಿರುವುದಾಗಿ ಕೋನರೆಡ್ಡಿ ತಿಳಿಸಿದ್ದಾರೆ.

2023ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಸೋಲುವ ಭೀತಿ ಕೋನರಡ್ಡಿ ಅವರಲ್ಲಿದೆ. ಇದರೊಂದಿಗೆ ಮಾಜಿ ಸಿಎಂ ಕುಮಾರಸ್ವಾಮಿ ಜತೆ ವಿಶ್ವಾಸದ ಸಮಸ್ಯೆ ಇದೆ’ ಎಂದು ಧಾರವಾಡದ ಜೆಡಿಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

‘ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣೆಯಲ್ಲಿ ಜೆಡಿಎಸ್ ಉತ್ತಮ ಸಾಧನೆ ಮಾಡದಿದ್ದಾಗ, ಅದರಲ್ಲೂ ಇತ್ತೀಚೆಗೆ ನಡೆದ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಸೋಲಿನ ನಂತರ, ಕೋನರಡ್ಡಿ ಸೇರಿದಂತೆ ಹಲವಾರು ನಾಯಕರು ಜೆಡಿಎಸ್ ನಿಂದ ಹೊರಹೋಗಲು ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹುಬ್ಬಳ್ಳಿ-ಧಾರವಾಡ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ.

ಅವರನ್ನು ಹೊರಟ್ಟಿ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಪಕ್ಷ ಬಿಡದಂತೆ ಮನವೊಲಿಸಲು ಯತ್ನಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights