ಕೊಡಗು: ಒಂದೇ ಗ್ರಾಮದ 33 ಜನರಿಗೆ ಕೊರೊನಾ; ಗ್ರಾಮವೇ ಸೀಲ್‌ಡೌನ್‌!

ಕೊಡಗು ಜಿಲ್ಲೆಯಲ್ಲಿರುವ ಗ್ರಾಮವೊಂದರಲ್ಲಿ ಸುಮಾರು 33 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅಲ್ಲಿಯ ಜಿಲ್ಲಾಡಳಿತ ಇಡೀ ಗ್ರಾಮವನ್ನೇ ಸೀಲ್‌ಡೌನ್‌ ಮಾಡಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಚೂರಿಯಾಲ್ ನಲ್ಲಿ 34 ಮನೆಗಳಿವೆ. ಆಗ್ರಾಮದಲ್ಲಿ ವಾಸಿಸುತ್ತಿರುವವರ ಪೈಕಿ 33 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.

ಕೆದಮುಳ್ಳೂರು ಗ್ರಾಮದಲ್ಲಿನ ಚೂರಿಯಾಲ್ ನಲ್ಲಿ ಕಳೆದ ವಾರ ಜಾತ್ರೆ ನಡೆದಿತ್ತು. ಹೀಗಾಗಿ ಅಲ್ಲಿಗೆ ವಿವಿಧ ಹಳ್ಳಿಗಳ ಜನರು ಬಂದು ಹೋಗಿದ್ದಾರೆ. ಇದರಿಂದಾಗಿ ಹಳ್ಳಿಗರಿಗೆ ಸೋಂಕು ಹರಡಿದೆ ಎಂದು ಹೇಳಲಾಗಿದೆ.

ಸದ್ಯ ಗ್ರಾಮ ಸೀಲ್‌ಡೌನ್‌ ಅಗಿದ್ದು, ಗ್ರಾಮಕ್ಕೆ ಹೊರಗಿನಿಂದ ಯಾರಿಗೂ ಪ್ರವೇಶವಿಲ್ಲ. ಅಂತೆಯೇ ಗ್ರಾಮದಲ್ಲಿರುವ ಯಾರೂ ಕೂಡ ಹೊರ ಹೋಗುವಂತಿಲ್ಲ ಎಂದು ಹೇಳಲಾಗಿದೆ. ಆದರೆ, ಗ್ರಾಮವು ಸೀಲ್‌ಡೌನ್‌ ಆಗಿರುವುದರಿಂದಾಗಿ ಅಗತ್ಯ ವಸ್ತುಗಳು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಗತ್ಯ ವಸ್ತುಗಳನ್ನು ಪೂರೈಸುವಂತೆ ಮನವಿ ಮಾಡಿದ್ದಾರೆ. ಗ್ರಾಮಸ್ಥರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿದೆ.

ಇದನ್ನೂ ಓದಿ: ಸಂದರ್ಶನ: ಸಲಹಾ ಸಮಿತಿ ಮಾತು ಕೇಳದೇ ಎಡವಿತು ಸರ್ಕಾರ; ತಪ್ಪೊಪ್ಪಿಕೊಂಡ ಸಚಿವ ಸುಧಾಕರ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights