ಇನ್ಶುರೆನ್ಸ್‌ ಹಣಕ್ಕಾಗಿ ಪತ್ನಿ ಮತ್ತು ಮಕ್ಕಳನ್ನೇ ಕೊಂದ ದುಷ್ಟ; 212 ವರ್ಷ ಜೈಲು ಶಿಕ್ಷೆ!

ಜೀವ ವಿಮಾ (ಇನ್ಶುರೆನ್ಸ್ ಪಾಲಿಸಿ) ಹಣವನ್ನು ಪಡೆಯುವುದಕ್ಕಾಗಿ ತನ್ನ  ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದ ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬನಿಗೆ 212 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಅಲ್ಲಿನ ಕೋರ್ಟ್‌ ತೀರ್ಪು ನೀಡಿದೆ.

ಇನ್ಶುರೆನ್ಸ್‌ ಕಂಪನಿಯಲ್ಲಿ 3 ಮಿಲಿಯನ್ ಡಾಲರ್ ಮೊತ್ತದ ಪಾಲಿಸಿ ಮಾಡಿಸಿದ್ದ 45 ವರ್ಷದ ಅಲಿ ಎಫ್. ಎಲ್ಮೆಜಾಯೆನ್ ಎಂಬಾತ, ಆ ಹಣವನ್ನು ಪಡೆದುಕೊಳ್ಳುವ ಉದ್ದೇಶದಿಂದ 2015ರಲ್ಲಿ ಲಾಸ್ ಏಂಜಲೀಸ್ ಬಂದರಿನಲ್ಲಿ ತನ್ನ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಕರೆದೊಯ್ದು ಕಾರನ್ನು ಕೆರೆಗೆ ಹಾರಿಸಿದ್ದ, ಈ ವೇಳೆ ಈಜು ಬಾರದ ಆತನ ಪತ್ನಿ ಮತ್ತು ಮಕ್ಕಳು ಸಾವನ್ನಪ್ಪಿದ್ದರು.

ನಂತರ, ಕಾರು ಅಪಘಾತಕ್ಕೀಡಾಗಿ ನೀರಿನಲ್ಲಿ ಮುಳುಗಿತು, ಈ ವೇಳೆ ತನ್ನ ಪತ್ನಿ ಮತ್ತು ಮಕ್ಕಳು ಸಾವನ್ನಪ್ಪಿದರು. ತಾನು ಮಾತ್ರ ಬದುಕಿ ಉಳಿದೆ ಎಂದು ಹೇಳಿ, ಪಾಲಿಸಿ ಕಂಪನಿಯಿಂದ ಹಣವನ್ನೂ ಪಡೆದುಕೊಂಡಿದ್ದ.

ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಈತನೆ ಕೊಲೆ ಮಾಡಿದ್ದಾನೆ ಎಂಬುದನ್ನು ಪತ್ತೆ ಹಚ್ಚಿದ್ದರು. ಆತನ ವಿರುದ್ಧ ಕೊಲೆ ಪ್ರಕರಣ, ಅಂಚೆ ವಂಚನೆ, ಮೇಲ್ ವಂಚನೆ, ಗುರುತಿನ ಕಳ್ಳತನ, ಮತ್ತು ಮನಿ ಲಾಂಡರಿಂಗ್ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.

ಗುರುವಾರ, ಪ್ರಕರಣಗಳ ವಿಚಾರಣೆ ನಡೆಸಿರುವ ಲಾಸ್ ಏಂಜಲೀಸ್‌ನ ಜಿಲ್ಲಾ ನ್ಯಾಯಾಧೀಶ ಜಾನ್ ಎಫ್. ವಾಲ್ಟರ್, ಇದು ದುಷ್ಟ ಕೃತ್ಯವೆಂದು ಕರೆದಿದ್ದು, ಆತನಿಗೆ ಎರಡು ಶತಮಾನಗಳ (212 ವರ್ಷ) ಕಾಲ ಜೈಲಿ ಶಿಕ್ಷೆ ವಿಧಿಸಿದ್ದಾರೆ.

ಅಲ್ಲದೆ, ಇನ್ಷುರೆನ್ಸ್ ಕಂಪನಿಗೆ ಮೋಸ ಮಾಡಿದ್ದಕ್ಕೆ 2.61 ಲಕ್ಷ ಡಾಲರ್ ಪರಿಹಾರವನ್ನು ನೀಡಬೇಕೆಂದು ಆದೇಶಿಸಲಾಗಿದೆ.

ಇದನ್ನೂ ಓದಿ: ಜಗತ್ತಿನಲ್ಲಿ 93.1 ಕೋಟಿ ಟನ್ ಆಹಾರ ಪೋಲು; ಹಸಿವಿನಿಂದ ಬಳಲುತ್ತಿರುವ ಜನಸಂಖ್ಯೆ ಎಷ್ಟು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights