ಇಂದಿನಿಂದ ರಾಜ್ಯಾದ್ಯಂತ ಖಡಕ್ ರೂಲ್ಸ್ : ಸುಖಾಸುಮ್ಮನೆ ಹೊರಬಂದ್ರೆ ಲಾಠಿ ಏಟು ಪಕ್ಕ..!

ಲಾಕ್ ಡೌನ್ ಮಾಡಿದರೂ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದಿನಿಂದ ಖಡಕ್ ರೂಲ್ಸ್ ಜಾರಿಗೆ ಮಾಡಿದೆ.

ಕೊರೊನಾ ತಡೆಗೆ ರಾಜ್ಯ ಸರ್ಕಾರ ಇಂದಿನಿಂದ 14 ದಿನಗಳ ವರೆಗೂ ಖಡಕ್ ರೂಲ್ಸ್ ನ್ನು ಜನ ಫಾಲೋ ಮಾಡಬೇಕು. ಸುಖಾ ಸುಮ್ಮನೆ ಮನೆ ಬಿಟ್ಟು ಹೊರಬಂದರೆ ಲಾಠಿ ಏಟು ಪಕ್ಕ.

ಬೆಳಗ್ಗೆ 6 ಗಂಟೆಯಿಂದಲೇ ಕಠಿಣ ಲಾಕ್ ಡೌನ್ ಜಾರಿಯಾಗಿದ್ದು, ಬೆಳಿಗ್ಗೆ ಆಗುತ್ತಿದ್ದಂತೆ ರಸ್ತೆಗಿಳಿಯುತ್ತಿದ್ದ ಜನರನ್ನು ತಡೆಯಲ್ಲಿ ಬೆಳ್ಳಂಬೆಳಿಗ್ಗೆ ಖಾಕಿ ಟೀಮ್ ರಸ್ತೆಗಳಿದಿದೆ. ಗಲ್ಲಿ ಗಲ್ಲಿಯಲ್ಲಿ ನಿಂತಿರುವ ಪೊಲೀಸರು ಪೋಲಿ ಪುಂಡರಿಗೆ ಲಾಠಿ ಏಟು ಕೊಡುತ್ತಿದ್ದಾರೆ. ಸ್ವಲ್ಪವೂ ಸಡಿಲಿಕೆ ಇಲ್ಲದ ಅಸ್ತ್ರ ಜಾರಿಯಾಗಿದೆ. 14 ದಿನಗಳ ಕಾಲ ಇಡೀ ಕರುನಾಡಿಗೇ ಕರುನಾಡೇ ಕಂಪ್ಲೀಟ್ ಲಾಕ್ ಆಗಿರಲಿದೆ.

ಇಷ್ಟು ದಿನ ನಾನಾ ನೆಪಗಳನ್ನು ಒಡ್ಡಿ ಪೊಲೀಸರಿಗೆ ಯಾಮಾರಿಸುತ್ತಿದ್ದ ಜನ ಸದ್ಯ ಮನೆಯಲ್ಲಿ ಲಾಕ್ ಆದ್ರೆ ಒಳ್ಳೆದು. ಇಲ್ಲಂದ್ರೆ ಕಾರಣಗಳಿಲ್ಲದೇ ಹೊರಬಂದರೆ ಅರೆಸ್ಟ್ ಆಗೋದು ಪಕ್ಕಾ. ವಾಹನಗಳಿಂದ ಓಡಾಟ ನಡೆಸಿದ್ರೆ ಲಾಠಿ ರುಚಿ ನೋಡಬೇಕಾಗುತ್ತದೆ.

ಈ ಬಗ್ಗೆ ಸ್ವತ: ಬೆಂಗಳೂರು ಪೊಲೀಸ್ ಆಯುಕ್ತರೇ ಟ್ವೀಟ್ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights