‘ಕೆಜಿಎಫ್-2’ ಬಿಡುಗಡೆ ದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಬೇಕು; ಮೋದಿಗೆ ಪತ್ರ ಬರೆದ ಯಶ್‌ ಅಭಿಮಾನಿಗಳು

ಕನ್ನಡ ಚಿತ್ರರಂಗ ಸ್ಟಾರ್‌ ನಟ ಯಶ್ ಅಭಿನಯದ ಕೆಜಿಎಫ್‌-2 ಸಿನಿಮಾ  16 ಜುಲೈ 2021 ರಂದು ಬಿಡುಗಡೆಯಾಗಲಿದೆ.  ಅಂದು ರಾಷ್ಟ್ರೀಯ ರಜಾದಿನವೆಂದು ಘೋಷಿಸಿ, ದೇಶಾದ್ಯಂತ ರಜೆ ನೀಡಬೇಕು ಎಂದು ಕೋರಿ ಯಶ್‌ ಅಭಿಮಾನಿಗಳು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್-2 ರ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ನಿರ್ದೇಶಕ ಪ್ರಶಾಂತ್‌ ನೀಲ್‌, ಸಿನಿಮಾ  ಜುಲೈ 16, 2021ರಂದು ವಿಶ್ವಪ್ಯಾಪಿ ಬಿಡುಗಡೆಯಾಗಲಿದೆ ಎಂದು ಪೋಸ್ಟ್‌ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಭ್ರಮದಲ್ಲಿರುವ ಯಶ್‌ ಅಭಿಮಾನಿಗಳು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕೆಜಿಎಫ್-2 ಬಿಡುಗಡೆಯ ದಿನ ಜುಲೈ 16 ರಂದು ರಾಷ್ಟ್ರವ್ಯಾಪಿ ರಜೆ ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.

ಪತ್ರವು ಹೀಗಿದೆ: “ನಾವೆಲ್ಲರೂ ತಿಳಿದಿರುವಂತೆ ಯಶ್ ಅವರ ಕೆಜಿಎಫ್-2 ಶುಕ್ರವಾರ 16/7/2021 ರಂದು ಬಿಡುಗಡೆಯಾಗುತ್ತಿದೆ. ಸಿನಿಮಾಕ್ಕಾಗಿ ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಆದ್ದರಿಂದ ಆ ದಿನದಂದು ರಾಷ್ಟ್ರೀಯ ರಜಾದಿನವನ್ನು ಘೋಷಿಸಲು ನಾವು ವಿನಂತಿಸುತ್ತಿದ್ದೇವೆ. ಇದು ಕೇವಲ ಚಲನಚಿತ್ರವಲ್ಲ ಅದು ನಮ್ಮ ಭಾವನೆ.  ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ” ಎಂದು ಬರೆದಿದ್ದಾರೆ.

ಯಶ್‌ ಅಭಿಮಾನಿ ಬರೆದಿರುವ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಹಲವರು ಪತ್ರವನ್ನು ಹಂಚಿಕೊಂಡು ಜುಲೈ 16ರಂದು ರಜೆ ರಾಷ್ಟ್ರಾದ್ಯಂತ ರಜೆ ನೀಡುವಂತೆ ಮನವಿ ಮಾಡಿದ್ದಾರೆ.

Read Also: ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ; ನೀಮ್ಮ ಮೌಲ್ಯ ಪೊಳ್ಳಾಗಿದೆ: ತಾಪ್ಸಿ ಪನ್ನು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights