ಬೆಂಗಳೂರು ಕೆಸಿ ಜನರಲ್ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಖಾಲಿ : ಜನರ ಪರದಾಟ!

ಬೆಂಗಳೂರು ಕೆಸಿ ಜನರಲ್ ಆಸ್ಪತ್ರೆ ಮುಂದೆ ಜನ ಕೊರೊನಾ ವ್ಯಾಕ್ಸಿನ್ ಗಾಗಿ ಕಾದು ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಬೆಳ್ಳಂಬೆಳಿಗ್ಗೆ ಆಸ್ಪತ್ರೆ ಎದುರು ಕಾದು ನಿಂತ ನೂರಾರು ಜನರಿಗೆ ನಿರಾಸೆಯಾಗಿದೆ. ಕೊವ್ಯಾಕ್ಸಿನ್ ಇಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಬೋರ್ಡ್ ಹಾಕಿದ್ದಾರೆ.

ಎಂದಿನಂತೆ ಜನ ಇಂದು ಕೂಡ ನೂರಾರು ಜನ ವ್ಯಾಕ್ಸಿನ್ ಗಾಗಿ ಬೆಳಿಗ್ಗೆಯಿಂದ ಕಾಯುತ್ತಿದ್ದರು. ಕೊವ್ಯಾಕ್ಸಿನ್ ಇಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಬೋರ್ಡ್ ಹಾಕಿದ್ದಾರೆ. ಕೋವಿಶೀಲ್ಡ್ ಆದರೂ ಪಡೆಯೋಣ ಎಂದು ನಿಂತವರನ್ನೂ ವಾಪಸ್ಸು ಕಳುಹಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ಜನರ ಮನವರಿಕೆ ಮಾಡುತ್ತಿದ್ದಾರೆ. ಪ್ರಶ್ನಿಸಿದವರಿಗೆ 45 ವರ್ಷದ ಮೇಲ್ಮಟ್ಟವರಿಗೆ ಸಿಗುತ್ತದೆ ಅದಕ್ಕಿಂತ ಕೆಳಗಿನವರಿಗೆ ಸಿಗೋದಿಲ್ಲ ಎಂದು ಹೇಳುತ್ತಿದ್ದಾರೆ.

ಹೀಗಾಗಿ ಸರ್ಕಾರ ಹೇಳುವುದಕ್ಕೂ ಗ್ರೌಂಡ್ ರಿಪೋಟ್ ಗೂ ತಾಳೇನೇ ಆಗುತ್ತಿಲ್ಲ. ಹಿರಿಯರು ವ್ಯಾಕ್ಸಿನ್ ಗಾಗಿ ಬೆಳಿಗ್ಗೆಯಿಂದಲೇ ಕಾದು ನಿಂತಿರುತ್ತಾರೆ. ಆದರೆ ಅವರು ದಿನನಿತ್ಯ ಕ್ಯೂ ನಲ್ಲಿ ನಿಂತು ವ್ಯಾಕ್ಸಿನ್ ಪಡೆಯದೇ ವಾಪಸ್ಸು ಹೋಗುತ್ತಿದ್ದಾರೆ. ವ್ಯಾಕ್ಸಿನ್ ಸಮಸ್ಯೆ ಇಲ್ಲ ಎಂದು ಹೇಳುವ ಸರ್ಕಾರದ ವಿರುದ್ಧ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವ್ಯಾಕ್ಸಿನ್ ಬಗ್ಗೆ ಸರ್ಕಾರ ಆಗಲಿ ಆಸ್ಪತ್ರೆಗಳಾಗಲಿ ಸರಿಯಾದ ಮಾಹಿತಿ ನೀಡಬೇಕು. ಪ್ರತಿನಿತ್ಯ ಇಂತಿಷ್ಟು ಜನರಿಗೆ ಮಾತ್ರ ವ್ಯಾಕ್ಸಿನ್ ಕೊಡುತ್ತೇವೆ ಅಥವಾ ವ್ಯಾಕ್ಸಿನ್ ಇಲ್ಲ ಅಂತನಾದ್ರೂ ಹೇಳಿದರೆ ನಾವು ಪ್ರತಿನಿತ್ಯ ಬಂದು ಕಾಯುವುದಾದರೂ ತಪ್ಪುತ್ತದೆ ಎಂದು ಜನ ಮನವಿ ಮಾಡಿಕೊಂಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights