ಜಯಲಲಿತಾ ಸಾವಿಗೆ ಕರುಣಾನಿಧಿ ಮತ್ತು ಸ್ಟಾಲಿನ್‌ ಕಾರಣ: ತಮಿಳು ಸಿಎಂ ಪಳನಿಸ್ವಾಮಿ ಆರೋಪ

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಸಾವಿಗೆ ಡಿಎಂಕೆ ನಾಯಕರಾಗಿದ್ದ ಮಾಜಿ ಸಿಎಂ ದಿ. ಕರುಣಾನಿಧಿ ಮತ್ತು ಪಕ್ಷದ ಹಾಲಿ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಕಾರಣ ಎಂದು ತಮಿಳು ಸಿಎಂ ಕೆ ಪಳನಿಸ್ವಾಮಿ ಆರೋಪ ಮಾಡಿದ್ದಾರೆ.

ಜಯಲಲಿತಾ ಅವರ ಮೇಲೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಳ್ಳು ಆರೋಪ ಮಾಡಲಾಗಿತ್ತು. ಅವರು 2015ರಲ್ಲಿ ಎಲ್ಲಾ ಆರೋಪಗಳಿಂದ ಖುಲಾಸೆಗೊಂಡಿದ್ದರು. ಅದರೆ, ಅವರ ವಿರುದ್ದ ಡಿಎಂಕೆ ಮತ್ತೆ ಮೇಲ್ಮನವಿ ಸಲ್ಲಿಸಿದ್ದರಿಂದಾಗಿ ಜಯಲಲಿತಾ ಖಿನ್ನತೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ಸಾವನ್ನಪ್ಪಿದರು ಎಂದು ಪಳನಿಸ್ವಾಮಿ ಆರೋಪಿಸಿದ್ದಾರೆ.

ಜಯಲಲಿತಾ ಅವರ ಸಾವಿಗೆ ಯಾರು ಕಾರಣ ಎಂದು ರಾಜ್ಯದ ಜನರಿಗೆ ಅರಿವಾಗಿದೆ. ಅವರ ಸಾವಿಗೆ ಕಾರಣವಾದವರನ್ನು ದೇವರು ಖಂಡಿತಾ ಶಿಕ್ಷಿಸುತ್ತಾನೆ ಎಂದು ಪಳಿನಿಸ್ವಾಮಿ ಹೇಳಿದ್ದಾರೆ.

ಜಯಲಲಿತಾ ಅವರ ಸಾವಿನ ಪ್ರಕರಣವನ್ನು ಅರುಮುಗಸ್ವಾಮಿ ಅವರ ನೇತೃತ್ವದ ಆಯೋಗವು ತನಿಖೆ ನಡೆಸುತ್ತಿದೆ. ತಮಿಳುನಾಡಿನಲ್ಲಿ ಡಿಎಂಕಿ ಅಧಿಕಾರಕ್ಕೆ ಬಂದರೆ, ತನಿಖೆಯನ್ನು ಚುರುಕುಗೊಳಿಸುತ್ತೇವೆ ಎಂದು ಎಂ.ಕೆ ಸ್ಟಾಲಿನ್‌ ಭರವಸೆ ನೀಡಿದ್ದಾರೆ.

ತಮಿಳುನಾಡಿನಲ್ಲಿ ಏಪ್ರಿಲ್‌ 06 ರಂದು ಚುನಾವಣೆ ನಡೆಯಲಿದ್ದು, ಮೇ 02 ರಂದು ಫಲಿತಾಂಶ ಹೊರಬೀಳಲಿದೆ.

ಇದನ್ನೂ ಓದಿ: ತಮಿಳುನಾಡು: ಸಿಎಎ ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಂಡು AIADMK ಅಧಿಕಾರಕ್ಕೆ ಮರಳುತ್ತದೆಯೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights