ಶಸ್ತ್ರಚಿಕಿತ್ಸೆಯ ಬಳಿಕ ಕಮಲ್ ಹಾಸನ್ ಚೆನ್ನೈ ಆಸ್ಪತ್ರೆಯಿಂದ ಡಿಸ್ಚಾರ್ಜ್…!
ಕಮಲ್ ಹಾಸನ್ ಅವರನ್ನು ಇಂದು (ಜನವರಿ 22) ಚೆನ್ನೈನ ರಾಮಚಂದ್ರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಬಲಗಾಲಿನಲ್ಲಿ ಸೋಂಕಿನಿಂದಾಗಿ ಕಮಲ್ ಹಾಸನ್ ಜನವರಿ 19 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಸದ್ಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಕಮಲ್ ಹಾಸನ್ ಕನಿಷ್ಠ ಒಂದು ವಾರ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ಶುಕ್ರವಾರ (ಜನವರಿ 22) ರಾಮಚಂದ್ರ ಆಸ್ಪತ್ರೆಯ ವೈದ್ಯರು ಕಮಲ್ ಹಾಸನ್ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಅವರು ಈಸ್ಟ್ ಕೋಸ್ಟ್ ರಸ್ತೆಯಲ್ಲಿ (ಇಸಿಆರ್) ತಮ್ಮ ಮನೆಗೆ ತೆರಳಲಿದ್ದು, ಅಲ್ಲಿ ಅವರು ಚೇತರಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಅವರು ಚಲನಚಿತ್ರಗಳು ಮತ್ತು ರಾಜಕೀಯದಲ್ಲಿ ಕೆಲಸಕ್ಕೆ ಮರಳಲಿದ್ದಾರೆ.
ಕಮಲ್ ಹಾಸನ್ ಅವರು ಈ ಹಿಂದೆ ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ.ಕಮಲ್ ಹಾಸನ್ ಅವರು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ತಮ್ಮ ಪಕ್ಷದ ಮಕ್ಕಲ್ ನೀಧಿ ಮಾಯಂ ಪರ ಪ್ರಚಾರವನ್ನು ಪುನರಾರಂಭಿಸಲಿದ್ದಾರೆ.
அறுவைச் சிகிச்சை வெற்றிகரமாக முடிந்தது. ஸ்ரீ ராமச்சந்திரா மருத்துவமனை அணியினருக்கு நன்றி. காயம் ஆறும் வரை இணையத்தில் நடமாட்டமும், உங்கள் இதயத்தில் உறவாடலும் தொடரும்.
மக்களின் அன்பே மருந்து. விரைவில் நேரில் சந்திப்போம்.
— Kamal Haasan (@ikamalhaasan) January 19, 2021