ಕಲಬುರ್ಗಿ: ಪಾಲಿಕೆ ಅಧಿಕಾರಕ್ಕೆ ಕುದುರೆ ವ್ಯಾಪಾರ; ಸದಸ್ಯರ ಬೆಲೆ ಒಂದು ಕೋಟಿಗೆ ಏರಿಕೆ!

ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಯಥಾಪ್ರಕಾರ ಬಿಜೆಪಿ ತನ್ನ ಚಾಳಿಯಂತೆ ಕೌನ್ಸಿಲರ್‌ಗಳನ್ನು ಖರೀದಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಅಧಿಕಾರಕ್ಕೇರಲು ಅಗತ್ಯವಿರುವ ಪ್ರಮುಖ ನಾಲ್ಕು ಕೌನ್ಸಿಲರ್ ಗಳ ಬೆಲೆ ಏರಿಕೆಯಾಗುತ್ತಲೇ ಇದ್ದು, ಬುಧವಾರ ಪ್ರತಿ ಸೀಟಿಗೆ 75 ಲಕ್ಷವಿದ್ದ ಬೆಲೆ ಗುರುವಾರ 1 ಕೋಟಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ನಾಲ್ವರು ಜೆಡಿಎಸ್ ಕೌನ್ಸಿಲರ್‌ಗಳು ಬೆಂಗಳೂರಿನ ಬಳಿಯ ಸುರಕ್ಷಿತ ಸ್ಥಳದಲ್ಲಿ ಉಳಿದುಕೊಂಡಿದ್ದಾರೆ. ಯಾರಿಗೆ ಬೆಂಬಲಿಸಬೇಕು ಎಂಬ ನಿರ್ಧಾರವನ್ನು ಕೌನ್ಸಿಲರ್‌ಗಳಿಗೆ ಬಿಟ್ಟಿದ್ದು  ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಕಾನ್ಸಿಲರ್ ಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಖಚಿತ ಪಡಿಸಿದ್ದಾರೆ. ನಾಲ್ಕು ಮಂದಿ ಜೆಡಿಎಸ್ ಕೌನ್ಸಿಲರ್‌ಗಳಲ್ಲಿ ಇಬ್ಬರು ಮಾಜಿ ಕಾಂಗ್ರೆಸ್ಸಿಗರು, ಒಬ್ಬರು ಮಾಜಿ ಬಿಜೆಪಿ ಕಾರ್ಯಕರ್ತರು, ಮತ್ತು ನಾಲ್ಕನೆಯವರು ಜೆಡಿಎಸ್‌ನವರಾಗಿದ್ದಾರೆ.

ಕೋಮುವಾದಿ ಶಕ್ತಿಗಳನ್ನು ದೂರವಿಡುವ ಸಲುವಾಗಿ ಕುಮಾರಸ್ವಾಮಿ ಅವರ ಜೊತೆ ಮಾತನಾಡಿದ್ದೇವೆ. ನಾವು ಬಿಜೆಪಿಯೊಂದಿಗೆ ರೇಸ್‌ನಲ್ಲಿಲ್ಲ ಕಾನೂನು ಮೂಲಕ ಅನುಮತಿಸುವ ವಿಧಾನದಲ್ಲಿ ನಾವು ಹೋಗುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಲಬುರಗಿ ಜಿಲ್ಲೆಗೆ ಉತ್ತಮ ಅಭಿವೃದ್ಧಿ ಮಾಡಲು ನಾವು ಬೆಂಬಲ ಕೇಳುತ್ತಿದ್ದೇವೆ.

ಮೇಯರ್ ಚುನಾವಣೆಗೆ ಇನ್ನೂ ದಿನಾಂಕ ಇನ್ನೂ ಘೋಷಣೆಯಾಗಿಲ್ಲ, ಈಗಾಗಲೇ ಬಿಜೆಪಿ ಕಸರತ್ತು ನಡೆಸುತ್ತಿರುವುದನ್ನು ನೋಡಿ ಆಶ್ಚರ್ಯವಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights