ರಮೇಶ್ ಸಿಡಿ ಹಿಂದೆ ‘ಕೈ’ವಾಡ? : ಎಸ್.ಟಿ ಸೋಮಶೇಖರ್ ಹೊಸ ಬಾಂಬ್!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, “ಸಿಡಿ ಮಾಡಿಸಿದ್ದು ಕಾಂಗ್ರೆಸ್ ನವರೇ. ಇನ್ಯಾರು ಮಾಡುತ್ತಾರೆ? ಕಾಂಗ್ರೆಸ್ ಗೆ ತಾಕತ್ತಿದ್ರೆ ನನ್ನ ಹಾಗೂ ರಮೇಶ್ ವಿರುದ್ಧ ಸ್ಪರ್ಧಿಸಲಿ. ಅದನ್ನು ಬಿಟ್ಟು ಸಿಡಿ ರಾಜಕಾರಣ ಬೇಡುವುದು ಅವಶ್ಯಕತೆ ಇರಲಿಲ್ಲ ” ಎಂದು ವಾಗ್ದಾಳಿ ಮಾಡಿದ್ದಾರೆ.

“ರಮೇಶ್ ವಿರುದ್ಧ ಇಂಥಹ ಮನೆಹಾಳು ಕೆಲಸಕ್ಕೆ ಮುಂದಾಗುವುದು ಬೇಕಾಗಿರಲಿಲ್ಲ. ಅವರ ತೇಜೋವಧೆ ಮಾಡಿದ್ದಾರೆ. ತಾಕತ್ತಿದ್ದರೆ ಸ್ಪರ್ಧಿಸಿ” ಎಂದು ಸಚಿವ ಎಸ್ ಟಿ ಸೋಮಶೇಖರ್ ಸವಾಲ್ ಹಾಕಿದ್ದಾರೆ.

ನಾನು 20 ವರ್ಷ ಕಾಂಗ್ರೆಸ್ ನಲ್ಲೇ ಇದ್ದೆ. ಅವರು ಏನ್ ಮಾಡ್ತಾರೆ ಅನ್ನೋದು ನನಗೆ ಗೊತ್ತು. ಹೀಗಾಗಿ ಸಿಡಿ ಬಗ್ಗೆ ಸಿಬಿಐ ತನಿಖೆ ಆಗಲಿ ಆಗ ಸತ್ಯಾಸತ್ಯತೆ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ” ಎಂದು ಸ್ಪೋಟಕ ಆರೋಪ ಮಾಡಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights