ಸಿಡಿ ಹಿಂದೆ ‘ಕೈ’ವಾಡ : ಉಲ್ಟಾ ಹೊಡೆದ ಎಸ್.ಟಿ ಸೋಮಶೇಖರ್…!

ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ರಮೇಶ್ ಸಿಡಿ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ನೇರವಾಗಿ ಆರೋಪ ಮಾಡಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಮಧ್ಯಾಹ್ನದ ವೇಳೆ ಉಲ್ಟಾ ಹೊಡೆದಿದ್ದಾರೆ.

ಸಿಡಿ ಹಿಂದೆ ಕಾಂಗ್ರೆಸ್ ಇದೆ ಎಂದು ಹೇಳಿದ್ದ ಎಸ್.ಟಿ ಸೋಮಶೇಖರ್ ಗೃಹ ಸಚಿವರನ್ನು ಭೇಟಿ ಮಾಡಿದ ಬಳಿಕ ಯೂಟರ್ನ್ ಹೊಡೆದಿದ್ದಾರೆ.

ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸೋಮಖೇಕರ್ ಅವರು, ” ಕಾಂಗ್ರೆಸ್ ರಾಜಕೀಯವಾಗಿ ಆರೋಪ ಮಾಡಲಿ. ಅದನ್ನು ಬಿಟ್ಟು ತೇಜೋವಧೆ ಮಾಡಲಾಗುತ್ತಿದೆ. ಇಲ್ಲದೇ ಇರೋ ಕಥೆ ಕಟ್ಟುವುದಕ್ಕೆ ನಮ್ಮ ವಿರೋಧವಿದೆ. ತಾಕತ್ತಿದ್ದರೆ ರಮೇಶ್ ಹಾಗೂ ನನ್ನ ಜೊತೆ ಸ್ಪರ್ಧೆಗಿಳಿಯಲಿ’ ಎಂದು ಸವಾಲು ಹಾಕಿದ್ದರು.

20 ವರ್ಷ ನಾನು ಕಾಂಗ್ರೆಸ್ ನಲ್ಲಿ ಇದ್ದೆ ಹೀಗಾಗಿ ಕಾಂಗ್ರೆಸ್ ಹೇಗಿದೆ ಎಂದು ನನಗೂ ಗೊತ್ತು. ಕಾಂಗ್ರೆಸ್ ಅನೈತಿಕ ಚಟುವಟಿಕೆಗಳು ನನಗೆ ತಿಳಿದಿದೆ. ಸಿಡಿ ವಿಚಾರ ಸಿಬಿಐ ತನಿಖೆ ಮಾಡಬೇಕು ಎಂದಿದ್ದರು.

ಆದರೆ ಗೃಹ ಸಚಿವರ ಭೇಟಿ ಬಳಿಕ ಸೋಮಶೇಖರ್ ಅವರು ಹೇಳಿದ್ದೇ ಬೇರೆ. ‘ನಾನು ಸಿಡಿಯಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂದು ಹೇಳಿಲ್ಲ. ಇದನ್ನು ಖುದ್ದು ರಮೇಶ್ ಜಾರಕಿಹೊಳಿ ಹೇಳುತ್ತಿದ್ದಾರೆ’ ಎಂದು ದಿಢೀರ್ ಅಂತ ಉಲ್ಟಾ ಹೊಡೆದಿದ್ದಾರೆ. ಈ ರೀತಿ ಗೊಂದಲಮಯವಾದ ಹೇಳಿಕೆ ಕೊಟ್ಟಿದ್ದಾರೆ.

ಹೀಗೆ ಬೆಳಿಗ್ಗೆ ಒಂದು ಮಾತು ಮಧ್ಯಾಹ್ನ ಒಂದು ಮಾತು ಆಡುವುದನ್ನು ನೋಡಿದರೆ ಅನುಮಾನಗಳು ಹುಟ್ಟಿಕೊಂಡಿವೆ. ಸಿಡಿ ತನಿಖೆಯ ಬಗ್ಗೆ ಸದ್ಯ ಸಿಎಂ ಜೊತೆ ಚರ್ಚೆ ನಡೆಯುತ್ತಿದ್ದು, ಚರ್ಚೆ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights