ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್‌ಗೆ ಜ.13 ವರೆಗೆ ನ್ಯಾಯಾಂಗ ಬಂಧನ!

ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಛತ್ತೀಸ್‌ಗಢ ಪೊಲೀಸರು ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಅವರನ್ನು ಬಂಧಿಸಿದ್ದಾರೆ. ರಾಯ್‌ಪುರ ನ್ಯಾಯಾಲಯವು ಕಾಳಿಚರಣ್‌ ಅವರನ್ನು ಜನವರಿ 13 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

“ಪೊಲೀಸ್ ವಿಚಾರಣೆ ಪೂರ್ಣಗೊಂಡ ಕಾರಣ ಪೊಲೀಸರು ಕಾಳಿಚರಣ್ ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅವರನ್ನು 13 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ನಾವು ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದೇವೆ” ಎಂದು ಸೌರಭ್ ಮಿಶ್ರಾ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಗುರುವಾರ ಕಾಳಿಚರಣ್‌ರನ್ನು ನ್ಯಾಯಾಲಯ ಎರಡು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡುತ್ತು.

ಡಿಸೆಂಬರ್ 26 ರಂದು ರಾಯ್‌ಪುರದಲ್ಲಿ ನಡೆದ ‘ಧರ್ಮ ಸಂಸದ್’ (ಧಾರ್ಮಿಕ ಮಂಡಳಿ)ನಲ್ಲಿ ಕಾಳಿಚರಣ್‌ ಅವರು ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಮತ್ತು ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಎ ಆರೋಪದ ಮೇಲೆ ಮಧ್ಯಪ್ರದೇಶದ ಖಜುರಾಹೊದಲ್ಲಿ ಛತ್ತೀಸ್‌ಗಢ ಪೊಲೀಸರು ಬಂಧಿಸಿದ್ದಾರೆ.

“ಕಾಳಿಚರಣ್‌ರನ್ನು ಬಂಧಿಸಲಾಗಿದೆ ಮತ್ತು ದೇಶದ್ರೋಹದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ಸಮಯದಲ್ಲಿ ಸಾಕ್ಷ್ಯದ ಆಧಾರದ ಮೇಲೆ, ಸೆಕ್ಷನ್ 153 ಎ (1) (ಎ), 153 ಬಿ (1) (ಎ), 295 ಎ, 505 (1) (ಬಿ) ಕೂಡ ಸೇರಿಸಲಾಗಿದೆ ಎಂದು ಛತ್ತೀಸ್‌ಗಢ ಪೊಲೀಸರು ತಿಳಿಸಿದ್ದಾರೆ.

ಕಾಳಿಚರಣ್ ವಿರುದ್ಧ ರಾಯಪುರದ ತಿಕ್ರಪಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Fact Check: ಬಾಲಕಿಗೆ ಚಾಕುವಿನಿಂದ ಇರಿದ ಬಾಲಕ; ಇದು ಲವ್‌ ಜಿಹಾದ್‌ ಕೃತ್ಯವಾ? ಸತ್ಯವೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights