ದನಗಳನ್ನು ಹುಲ್ಲುಗಾವಿನಿಂದ ಹೊರಗಟ್ಟಿದ ವ್ಯಕ್ತಿಯನ್ನು ಮಾರಣಾಂತಿಕವಾಗಿ ಥಳಿಸಿದ ಗೋರಕ್ಷಕರು!

ತನ್ನ ಜಮೀನಿನ ಹುಲ್ಲುಗಾವಲಿನಲ್ಲಿದ್ದ  ದನಗಳನ್ನು ಹೊರಗಟ್ಟಿದ್ದ ವ್ಯಕ್ತಿಯನ್ನು ಗೋ ರಕ್ಷಕರು ಅಮಾನುಶವಾಗಿ ಥಳಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಮ್ಮು ಕಾಶ್ಮೀರದ ಗರ್ರಿ ಗಬ್ಬರ್​ ಗ್ರಾಮದ ಮೊಹ್ಮದ್​ ಅಸ್ಘರ್​ ಎಂಬಾತನನ್ನು 20ಕ್ಕೂ ಹೆಚ್ಚು ಜನರು ಥಳಿಸಿದ್ದಾರೆ. ಥಳಿತಕ್ಕೆ ಒಳಗಾದ  ಆತನಿಗೆ ಗಂಭೀರ ಗಾಯಗಳಾಗಿದ್ದು,  ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಸ್ಘರ್ ಎಂದಿನಂತೆ ಹುಲ್ಲುಗಾವಲಿನಲ್ಲಿ​ ದನಕಾಯುತ್ತಿದ್ದ. ಈ ವೇಳೆ ಆತನ ಮಗ ಕೆಲ ದನಗಳನ್ನು ಬೇರೆಡೆ ಓಡಿಸಿದ್ದ. ಇದನ್ನು ನೋಡಿದ ಕೆಲವರು ಅಸ್ಘರ್​ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಹಲ್ಲೆ ಮಾಡಿದವರು ಗೋಲಿ ಮಾರೋ ಎನ್ನುವ ಘೋಷಣೆ ಕೂಗಿದ್ದಾರೆ.

20ಕ್ಕೂ ಹೆಚ್ಚು ಜನರು ಅಸ್ಘರ್​ನನ್ನು ಥಳಿಸಿದ್ದಾರೆ. ಅವರ ಪರಿಸ್ಥಿತಿ ತುಂಬಾನೇ ಗಂಭೀರವಾಗಿದೆ.

ಆಸ್ಟರ್ ಅವರನ್ನು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿದ್ದು, ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಸರ್ಕಾರ ತಪ್ಪಿತಸ್ಥರ ವಿರುದ್ಧಕ್ರಮ ಕೈಗೊಳ್ಳಬೇಕೆಂಬುದು ಜನರ ಆಗ್ರಹ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love
Verified by MonsterInsights