ಇಸ್ರೇಲ್-ಪ್ಯಾಲೆಸ್ಟೈನ್ ಕದನ ವಿರಾಮ : ಇಸ್ರೇಲ್ಗೆ ಸಂಪೂರ್ಣ ಬೆಂಬಲವೆಂದ ಬಿಡೆನ್…!

ಇಸ್ರೇಲ್ ಮತ್ತು ಹಮಾಸ್ ಇಸ್ಲಾಮಿಕ್‍ ಸಂಘಟನೆಯು ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮಕ್ಕೆ ಒಪ್ಪಿದ್ದು ಇಸ್ರೇಲ್ಗೆ ತಮ್ಮ ಪಕ್ಷ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

ಸ್ಥಳೀಯ ಸಮಯವಾದ ಗುರುವಾರ ಬೆಳಿಗ್ಗೆ 2 ಗಂಟೆಗೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಒಪ್ಪಂದಕ್ಕೆ ಕರೆ ನೀಡಿ 11 ದಿನಗಳ ಯುದ್ಧವನ್ನು ಕೊನೆಗೊಳಿಸಿದವು. ಕದನ ವಿರಾಮವನ್ನು ಹಿಡಿಯದಿರಬಹುದು ಎಂದು ಹಲವರು ಸಂಶಯ ವ್ಯಕ್ತಪಡಿಸುತ್ತಿದ್ದರೆ, ಇತ್ತ ಅಮೇರಿಕದ ಅಧ್ಯಕ್ಷರು ತಮ್ಮ ಪಕ್ಷ ಇನ್ನೂ ಇಸ್ರೇಲ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಿದರು.

ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಗಾಜಾ ಪಟ್ಟಿಯಲ್ಲಿ ನಡೆದ ಇತ್ತೀಚಿನ ಕದನಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 243ಕ್ಕೆ ಏರಿಕೆಯಾಗಿದ್ದು, ಇವರಲ್ಲಿ ಅನೇಕ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘ಈ ತಿಂಗಳ 10ರಂದು ಸಂಘರ್ಷ ಭುಗಿಲೆದ್ದಾಗಿನಿಂದ ಗಾಜಾ ಪಟ್ಟಿಯಲ್ಲಿ ಇಸ್ರೇಲ್‍ ನಡೆಸಿದ ವೈಮಾನಿಕ ದಾಳಿ ನಡೆಸಿತ್ತು. ಅಲ್ಲದೆ ಪಾಲೆಸ್ತೇನ್ ಬೆಂಬಲಿತ ಹಮಾಸ್ ಬಂಡುಕೋರರು ಕೂಡ ರಾಕೆಟ್ ದಾಳಿ ನಡೆಸಿದ್ದರು. ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ನಡೆಸಿದ ಈ ರಾಕೆಟ್ ದಾಳಿಯಲ್ಲಿ ಹಲವು ರಾಕೆಟ್  ಗಳು ಗಾಜಾಪಟ್ಟಿಯಲ್ಲಿ ಬಿದ್ದಿತ್ತು. ಹೀಗಾಗಿ ಇಲ್ಲಿ ಸಂಭವಿಸಿದ ದುರಂತಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 243ಕ್ಕೆ ಏರಿದೆ. ಈ ಪೈಕಿ 66 ಮಕ್ಕಳು ಮತ್ತು 39 ಮಹಿಳೆಯರು ಸೇರಿದ್ದಾರೆ. 1,910 ಜನರು ಗಾಯಗೊಂಡಿದ್ದಾರೆ.’ ಎಂದು ಪ್ರಕಟಣೆ ತಿಳಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights