ಇರಾನ್‌ನ ಯುದ್ದ ನೌಕೆ ಬೆಂಕಿಗೆ ಆಹುತಿ; ಒಮಾನ್‌ ಗಲ್ಪ್ ಪ್ರದೇಶದ ಸಮುದ್ರದಲ್ಲಿ ಮುಳುಗಿದ ಹಡಗು!

ಇರಾನ್‌ನ ಬೃಹತ್‌ ಯುದ್ಧನೌಕೆಯಾದ ‘ಖಾರ್ಗ್‌’ ಹಡುಗು ಬೆಂಕಿಗೆ ಆಹುತಿಯಾಗಿದ್ದು, ಒಮಾನ್‌ ಗಲ್ಪ್ ಪ್ರದೇಶದ ಸಮುದ್ರದಲ್ಲಿ ಮುಳುಗಿದೆ ಎಂದು ಸುದ್ದಿ ಸಂಸ್ಥೆಗಳು ವರದಿ  ಮಾಡಿವೆ.

ಪರ್ಷಿಯನ್ ಕೊಲ್ಲಿಯ ಹಾರ್ಮುಜ್ ಜಲಸಂಧಿಯ ಬಳಿ ಒಮಾನ್ ಕೊಲ್ಲಿಯಲ್ಲಿರುವ ಜಾಸ್ಕ್‌ ಬಂದರಿನ  ಸಮೀಪ ಬುಧವಾರ ಮುಂಜಾನೆ ನೌಖೆ ಚಲಿಸುತ್ತಿತ್ತು. ಈ ವೇಳೆ  ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ಮುಳುಗಿತು. ಆದರೆ, ಅಪಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಹೇಳಲಾಗಿದೆ.

1977ರಲ್ಲಿ ಬ್ರಿಟನ್‌ನಲ್ಲಿ ನಿರ್ಮಾಣವಾದ ಈ ಯುದ್ಧನೌಕೆ 1984ರಲ್ಲಿ ಇರಾನ್‌ಗೆ ಹಸ್ತಾಂತರಗೊಂಡಿತ್ತು. ಪ್ರಮುಖ ಸರಕು ಸಾಗಣೆ ನೌಕೆಯಾಗಿ ಹಾಗೂ ಹೆಲಿಕಾಪ್ಟರ್‌ಗಳ ಚಿಮ್ಮು ಹಲಗೆಯಾಗಿ ಇದು ಬಳಕೆಯಾಗುತ್ತಿತ್ತು.

ಈ ಅವಘಡವು  ಇರಾನ್‌ ನೌಕಾಪಡೆಯಲ್ಲಿ ಈಚಿನ ವರ್ಷಗಳಲ್ಲಿ ಸಂಭವಿಸಿದ ಮೂರನೇ ದೊಡ್ಡ ದುರಂತವಾಗಿದೆ. 2018ರಲ್ಲಿ ನೌಕಾಪಡೆಯ ಯುದ್ಧನೌಕೆಯೊಂದು ಕ್ಯಾಸ್ಪಿಯನ್‌ ಸಮುದ್ರದಲ್ಲಿ ಮುಳುಗಿತ್ತು. 2020ರಲ್ಲಿ ಜಸ್ಕ್‌ ಬಂದರಿನ ಬಳಿ ಕ್ಷಿಪಣಿಯೊಂದು ಅಚಾತುರ್ಯದಿಂದ ನೌಕಾಪಡೆಯ ಹಡಗೊಂದಕ್ಕೆ ಅಪ್ಪಳಿಸಿದ್ದರಿಂದ 19 ಮಂದಿ ನೌಕಾಪಡೆ ಸಿಬ್ಬಂದಿ ಮೃತಪಟ್ಟಿದ್ದರು.

ಇದನ್ನೂ ಓದಿ: ಸಿಎಂ ಕುರ್ಚಿಯಿಂದ ಕೆಳಗಿಳಿತಾರಾ ಯಡಿಯೂರಪ್ಪ? ಯಾರಾಗ್ತಾರೆ ಮುಂದಿನ ಸಿಎಂ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights