IPL : ಪ್ರೇಕ್ಷಕರಿಲ್ಲದೇ ಖಾಲಿ Stadiumಗಳಲ್ಲಿ ಜುಲೈನಲ್ಲಿ IPLಗೆ BCCI ಚಿಂತನೆ…

ಕೊರೋನಾ ಕಾರಣ ಮುಂದೂಡಲಾಗಿರುವ ಐಪಿಎಲ್ ಪಂದ್ಯಾವಳಿಯನ್ನು ಜುಲೈ ತಿಂಗಳಲ್ಲಿ ನಡೆಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ.  ಜುಲೈ ವೇಳೆಗೆ ಕೊರೋನಾ ಸಂಕಷ್ಟದಿಂದ ದೇಶ ಹೊರಬರಬಹುದು, ನಿರ್ಬಂಧಗಳು ಸಡಿಲಿಕೆಯಾಗಬಹುದು ಎಂಬ ಆಶಾಭಾವದಲ್ಲಿ ಬಿಸಿಸಿಐ ಈ ಚಿಂತನೆ ನಡೆಸಿದೆ. ಐಪಿಎಲ್‌ ರದ್ದು ಪಡಿಸುವುದಕ್ಕೆ ಬಿಸಿಸಿಐ ಸುತರಾಂ ತಯಾರಿಲ್ಲ. ಭಾರೀ ಹಣಕಾಸು ವಹಿವಾಟಿನ ಈ ಪಂದ್ಯಾವಳಿಯನ್ನು ನಡೆಸದಿರುವುದರಿಂದ ಬಿಸಿಸಿಐಗೆ ಆರ್ಥಿಕವಾಗಿಯೂ ನಷ್ಟವಾಗುತ್ತದೆ.

ಈ ಕಾರಣಕ್ಕೆ ಜುಲೈ ತಿಂಗಳಲ್ಲಿ ಒಂದು ವೇಳೆ ಅಗತ್ಯ ಬಿದ್ದರೇ ಪ್ರೇಕ್ಷಕರಿಲ್ಲದೇ ಖಾಲಿ ಮೈದಾನಗಳಲ್ಲಾದರೂ ಸರಿ ಐಪಿಎಲ್ ಪಂದ್ಯಾವಳಿ ಆಯೋಜಿಸಲು ಬಿಸಿಸಿ ಉತ್ಸುಕವಾಗಿದೆ.v ಕೊರೋನಾ ಕಾಂಡ ಇಲ್ಲದೇ ಹೋಗಿದ್ದರೇ ಕಳೆದ ತಿಂಗಳ 29ರಿಂದ ಐಪಿಎಲ್ ಪಂದ್ಯಗಳು ಆರಂಭವಾಗಬೇಕಿದ್ದವು. ಆದರೆ ಕೊರೋನಾ ಕಾರಣ ಪಂದ್ಯಾವಳಿಯನ್ನು ಕನಿಷ್ಟ ಏಪ್ರಿಲ್ 15ರವರೆಗೆ ಮುಂದೂಡಲಾಗಿತ್ತು.

ಆ ಬಳಿಕ ದೇಶದಲ್ಲಿ ಲಾಕ್‌ಡೌನ್ ಘೊಷಣೆಯಾಗಿದ್ದು ಎಲ್ಲ ಬಗೆಯ ವಿಮಾನ ಸಂಚಾರ ರದ್ದಾಗಿದೆ. ಇದರಿಂದಾಗಿ ವಿದೇಶಿ ಆಟಗಾರರು ಬರುವುದಂತೂ ಅಸಾಧ್ಯ.vಇನ್ನು ಲಾಕ್‌ಡೌನ್ ಇನ್ನೂ ಎರಡ್ಮೂರು ವಾರ ಮುಂದುವರಿಯುವ ಲಕ್ಷಣಗಳಿರುವ ಹಿನ್ನೆಲೆಯಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಐಪಿಎಲ್ ನಡೆಸಲು ಸಾಧ್ಯವಿಲ್ಲ.

ಜೂನ್ ತಿಂಗಳಿನಲ್ಲಿ ಮುಂಗಾರು ಪ್ರವೇಶವಾಗುವ ಕಾರಣ ಪಂದ್ಯಾವಳಿ ಆಯೋಜನೆ ಕಷ್ಟಕರ. ಈ ಹಿನ್ನೆಲೆಯಲ್ಲಿ ಜುಲೈನಲ್ಲಿ ಪಂದ್ಯಗಳನ್ನು ಆಡಿಸಿದರೆ ಹೇಗೆ ಎಂಬುದು ಬಿಸಿಸಿಐನ ಲೆಕ್ಕಾಚಾರವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights