ಕೃಷಿ ಕಾನೂನುಗಳ ಪಾಸಿಟಿವ್ ವರದಿ ಮಾಡುವ ಮಾಧ್ಯಮಗಳಿಗೆ ಮಾಹಿತಿ ಮೂಲ ಯಾರು ಗೊತ್ತೇ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಂಗೀಕರಿಸಿರುವ ವಿವಾದಾತ್ಮಕ ಕೃಷಿ ಕಾನೂನುಗಳು ರೈತರಿಗೆ ಯಾವ ರೀತಿಯಲ್ಲಿ ಅನುಕೂಲರಕ ಮಾರುಕಟ್ಟೆ ವ್ಯವಸ್ಥೆಯನ್ನ ಕಲ್ಪಸಿವೆ. ಇದರಿಂದಾಗಿ ರೈತರಿಗೆ ಯಾವ ರೀತಿಯ ಪ್ರಯೋಜನಗಳು ಆಗಿವೆ ಎಂದು ಡಿಸೆಂಬರ್‌ 04ರಂದು ಇಂಡಿಯಾ ಟುಡೆ ವೆಬ್‌ಸೈಟ್‌ನಲ್ಲಿ ಸ್ಥಳೀಯ ವರದಿಯನ್ನು ಪ್ರಕರಟಿದೆ.

“ಹೊಸ ಕೃಷಿ ಕಾನೂನುಗಳು ರೈತಸ್ನೇಹಿ ಮಾರುಕಟ್ಟೆಯಲ್ಲಿ ಬೆಳೆಗಾರರಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ”( “How new farm laws can benefit growers in a friendly market”) – ಎಂಬ ಶೀರ್ಷಿಕೆಯ ವರದಿಯನ್ನು ಇಂಡಿಯಾ ಟುಡೆ ಪ್ರಕಟಿಸಿದೆ. ಆದರೆ, ವರದಿಗಾರರ ಬೈಲೈನ್ ಹಾಕಲಾಗಿಲ್ಲ. ಬದಲಾಗಿ ಈ ವರದಿಗೆ “ಇಂಡಿಯಾ ಟುಡೆ ಬ್ಯೂರೋ” ಎಂದು ಹಾಕಲಾಗಿದೆ. ಅದಾಗ್ಯೂ, ಈ ವರದಿಯು ನವದೆಹಲಿ, ಉತ್ತರಾಖಂಡದ ರೂರ್ಕಿ ಮತ್ತು ಮಧ್ಯಪ್ರದೇಶದ ಹರ್ದಾ ಮತ್ತು ದೇವಾಸ್ ಪ್ರದೇಶಗಳಿಂದ ಮಾಡಲಾಗಿದೆ ಎಂದು ಡೇಟ್‌ಲೈನ್ ಸೂಚಿಸಿದೆ.

ಇಂಡಿಯಾ ಟುಡೆ ವರದಿಯಲ್ಲಿ ಉಲ್ಲೇಖಿಸಲಾಗಿರುವ ರೈತರು, “ಹೊಸ ಕೃಷಿ ಕಾನೂನುಗಳು ತಮಗೆ ಹೆಚ್ಚಿನ ಸ್ವಾಯತ್ತತೆ ಮತ್ತು ಲಾಭಾಂಶವನ್ನು ನೀಡಿವೆ. “ಇದು ರೈತ ಪರ ಕಾನೂನು.” ಆದರೆ, ನಮ್ಮ ದೇಶದಲ್ಲಿ ಸಾಕಷ್ಟು ರಾಜಕೀಯವಿದೆ. ಪ್ರತಿಪಕ್ಷದಲ್ಲಿರುವವರು ಅಧಿಕಾರದಲ್ಲಿರುವವರನ್ನು ಕೆಳಮಟ್ಟಕ್ಕಿಳಿಸಲು ನೋಡುತ್ತಾರೆ” ಎಂದು ರೂರ್ಕಿಯ ರೈತ ಉದ್ಯಮಿ ಮನಮೋಹನ್ ಭರದ್ವಾಜ್ ಹೇಳಿದ್ದಾರೆ.

ಇದನ್ನೂ ಓದಿ: ಮಾಧ್ಯಮಗಳು ರೈತ ಹೋರಾಟವನ್ನು ತಿರುಚುತ್ತಿರುವುದೇಕೆ? ಇಲ್ಲಿವೆ ಅಸಲಿ ಕಾರಣಗಳು!

ಡಿಸೆಂಬರ್ 7 ರಂದು, ಇಂಡಿಯಾ ಟುಡೆ ಚಾನೆಲ್‌, ತನ್ನ ಪ್ರೈಮ್‌ಟೈಮ್‌ನಲ್ಲಿ ಇದೇ ವರದಿಯನ್ನು ಪ್ರಸಾರ ಮಾಡಿತು. ಆಂಕರ್ ರಾಹುಲ್ ಕನ್ವಾಲ್ ಅದನ್ನು ಟ್ವೀಟ್‌ ಮಾಡಿದ್ದು, “ಕೆಲವು ಕೇಸ್‌ ಸ್ಟಡೀಸ್‌ಗಳು ಒಂದು ನಿರ್ದಿಷ್ಟ ಭಾಗದ ರೈತರು ಹೊಸ ಕೃಷಿ ಕಾನೂನುಗಳಿಂದ ಸಂತೋಷಗೊಂಡಿದ್ದಾರೆ ಎಂಬುತನ್ನು ತಿಳಿಸಿವೆ ಎಂದು ಹೇಳಿದ್ದಾರೆ.

ಅಲ್ಲದೆ, ಹಲವಾರು ರೈತರ ಹೇಳಿಕೆಗಳನ್ನು ಇಟ್ಟುಕೊಂಡು ಸುದ್ದಿ ಭಿತ್ತರಿಸದ ಇಂಡಿಯಾ ಟುಡೆ “ಆ ರೈತರನ್ನು ತಾನೇ ಸಂಪರ್ಕಿಸಿಲ್ಲ”. ರೈತರ ಆ ಬೈಟ್‌ಗಳನ್ನು ಸರ್ಕಾರದ ಚಾನೆಲ್‌ನಿಂದ ಪಡೆದುಕೊಂಡಿರುವುದಾಗಿ ಅದು ಹೇಳಿದೆ.

ಇಂಡಿಯಾ ಟುಡೆ ವೆಬ್‌ಸೈಟ್‌ನಲ್ಲಿ ಡಿಸೆಂಬರ್‌ 04 ರಂದು ವರದಿ ಪ್ರಕಟಿಸುವ ಒಂದು ದಿನ ಮುಂಚೆ (ಡಿ.03) ಮುಖ್ಯವಾಹಿನಿಯ ಮಾಧ್ಯಮಗಳ ಹಲವಾರು ಪತ್ರಕರ್ತರು ಇರುವ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ  ಹೊಸ ಕೃಷಿ ನೀತಿಗಳಿಂದ ಪ್ರಯೋಜನ ಪಡೆದ ಕತೆಗಳು ಮತ್ತು ರೈತರ ಪಟ್ಟಿಯನ್ನು ಪ್ರಸಾರ ಸಚಿವಾಲಯದ ಮುಖ್ಯಸ್ಥರಾಗಿರುವ ಪ್ರಕಾಶ್ ಜಾವಡೇಕರ್ ಅವರ ಕಚೇರಿಯಿಂದ ಪೋಸ್ಟ್‌ ಮಾಡಲಾಗಿತ್ತು. ಈ ವರದಿಗಳನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪಿಡಿಎಫ್ ಮತ್ತು ಡಾಕ್ ಫೈಲ್‌ನಲ್ಲಿ ಎಲ್ಲರಿಗೂ ಕಳುಹಿಸಲಾಗಿದೆ.

ಈ ವರದಿಯ ಕಥಾವಸ್ತುಗಳನ್ನು ಜಾವಡೇಕರ್ ಅವರ ಮಾಧ್ಯಮ ಸಲಹೆಗಾರ ಎಸ್.ಸತ್ಯನಾರಾಯಣನ್ ಅವರಿಂದ ವಾಟ್ಸ್‌ಆ್ಯಪ್ ಮೂಲಕ ಪಡೆದುಕೊಂಡಿದ್ದಾಗಿ ಮೂವರು ಪತ್ರಕರ್ತರು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಗೋದಿ ಮೀಡಿಯಾ ವಿರುದ್ಧ ಪರ್ಯಾಯ ಕಂಡುಕೊಂಡ ಪಂಜಾಬ್ ಯುವಜನರು!

ಅವರು ಕಳಿಸಿದ್ದ ದಾಖಲೆಗಳಲ್ಲಿ ಒಂದನ್ನು, 2020ರ ಹೊಸ ಕೃಷಿ ನೀತಿಗಳ ಸುಗ್ರೀವಾಜ್ಞೆ ಜಾರಿಗೆ ಬಂದ ನಂತರ ರೈತರ ಕಥೆಗಳ ಟಿಪ್ಪಣಿ ಮತ್ತು ಸಂಪರ್ಕ ವಿವರಗಳು” ಎಂದು ಹೆಸರಿಸಲಾಗಿತ್ತು. ಇದದಲ್ಲಿ ಕೃಷಿ ಕಾನೂನುಗಳ “ಉದ್ದೇಶಗಳು” ಮತ್ತು ಅದರ “ಪ್ರಯೋಜನಗಳು” ಕುರಿತು ಪಾಯಿಂಟ್‌ಗಳನ್ನು ಒಳಗೊಂಡಿತ್ತು. ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮತ್ತು ಒಡಿಶಾದ ಒಂದು ಡಜನ್‌ಗೂ ಹೆಚ್ಚು ರೈತ ಉತ್ಪಾದಕ ಸಂಸ್ಥೆಗಳು ಅಥವಾ ಎಫ್‌ಪಿಒಗಳ ಬಗ್ಗೆ ಸುದೀರ್ಘ ಮಾಹಿತಿಯನ್ನು ಇದು ಒಳಗೊಂಡಿದ್ದು, ಅವರ ಸಂಪರ್ಕ ವಿವರಗಳನ್ನು ಸಹ ಒದಗಿಸಲಾಗಿದೆ.

ಎರಡನೆಯ ದಾಖಲೆಯನ್ನು ಸರಳವಾಗಿ “ಯಶಸ್ಸಿನ ಕಥೆಗಳು” ಎಂದು ಹೆಸರಿಸಲಾಗಿತ್ತು. ಕೃಷಿ ಕಾನೂನುಗಳು ಜಾರಿಗೆ ಬಂದಾಗಿನಿಂದ ಲಾಭ ಗಳಿಸಿದ ಭಾರತದಾದ್ಯಂತದ 25 ರೈತರ ವಿವರವಾದ ಮಾಹಿತಿಯನ್ನು ಹೊಂದಿದ್ದು, ಅವರ ಮೊಬೈಲ್ ಸಂಖ್ಯೆಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

ಸರ್ಕಾರದಿಂದ ಮೂರನೆಯ ದಾಖಲೆಯನ್ನು “ರೈತ ಪ್ರತಿಕ್ರಿಯೆ” ಎಂಬ ಶೀರ್ಷಿಕೆಯಡಿ ನೀಡಲಾಗಿದೆ. ಇದು ಇನ್ನೂ ಎಂಟು ರೈತರ ಸಂಪರ್ಕ ವಿವರಗಳನ್ನು ಹೊಂದಿತ್ತು, ಇದರಲ್ಲಿ ಕೃಷಿ ಕಾನೂನುಗಳು ತಮ್ಮ ವ್ಯವಹಾರಗಳನ್ನು ಹೇಗೆ ಉತ್ತಮಗೊಳಿಸಿದವು ಎಂಬ ಬಗ್ಗೆ ರೈತರು ಹೇಳಿರುವ ಮಾಹಿತಿಯನ್ನು ಒಳಗೊಂಡಿತ್ತು.

A screenshot from the ‘Farmer Feedback’ document sent to journalists by S Satyanarayanan.

ಇಂಡಿಯಾ ಟುಡೆ ವರದಿಯಲ್ಲಿ ಉಲ್ಲೇಖಿಸಿರುವ ರೈತರಾದ ಭಾರದ್ವಾಜ್, ಗುರ್ಜರ್ ಮತ್ತು ಪಟೇಲ್ ಅವರನ್ನು ಸತ್ಯನಾರಾಯಣ್ ಅವರ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ನಲ್ಲಾಪನ್ ಅವರನ್ನು ನಿರ್ದಿಷ್ಟವಾಗಿ ಹೆಸರಿಸಲಾಗಿಲ್ಲ, ಆದರೆ “ಯಶಸ್ಸಿನ ಕಥೆ”ಯಲ್ಲಿ ಮಧುರೈ ಮೂಲದ ರೈತನನ್ನು ಉಲ್ಲೇಖಿಸಲಾಗಿದೆ. ಅದು ನಾಲ್ಕು ತೆಂಗಿನಕಾಯಿ ಬೆಳೆಯುವ ರೈತರಿಗೆ “ಮೊದಲ ಬಾರಿಗೆ ತೆಂಗಿನಕಾಯಿಗಳನ್ನು ಮಧುರೈನ ನಿಯಂತ್ರಿತ ಮಾರುಕಟ್ಟೆಯ ಮೂಲಕ ಹರಾಜು ಮಾಡಲಾಯಿತು” ಎಂದು ಹೇಳಿದೆ.

 

 

Gurjar, Patel and Bhardwaj on India Today on December 7.

ಜಾವಡೇಕರ್ ಅವರ ಕಚೇರಿಯಿಂದ ಒದಗಿಸಲಾದ ಮಾಹಿತಿಯಲ್ಲಿ ಉಲ್ಲೇಖಿಸಲಾದ ಇತರ ರೈತರ ಹೇಳಿಕೆಗಳನ್ನು ಕೃಷಿ ಕಾನೂನುಗಳ ಕುರಿತು ಸರ್ಕಾರದ ಪ್ರಚಾರದಲ್ಲಿ ಬಳಸಿಕೊಳ್ಳಲಾಗಿದೆ. ಕಳೆದ ತಿಂಗಳು, ಅಂತಹ ಇಬ್ಬರು ರೈತರಾದ ಜಿತೇಂದ್ರ ಭೋಯ್ ಮತ್ತು ಮೊಹಮ್ಮದ್ ಅಸ್ಲಾಮ್ ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. “ಈ ಸುಧಾರಣಾ ಕಾಯ್ದೆಗಳು ನಮ್ಮ ರೈತರಿಗೆ ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಿವೆ” ಎಂದು ಮೋದಿ ಹೇಳಿದ್ದಾರೆ.

ಡಿಸೆಂಬರ್ 2 ರಂದು, ಸಿಎನ್ಎನ್ ನ್ಯೂಸ್ 18 ಮಹಾರಾಷ್ಟ್ರದ ಧುಲೆ ಜಿಲ್ಲೆಯ ಭೋಯಿ ಎಂಬ ರೈತನಿಗೆ ಸಂಬಧಿಸಿದ ಸುದ್ದಿಯನ್ನು “ಫಾರ್ಮ್ ಲಾಸ್ ಟು ದಿ ರಿಸ್ಕ್ಯೂ” ಎಂಬ ಶೀರ್ಷಿಕೆಯಲ್ಲಿ ಪ್ರಸಾರ ಮಾಡಿತು.

ಡಿಸೆಂಬರ್ 4 ಮತ್ತು ಡಿಸೆಂಬರ್ 6 ರ ನಡುವೆ, ಇಂಡಿಯಾ ಟುಡೇ ಪ್ರಚಾರ ಮಾಡಿದ್ದ ಕಮಲ್ ಪಟೇಲ್ ಮತ್ತು ರಾಮ್ ವಿಲಾಸ್ ಗುರ್ಜರ್ ಸೇರಿದಂತೆ ಇತರ ರೈತರ ಬೈಟ್‌ಗಳನ್ನು ಡಿಡಿ ನ್ಯೂಸ್ ಕೂಡ ಪ್ರಸಾರ ಮಾಡಿದೆ.

ನರೇಂದ್ರ ಮೋದಿ ಸರ್ಕಾರವು ಮಾಧ್ಯಮಗಳ ನಿರ್ವಹಿಸುವುದಕ್ಕಾಗಿ ಇತಹ ತಂತ್ರಗಳನ್ನು ಬಳಸುತ್ತಿದೆ. ಇದು ಕೇವಲ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾತ್ರವಲ್ಲ, ಇತರ ಸಚಿವಾಲಯಗಳೂ ಕೂಡ ತಮ್ಮ ಬಗೆಗೆ ಸಹಾನುಭೂತಿಯ ಪ್ರಸಾರವನ್ನು ಪಡೆಯುವುದಕ್ಕಾಗಿ ಪತ್ರಕರ್ತರಿಗೆ ಪಾಯಿಂಟ್‌ಗಳನ್ನು ಒದಗಿಸುತ್ತವೆ ಎಂದು ಪತ್ರಕರ್ತರೊಬ್ಬರು ತಿಳಿಸಿದ್ದಾರೆ.

A screenshot from the ‘success stories’ document sent to journalists by  S Satyanarayanan.

ರೈತ ವಿರೋಧಿಯಾಗಿರುವ ಕೃಷಿ ಕಾನೂನುಗಳ ವಿರುದ್ದ ರೈತರು ಪ್ರತಿಭಟನೆ ನಡೆಸುತ್ತಿದ್ದು, ದಿನೇ ದಿನೇ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ. ದೇಶಾದ್ಯಂತ ರೈತರಿಗೆ ವ್ಯಾಪಕವಾಗಿ ಬೆಂಬಲ ದೊರೆಯುತ್ತಿದೆ. ಹೀಗಾಗಿ ಸರ್ಕಾರವು ತಾನೇ ಕೆಲವು ರೈತರಿಂದ ಕೃಷಿ ನೀತಿಗಳ ಬಗ್ಗೆ ಸಕಾರಾತ್ಮಕ ವಿಡಿಯೋಗಳನ್ನು ಮಾಡಿಸಿ, ಅವುಗಳನ್ನು ಮಾಧ್ಯಮಗಳಿಗೆ ಕಳುಹಿಸಿ, ಕೃಷಿ ನೀತಿಗಳ ಬಗ್ಗೆ ರೈತರು ಹೆಮ್ಮೆ ಪಟ್ಟಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿಸಲು ಮುಂದಾಗಿದೆ. ಈ ಮೂಲಕ ತಮ್ಮ ಕೃಷಿ ನೀತಿಗಳನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.

ಮೋದಿ ಸರ್ಕಾರದ ಹುನ್ನಾರಕ್ಕೆ ಕೆಲವು ಮಾಧ್ಯಮಗಳು ಸಹಕಾರಕೊಡುತ್ತಿವೆ. ಇಂತಹ ಮಾಧ್ಯಮಗಳು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು “ಗೋದಿ ಮೀಡಿಯಾ”ಗಳು ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಅಲ್ಲದೆ, ರೈತರ ಪ್ರತಿಭಟನೆಯ ಬಗ್ಗೆ ನೀವು ಸುದ್ದಿಗಳನ್ನು ಮಾಡಬೇಡಿ ಎಂದು ಮಾಧ್ಯಮಗಳನ್ನು ಪ್ರತಿಭಟನಾ ಸ್ಥಳಗಳಿಂದ ಹಿಮ್ಮೆಟ್ಟಿದ್ದಾರೆ.

ಮೂಲ: ನ್ಯುಸ್ ಲ್ಯಾಂಡ್ರಿ

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: ರೈತರು ಮತ್ತು ‘ಗೋದಿ ಮೀಡಿಯಾ’: ನ್ಯೂಸ್‌ ಚಾನೆಲ್‌ಗಳ ಧೋರಣೆಗಳೇನು ಓದಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights