ಪ್ರಭಾವಿಗಳು ಪ್ರತಿನಿಧಿಸುವ ಊರಲ್ಲಿ ಅಕ್ರಮ ಗಣಿಗಾರಕೆ, ಜಿಲಿಟಿನ್ ಸ್ಪೋಟ್ : ಹೆಚ್ಡಿಕೆ ತನಿಖೆಗೆ ಆಗ್ರಹ!

ಸಿಎಂ ಬಿಎಸ್ ಯಡಿಯೂರಪ್ಪ, ಸಚಿವ ಕೆಎಸ್ ಈಶ್ವರಪ್ಪ, ಬಿಎಸ್ ರಾಘವೇಂದ್ರರಂತಹ ಪ್ರಭಾವಿ ನಾಯಕರು ಪ್ರತಿನಿಧಿಸುವಂತಹ ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಿಂದಾಗಿ ಜಿಲಿಟಿನ್ ಸ್ಪೋಟಗೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.

ಶಿವಮೊಗ್ಗದ ಅಬ್ಬಲಗೆರೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ಜಿಲಿಟಿನ್ ಕಡ್ಡಿಗಳ ಸ್ಪೋಟದಿಂದ ಅನೇಕ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸ್ಪೋಟದ ತೀವ್ರತೆಗೆ ಲಾರಿ ಯ ಭಾಗಗಳು ಊರಾಚಿ ಬಿದ್ದಿವೆ. ಮಾತ್ರವಲ್ಲದೇ ಗೆ ಹಳ್ಳಿಯ ಮನೆಗಳು ಸಂಪೂರ್ಣವಾಗಿ  ಸೀಳಿ ಹೋಗಿವೆ.

ಕಲ್ಲು ಕ್ವಾರಿಯಲ್ಲಿ ನಡೆದ ಈ ಸ್ಪೋಟ ದುರಂತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಬಡ ಕರ್ಮಿಕರ ಜೀವ ಹರಣಕ್ಕೆ , ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಎಚ್ ಡಿಕೆ ಆಗ್ರಹಿಸಿದ್ದಾರೆ.

ಘಟನೆ ಬಗ್ಗೆ ಹಲವಾರು ಕೈ ಹಾಗೂ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ. ದುರಂತ ಸಂಭವಿಸಿದ ನಂತರ ಸಂತಾಪ ಸೂಚಿಸಿದರೆ ಏನ್ ಬಂತು. ಶಿವಮೊಗ್ಗದಲ್ಲಿ ಈ ರೀತಿ ಅಕ್ರಮ ಗಣಿಗಾರಕೆ ನಡೆಯುತ್ತಿದೆ. ಸಿಎಂ ಸ್ವ ಕ್ಷೇತ್ರ ಜಿಲ್ಲೆಯಲ್ಲಿ ನಡೆಯುತ್ತಿದೆ ಆದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಶಿವಮೊಗ್ಗ ಹುಣಸೋಡು ಜಿಲಿಟಿನ್ ತೀವ್ರವಾಗಿ ಸ್ಟೋಟಗೊಂಡ ಪರಿಣಾಮ ಅಕ್ಕಪಕ್ಕದ ಮನೆಗಳು ಕಿಟಕಿ ಗಾಜುಗಳು ಗೋಡೆಗಳು  ಒಡೆದು ಹೋಗಿವೆ. ಬಾಗಿಲು ಕೂಡ ಸೀಲ್ ಹೋಗಿವೆ. ಲಾರಿ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿದೆ. ಘಟನೆಯಲ್ಲಿ ಸುಮಾರು 6 ಜನ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಮನೆಯ ಶೀಟ್ ಗಳು ಒಡೆದು ಹೋಗಿವೆ. ಭಯಾನಕ ಸ್ಪೋಟಕ್ಕೆ ಇಡೀ ಊರಿಗೆ ಊರೆ ನಿದ್ದೆ ಮಾಡಿಲ್ಲ. ಇಂತಹ ಗಣಿಗಾರಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಮಾತ್ರ ಕ್ರಮವನ್ನು ಕೈಗೊಂಡಿಲ್ಲ. ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದು ಪರಿಹಾರಕ್ಕಾಗಿ ಊರ ಜನ ಮನವಿ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights