ದೆಹಲಿ ಹಿಂಸಾಚಾರದಲ್ಲಿ ಶಿಶು ಮರಣದ ಆರೋಪಿ ಭಾಗಿ – ಬಿಜೆಪಿ ಫೇಸ್‌ಬುಕ್ ಪುಟ ಹೇಳೋದೇನು?

ದೆಹಲಿ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ನಡೆದ ಹಿಂಸಾಚಾರದ ಫೋಟೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಇದರ ನಡುವೆ ಜನವರಿ 26 ರಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಅವರು ಭಾಗವಾಗಿದ್ದರು ಎಂಬ ಹೇಳಿಕೆಯೊಂದಿಗೆ ಟ್ರ್ಯಾಕ್ಟರ್ನಲ್ಲಿ ಡಾ. ಕಫೀಲ್ ಖಾನ್ ಅವರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಗೋರಖ್‌ಪುರ ಶಿಶು ಮರಣ ಪ್ರಕರಣದಲ್ಲಿ ಖಾನ್ ಆರೋಪಿಯಾಗಿದ್ದಾನೆ.

“ಬಿಜೆಪಿ ಪಶ್ಚಿಮ ಬಂಗಾಳ” ಎಂಬ ಫೇಸ್‌ಬುಕ್ ಪುಟದಲ್ಲಿ ಬಂಗಾಳಿಯಲ್ಲಿ ಶೀರ್ಷಿಕೆಯೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದು, “ಇವರು ಡಾ. ಕಾಫೀಲ್ ಖಾನ್. ಉತ್ತರ ಪ್ರದೇಶದ ಶಿಶು ಮರಣ ಪ್ರಕರಣಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ದೆಹಲಿಯಲ್ಲಿ ರೈತರ ಪ್ರತಿಭಟನೆಗೆ ಟ್ರ್ಯಾಕ್ಟರ್‌ನಲ್ಲಿ ಹೋದರು. ಇವರು ವೈದ್ಯರಲ್ಲದೆ ಕೃಷಿಕರೂ ಆಗಿದ್ದಾರೆಂದು ತೋರುತ್ತದೆ ” ಎಂದು ಬರೆಯಲಾಗಿದೆ.

ಆದರೆ ಇದು ಬಂಗಾಳ ಬಿಜೆಪಿಯ ಅಧಿಕೃತ ಫೇಸ್‌ಬುಕ್ ಪುಟವಲ್ಲ. ವೈರಲ್ ಪೋಸ್ಟನ್ನು ಇಲ್ಲಿ ನೋಡಬಹುದು.

ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅವರ ಟ್ವಿಟರ್ ಹ್ಯಾಂಡಲ್ ನಲ್ಲಿಯೂ ಸಹ ಈ ಚಿತ್ರವನ್ನು ಅದೇ ರೀತಿ ಸಂದೇಶದೊಂದಿಗೆ ಹಂಚಿಕೊಳ್ಳಲಾಗಿದೆ.

ಆದರೆ ಈ ಫೋಟೋ ಹಾಗೂ ಸಂದೇಶ ತಪ್ಪು ಮಾಹಿತಿಯನ್ನು ರವಾನಿಸುತ್ತಿದೆ. ಜನವರಿ 26 ರಂದು ಖಾನ್ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅವರು ಜೈಪುರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಕಳೆದ ಒಂದು ತಿಂಗಳಲ್ಲಿ ಅವರು ದೆಹಲಿಗೆ ಭೇಟಿ ನೀಡಿಲ್ಲ. ಟ್ರ್ಯಾಕ್ಟರ್‌ನ ಮೂಲ ಕಾರ್ಯವಿಧಾನದ ಕುರಿತು ಅವರು ಟ್ಯುಟೋರಿಯಲ್ ನೀಡುತ್ತಿರುವ ವೀಡಿಯೊವನ್ನು ಜನವರಿ 26 ರಂದು ಖಾನ್ ಪೋಸ್ಟ್ ಮಾಡಿದ್ದಾರೆ. ವೀಡಿಯೊದ ಹಿನ್ನೆಲೆ ಇದನ್ನು ಜೈಪುರ ಜಿಲ್ಲೆಯ ಲಂಗರಿಯವಾಸ್‌ ಹಳ್ಳಿಯಲ್ಲಿ ಚಿತ್ರೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೇರೆ ಯಾವುದೇ ಟ್ರಾಕ್ಟರ್ ಈ ಸ್ಥಳದಲ್ಲಿ ಕಾಣಿಸುತ್ತಿಲ್ಲ.

ಟ್ರ್ಯಾಕ್ಟರ್ ರ್ಯಾಲಿಗೆ ಒಂದು ದಿನ ಮೊದಲು ಜನವರಿ 25 ರಂದು ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಜನವರಿ 26 ರಂದು ಅವರು ಜೈಪುರದ ಧೋಟ್ವಾರಾದಲ್ಲಿರುವ ಶಾಹೀನ್ ಸಂಸ್ಥೆಯಲ್ಲಿ ತ್ರಿವರ್ಣವನ್ನು ಹಾರಿಸಿದರು. ವಾಸ್ತವವಾಗಿ, ಅವರು ಜನವರಿ 26 ರಂದು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಎರಡು ವೀಡಿಯೊಗಳನ್ನು ರಿಟ್ವೀಟ್ ಮಾಡಿದ್ದಾರೆ, ಅಲ್ಲಿ ಅವರು ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದರು.

ಮಾತ್ರವಲ್ಲದೇ ಜೈಪುರದ ಶಾಹೀನ್ ಸಂಸ್ಥೆಯ ಪ್ರಾಂಶುಪಾಲರಾದ ಶೋಯೆಬ್ ಖಾನ್ ಅವರು, ಖಾನ್ ಜನವರಿ 26 ರಂದು ಖಾನ್ ತಮ್ಮ ಶಾಲೆಯಲ್ಲಿದ್ದರು ಎಂದು ದೃಢಪಡಿಸಿದ್ದಾರೆ. ಆದ್ದರಿಂದ, ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಟ್ರಾಕ್ಟರ್ ರ್ಯಾಲಿಯಲ್ಲಿ ಖಾನ್ ಭಾಗವಹಿಸಲಿಲ್ಲ ಎಂಬುದು ಸಾಬೀತಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights