ಡೆತ್ ಆಡಿಟ್ ನಲ್ಲಿ ಅಫಾತಕಾರಿ ಮಾಹಿತಿ : ಬಿಬಿಎಂಪಿಗೆ ಸವಾಲ್ ಆಯ್ತು 3ನೇ ಅಲೆ!

ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಭೀತಿಯ ನಡುವೆ ಮತ್ತೊಂದು ಸವಾಲ್ ಎದುರಾಗಿದೆ. ಬಿಬಿಎಂಪಿ ನಡೆಸಿದ ಡೆತ್ ಆಡಿಟ್ ನಲ್ಲಿ ಅಫಾತಕಾರಿ ಮಾಹಿತಿಯೊಂದು ಬಹಿರಂಗಗೊಂಡಿದ್ದು ಕೊರೊನಾ 2ನೇ ಅಲೆಯಲ್ಲಿ ಮದುಮೇಹಿಗಳು ಮತ್ತು ಸಕ್ಕರೆ ಕಾಯಿಲೆ ಇರುವವರೇ ಅತೀ ಹೆಚ್ಚು ಸಾವನ್ನಪ್ಪಿರುವುದು ತಿಳಿದು ಬಂದಿದೆ.

ಬಿಬಿಎಂಪಿ 21 ದಿನಗಳಲ್ಲಿ 248280 ಮನೆಗಳಲ್ಲಿ ಆರೋಗ್ಯ ಸಮೀಕ್ಷೆ ನಡೆಸಿದೆ. ಜೊತೆಗೆ 7,11,648 ಜನರ ಆರೋಗ್ಯ ತಪಾಸಣೆ ಮಾಡಿದೆ. ಇದರಲ್ಲಿ ಶೇ 50 ರಷ್ಟು ಜನರಿಗೆ ಡಯಾಬಿಡೀಸ್ ಮತ್ತು ಶೇ.36ರಷ್ಟು ಜನರಲ್ಲಿ ಹೈಪರ್ ಟೆನ್ಷನ್ ಕಂಡುಬಂದಿದೆ. ಇಂತಹ ರೋಗಿಗಳು ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ 30-40 ಗಂಟೆಗಳ ಒಳಗೆ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.

7,11,648 ಜನರ ಆರೋಗ್ಯ ತಪಾಸಣೆಯಲ್ಲಿ 22362 ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಆಶ್ಚರ್ಯ ಅಂದರೆ 22362 ಜನರಿಗೆ ತಮಗೆ ಸೋಂಕು ತಗುಲಿದೆ ಎನ್ನುವ ಬಗ್ಗೆ ಮಾಹಿತಿಯೇ ಇರಲಿಲ್ಲವಂತೆ. ಸಮೀಕ್ಷೆಯಲ್ಲಿ ಜನರಿಗೆ ಅರಿವಿಲ್ಲದಂತೆ ಕೊರೊನಾ ಇರುವುದು ಕಂಡು ಬಂದಿದೆ.

ಜೊತೆಗೆ ಬೆಂಗಳೂರಿನಲ್ಲಿ ಹೆಚ್ಚು ಜನರಿಗೆ ಅಧಿಕ ರಕ್ತದೊತ್ತಡ ಸಕ್ಕರೆ ಖಾಯಿಲೆ ಇರುವುದು ಪತ್ತೆಯಾಗಿದೆ. ರಾಜ್ಯದಲ್ಲಿ ಸೋಂಕು ಕಮ್ಮಿ ಕಮ್ಮಿ ಅಂದುಕೊಳ್ಳುತ್ತಿದ್ದ ಜನರಲ್ಲಿ ಈ ವರದಿ ಆತಂಕ ಹೆಚ್ಚಿಸಿದೆ. ಹೀಗಾಗಿ 3ನೇ ಅಲೆ ಎದುಸಿಸಲು ಬಿಬಿಎಂಪಿಗೆ ದೊಡ್ಡ ಸವಾಲಾಗಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights