21 ವರ್ಷಗಳ ಬಳಿಕ ಭಾರತದ ಯುವತಿಗೆ ವಿಶ್ವ ಸುಂದರಿ ಪಟ್ಟ; ಹರ್ನಾಜ್​​ ಸಂಧು 2021ರ ಮಿಸ್‌ ಯೂನಿವರ್ಸ್‌!

2021ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಹರ್ನಾಜ್​ ಕೌರ್​ ಸಂಧು ಅವರು ವಮಿಸ್‌ ಯೂನಿವರ್ಸ್‌ ಪಟ್ಟವನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ 21 ವ‍ರ್ಷಗಳ ಬಳಿಕ ಭಾರತದ ಬೆಡಗಿಗೆ ಮಿಸ್‌ ಯೂನಿವರ್ಸ್‌ ಕಿರೀಟ ದೊರೆತಿದೆ.

ಇಸ್ರೇಲ್​ನ ಐಲಾಟ್​ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಚಂಡೀಗಢದ ಮಾಡೆಲ್ ಹಾಗೂ ಹಲವು ಸಿನಿಮಾಗಳಲ್ಲಿ ನಟಿಯಾಗಿ ಅಭಿನಯಿಸಿರುವ ಹರ್ನಾಜ್​ ಸಂಧು ಪ್ರಶಸ್ತಿ ಗೆದ್ದಿದ್ದಾರೆ.

ವಿವಿಧ ದೇಶಗಳ 79 ಸ್ಪರ್ಧಿಗಳನ್ನು ಹಿಂದಿಕ್ಕಿದ ಹರ್ನಾಜ್‌ ಅವರಿಗೆ 2020ರ ಮಾಜಿ ವಿಶ್ವ ಸುಂದರಿ ಮೆಕ್ಸಿಕೋದ ಆಂಡ್ರಿಯಾ ಮೆಜಾ ಅವರು ಮಿಸ್‌ ಯೂನಿವರ್ಸ್‌ ಕಿರೀಟವನ್ನು ತೊಡಿಸಿದ್ದಾರೆ.

Who is Harnaaz Kaur? Meet with Miss Diva Miss Universe 2021 Harnaaz Kaur  Sandhu Biography, Age, Instagram!

ಕಿರೀಟ ಪಡೆದು ಮಾತನಾಡಿದ ಹರ್ನಾಜ್‌, “ಮಿಸ್​ ಯುನಿವರ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸುವ ನಿಮ್ಮ ಆಸಕ್ತಿಯ ಜೊತೆ ಎಂದಿಗೂ ರಾಜಿಯಾಗಬೇಡಿ. ಅದು ನಿಮ್ಮ ಕನಸಿಗೆ ಆದರ್ಶವಾಗಿರುತ್ತದೆ” ಎಂದು ಹೇಳಿದ್ದಾರೆ.

“ಇಂದಿನ ಯುವ ಜನತೆ ಅವರ ಮೇಲಿನ ಆತ್ಮವಿಶ್ವಾಸ ಮತ್ತು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಬೇರೆಯವರು ಏನೆಂದುಕೊಳ್ಳುತ್ತಾರೋ ಎನ್ನುವ ಹಿಂಜರಿಗೆ ಎಲ್ಲರಲ್ಲೂ ಮನೆ ಮಾಡುತ್ತಿದೆ. ಆದರೆ, ನಾವು ಅಂತಹ ಹಿಂಜರಿಕೆಯಿಂದ ಹೊರ ಬರಬೇಕು. ನಮ್ಮ ಆಸಕ್ತಿ ಕ್ಷೇತ್ರದೆಡೆಗೆ ಗಮನ ಹರಿಸಬೇಕು. ನನ್ನ ಮೇಲೆ ನಾನಿಟ್ಟ ನಂಬಿಕೆ, ಆತ್ಮ ವಿಶ್ವಾಸ ಇಂದು ಈ ವೇದಿಕೆಗೆ ನನ್ನನ್ನು ತಂದು ನಿಲ್ಲಿಸಿದೆ” ಎಂದು ಅವರು ವಿವರಿಸಿದ್ದಾರೆ.

ಪ್ರಕೃತಿ ಪ್ರೇಮಿಯಾಗಿರುವ ಹರ್ನಾಜ್ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಅವರು, ಯಾರಾ ದಿಯಾನ್ ಪೂ ಬರಾನಾ ಮತ್ತು ಬಾಯಿ ಜಿ ಕುಟ್ಟಂಗೆ ಎನ್ನುವ ಸಿನಿಮಾಗಳಲ್ಲೂ ನಟಿಸಿದ್ದಾರೆ.

ಹರ್ನಾಜ್ ಅವರು 2017ರಲ್ಲಿ ಮಿಸ್​ ಚಂಡೀಗಡ ಹಾಗೂ 2018ರಲ್ಲಿ ಮಿಸ್​ ಮಾಕ್ಸ್​ ಸ್ಟಾರ್​ ಆಫ್​ ಇಂಡಿಯಾ ಪಟ್ಟವನ್ನು ಗೆದ್ದಿದ್ದರು. ನಂತರ 2019ರಲ್ಲಿ ಪಂಜಾಬ್​ನ ಫೆಮಿನಾ ಮಿಸ್​ ಇಂಡಿಯಾ ಪಟ್ಟ ಗೆದ್ದು ಫೆಮಿನಾ ಮಿಸ್​ ಇಂಡಿಯಾ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. ಇದೀಗ 2021ರಲ್ಲಿ ಮಿಸ್​ ಯುನಿವರ್ಸ್​ ಆಗಿ ಗೆದ್ದು ಭಾರತಕ್ಕೆ ಹೊಸ ಗೆಲುವು ತಂದುಕೊಟ್ಟಿದ್ದಾರೆ.

ಇದನ್ನೂ ಓದಿ: ಗೋವಾ ಚುನಾವಣೆ: ವಿಪಕ್ಷಗಳ ಮೈತ್ರಿಗೆ ಕಾಂಗ್ರೆಸ್‌ ಪ್ರಯತ್ನ; ಇಲ್ಲವಾದರೆ ಬಿಜೆಪಿಗೆ ಮತ್ತೆ ಅಧಿಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights