ಏಷ್ಯನ್ ಚಾಂಪಿಯನ್‌ಶಿಪ್: 3 ಪದಕ ಗೆದ್ದ ಭಾರತ; ಕುಸ್ತಿಪಟು ಸರಿತಾಗೆ ಚಿನ್ನದ ಪದಕ!

ಕಜಕಿಸ್ಥಾನದ ಅಲ್ಮಾಟಿಯಲ್ಲಿ ನಡೆದ ಮಹಿಳಾ ವಿಭಾಗದ ವ್ರೆಸ್ಲಿಂಗ್ (ಕುಸ್ತಿ) ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸರಿತಾ ಮೊರ್‌ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಸರಿತಾ ಅವರ ಚಿನ್ನದ ಪದಕದ ಜೊತೆಗೆ ಸೀಮಾ ಮತ್ತು ಪೂಜಾ ಅವರು ಎರಡು (ತಲಾ ಒಂದೊಂದು) ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಹರಿಯಾಣ ಮೂಲದ 25 ವರ್ಷದ ಕುಸ್ತಿಪಟು ಸರಿತಾ ಅವರು ಆರು ನಿಮಿಷಗಳ ಅಂತಿಮ ಪಂದ್ಯದ ಮುಕ್ತಾಯದ ಹಂತದಲ್ಲಿ ಭಾರೀ ಪೈಪೋಟಿ ನೀಡಿ ಆಟಕ್ಕೆ ತಿರುವು ಕೊಟ್ಟರು. ಮಹಿಳೆಯರ 58 ಕೆಜಿ ವಿಭಾಗದ ಕುಸ್ತಿಯಲ್ಲಿ ಅವರು ಮಂಗೋಲಿಯಾದ ಶೂಡೋರ್ ಬಾತರ್ಜಾವ್ ವಿರುದ್ಧ 10-7 ರಿಂದ ರೋಚಕ ಜಯ ಗಳಿಸಿದರು.

ಆರಂಭಿಕ ಮೂರು ನಿಮಿಷಗಳಲ್ಲಿ 1-4ರ ಹಿನ್ನಡೆಯಲ್ಲಿದ್ದ ಭಾರತೀಯ ಕುಸ್ತಿಪಟು ಸ್ಪರ್ಧೆಯ ದ್ವಿತೀಯಾರ್ಧದಲ್ಲಿ ಸ್ಕೋರ್ ಅನ್ನು 10-7 ಕ್ಕೆ ಕೊಂಡೊಯ್ದರು. ಕೇವಲ 12 ಸೆಕೆಂಡುಗಳ ಅಂತರದಲ್ಲಿ ಅವರು ತನ್ನ ಪದಕವನ್ನು ಉಳಿಸಿಕೊಳ್ಳಲು 10-7 ಮುನ್ನಡೆ ಸಾಧಿಸಿದಳು.

ನವದೆಹಲಿಯಲ್ಲಿ 2020 ರ ಫೆಬ್ರವರಿಯಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಸರಿತಾ ಚಿನ್ನ ಗೆದ್ದಿದ್ದರೆ, 2017 ರ ಖಂಡಾಂತರ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರು.

ಮಹಿಳೆಯರ 50 ಕೆಜಿ ವಿಭಾಗದಲ್ಲಿ ಭಾರತವು ಎರಡನೇ ಪದಕ – ಕಂಚು ಪದಕ ಪಡೆದುಕೊಂಡಿತು. ತೈಪೆಯ ಯುಂಗ್ ಹ್ಸುನ್ ಲಿನ್ ವಿರುದ್ಧ ಸೀಮಾ ಅವರು 10-0 ಗೋಲುಗಳಿಂದ ಜಯ ಸಾಧಿಸಿದರು.

ಮಹಿಳೆಯರ 76 ಕೆಜಿ ವಿಭಾಗದಲ್ಲಿ ಕಂಚು ಪಡೆದ ಪೂಜಾ ಮೂರನೇ ಪದಕ ಗೆದ್ದರು. ಅವರು ಕೊರಿಯಾದ ಸಿಯೋಯೋನ್ ಜಿಯಾಂಗ್ ಅವರನ್ನು 5-2ರಿಂದ ಸೋಲಿಸಿದರು.

ಮಹಿಳಾ 68 ಕೆ.ಜಿ.ಯಲ್ಲಿ ಭಾರತದ ನಿಶಾ ಕೂಡ ಮಂಗೋಲಿಯಾದ ಡೆಲ್ಜೆರ್ಮಾ ಎನ್‌ಖ್ಸೈಖಾನ್ ವಿರುದ್ಧ 8-0 ಅಂತರದ ಜಯ ಗಳಿಸುವ ಮೂಲಕ ಉತ್ತಮ ಆರಂಭವನ್ನು ಹೊಂದಿದ್ದರು. ಆದರೆ ಎರಡನೇ ಸುತ್ತಿನಲ್ಲಿ ಕೊರಿಯಾದ ಯುನ್ ಸನ್ ಜಿಯೊಂಗ್ ವಿರುದ್ಧ 2-6ರಿಂದ ಸೋತರು.

ಇದನ್ನೂ ಓದಿ: ಕುಸ್ತಿ ಪಂದ್ಯ ಸೋತಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ರಿತಿಕಾ ಫೋಗಾಟ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights