IND vs ENG: ಇಂಗ್ಲೆಂಡ್‌ 205 ರನ್‌ಗೆ ಆಲ್‌ಔಟ್; ಬೌಲಿಂಗ್‌ನಲ್ಲಿ ಅಬ್ಬರಿಸಿದ ಸ್ಪಿನ್ನರ್ಸ್‌!

ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಾಲ್ಕನೇ ಟೆಸ್ಕ್‌ ಕ್ರಿಕೆಟ್‌ ಮ್ಯಾಚ್‌ ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಅಂತಿಮ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡ 205ಕ್ಕೆ ಆಲೌಟ್‌ ಆಗಿದೆ.

ಟಾಸ್‌ ಗೆದ್ದು, ಬ್ಯಾಟಿಂಗ್‌ ಅರಂಭಿಸಿದ ಇಂಗ್ಲೆಂಡ್‌ ತಂಡ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಟೀ ಬ್ರೇಕ್‌ ಸಮಯಕ್ಕೆ 144 ರನ್‌ ಗಳಿಸಿದ್ದ ಇಂಗ್ಲೆಂಡ್‌ ತಂ 05 ವಿಕೆಟ್‌ ಕಳೆದುಕೊಂಡಿತ್ತು. ನಂತರ, ಸರವೇಗದಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 205 ರನ್‌ಗಳನ್ನು ಕಲೆಹಾಕಿ, ಆಲ್‌ಓಟ್‌ ಅಗಿದೆ.

ಸ್ಟೇಡಿಯಂನಲ್ಲಿ ಅಬ್ಬರಿಸಿದ ಟೀಂ ಇಂಡಿಯಾದ ಸ್ಪನ್‌ ಬೌಲರ್‌ಗಳು ಕಡಿಮೆ ರನ್‌ಗಳನ್ನು ಕೊಟ್ಟು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಅಕ್ಷರ್ ಪಟೇಲ್ 68 ರನ್ ನೀಡಿ 4 ವಿಕೆಟ್ ಉರುಳಿಸಿದರೆ, ಆರ್. ಅಶ್ವಿನ್ 47 ರನ್‌ ನೀಡಿ 3 ವಿಕೆಟ್ ಪಡೆದು ಕೊಂಡಿದ್ದಾರೆ.

ಇದೀಗ ಬ್ಯಾಟಿಂಗ್‌ ಆರಂಭಸಿರುವ ಟೀ ಇಂಡಿಯಾ ಒಂದು ವಿಕೆಟ್‌ ಕಳೆದುಕೊಂಡಿದೆ. ಕ್ರೀಸ್‌ಗೆ ಇಳಿದ ಶುಭಮನ್ ಗಿಲ್ ಒಂದೂ ರನ್‌ ಗಳಿಸಿದೇ ಅಂಡರ್ಸನ್ ಅವರ ಬೌಲಿಂಗ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಭಾರತ V/S ಇಂಗ್ಲೆಂಡ್: ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದ ಅಶ್ವಿನ್‌ ಟ್ವೀಟ್‌ಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights