ದೇಶದಲ್ಲಿ ಹೆಚ್ಚುತ್ತಿವೆ ಅಪಘಾತ ಪ್ರಕರಣಗಳು: ಬೆಂಗಳೂರಿಗೆ 3ನೇ ಸ್ಥಾನ!

ದೇಶದಲ್ಲಿ ವಿವಿಧ ನಗರಗಳಲ್ಲಿ ಅಪಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅವುಗಳಲ್ಲಿ ಅತೀ ಹೆಚ್ಚು ಅಪಘಾತ ಸಾವು ಸಂಭವಿಸಿದ ನಗರಗಳ ಪೈಕಿ ಕರ್ನಾಟಕ ರಾಜಧಾನಿ ಬೆಂಗಳೂರು 3ನೇ ಸ್ಥಾನದಲ್ಲಿದೆ ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (NCRB) ವರದಿ ನೀಡಿದೆ.

ಭಾರತದಲ್ಲಿ ಅಪಘಾತದಲ್ಲಿ ಹೆಚ್ಚು ಸಾವನ್ನಪ್ಪಿರುವ ನಗರಗಳಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದ್ದು, ಚೆನ್ನೈ ಎರಡನೇ ಸ್ಥಾನದಲ್ಲಿದೆ. ಇನ್ನು ಬೆಂಗಳೂರು 3ನೇ ಸ್ಥಾನ ಪಡೆದುಕೊಂಡಿದ್ದು, 2018 ರಲ್ಲಿ 4,611 ಅಪಘಾತ ಪ್ರಕರಣಗಳು ದಾಖಲಾಗಿದ್ದರೆ, 2019 ರಲ್ಲಿ 4,684 ಪ್ರಕರಣಗಳು ದಾಖಲಾಗಿವೆ. 2018 ರಲ್ಲಿ ಅಪಘಾತಗಳಿಂದ 686 ಸಾವಾಗಿದ್ದು, 2019 ರಲ್ಲಿ 768 ಮಂದಿ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಚೆನ್ನೈನಲ್ಲಿ 2018 ರಲ್ಲಿ 7,580 ಅಪಘಾತ ಪ್ರಕರಣಗಳು ದಾಖಲಾಗಿದ್ದು, 2019 ರಲ್ಲಿ 6,871 ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ 2018 ರಲ್ಲಿ 6,515 ಅಪಘಾತ ಪ್ರಕರಣಗಳು ದಾಖಲಾಗಿದ್ದು, 2019 ರಲ್ಲಿ 5,610 ಪ್ರಕರಣಗಳು ದಾಖಲಾಗಿವೆ.

ಅಪಘಾತ ಪ್ರಕರಣಗಳಲ್ಲಿ ಅಗ್ರ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 47,295 ಅಪಘಾತ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 15,358 ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ‘ಭಾರತವನ್ನು ನೋಡಿ, ಅದು ಹೊಲಸು, ಅಲ್ಲಿನ ಗಾಳಿಯು ಹೊಲಸು’: ಡೊನಾಲ್ಡ್‌ ಟ್ರಂಪ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights