‘ನಿನ್ ಯೋಗ್ಯತೆಗಿಷ್ಟು ಬೆಂಕಿ ಹಾಕಾ.. ಸುಳ್ಳು ಯಾಕ್ ಬೊಗಳ್ತೀಯಾ..’ ಸಾರ್ವಜನಿಕರ ಎದುರಲ್ಲೇ ಸಂಸದ – ಶಾಸಕನ ನಡುವೆ ಜಟಾಪಟಿ!

‘ನಿನ್ ಯೋಗ್ಯತೆಗಿಷ್ಟು ಬೆಂಕಿ ಹಾಕಾ.. ಸುಳ್ಳು ಯಾಕ್ ಬೊಗಳ್ತೀಯಾ.. ನೀನು ಅಯೋಗ್ಯ ನನ್ಮಗ.. ವಯಸ್ಸಾಗಿದೆ ನಿಂಗೆ. ಈಗಲಾದ್ರು ಸುಳ್ಳು ಮಾತಾಡ್ಬೇಡ’ ಎಂದು ತುಮಕೂರು ಸಂಸದ ಜಿ ಎಸ್ ಬಸವರಾಜ್ ಗೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ತರಾಟೆ ತೆಗೆದುಕೊಂಡಿದ್ದಾರೆ.

ತುಮಕೂರು ಸಂಸದ ಜಿ ಎಸ್ ಬಸವರಾಜ್ ಹಾಗೂ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅವರ ನೇರಾನೇರ ವಾಕ್ಸಮರ ಇಂದು ಜೋರಾಗಿತ್ತು. ಕೈ-ಕೈ ತೋರಿಸಿಕೊಂಡು ಸಾರ್ವಜನಿಕರ ಎದುರಲ್ಲೇ ಇಬ್ಬರು ನಾಯಕರ ನಡುವೆ ಜಟಾಪಟಿ ನಡೆದಿದೆ. ರೈತರಿಗೆ ದಾರಿ ತಪ್ಪಿಸುವಂತ ಭರವಸೆ ನೀಡುತ್ತಿದ್ದಾರೆಂದು ಜಿ ಎಸ್ ಬಸವರಾಜ್ ವಿರುದ್ಧ ಎಸ್ ಆರ್ ಶ್ರೀನಿವಾಸ್ ವಾಗ್ದಾಳಿ ಮಾಡಿದ್ದಾರೆ.

‘550 ಕೋಟಿ ಎಲ್ಲಿ ತಂದಿದ್ದೀರಾ ತೋರಿಸಿ. 550 ಕೋಟಿ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದೀರಾ ಎಲ್ಲಿದೆ ತೋರಿಸಿ’ ಎಂದು ಶ್ರೀನಿವಾಸ್ ಪ್ರಶ್ನೆ ಹಾಕಿದ್ದಾರೆ. ನನ್ನ ಮುಂದೆ ನನಗೆ ಸುಳ್ಳು ಹೇಳ್ತಾರೆ. ನಿನ್ ಯೋಗ್ಯತೆಗಿಷ್ಟು ಬೆಂಕಿ ಹಾಕಾ.. ಸುಳ್ಳು ಯಾಕ್ ಬೊಗಳ್ತೀಯಾ.. ನೀನು ಅಯೋಗ್ಯ ನನ್ಮಗ.. ವಯಸ್ಸಾಗಿದೆ ನಿಂಗೆ ಈಗಲಾದ್ರು ಸುಳ್ಳು ಮಾತನಾಡಬೇಡ’ ಎಂದು ಪರಸ್ಪರ ಬೈದಾಡಿಕೊಂಡಿದ್ದಾರೆ.

ಘಟನೆ ಬಳಿಕ ಮಾತನಾಡಿದ ಶ್ರೀನಿವಾಸ್,  “ರೈತರಿಗೆ ದಾರಿ ತಪ್ಪಿಸುವಂತ ಭರವಸೆಯನ್ನು ಜಿ ಎಸ್ ಬಸವರಾಜ್ ನೀಡಿದ್ದಾರೆ. 550 ಕೋಟಿ ತಂದು ಕೊಡುವುದಾಗಿ ರೈತರಿಗೆ ಸುಳ್ಳು ಆಶ್ವಾಸನಗಳನ್ನು ನೀಡಿದ್ದಾರೆ. ಜೊತೆಗೆ ನಾನು ಮಾಡಿದ ಕಾರ್ಯಗಳನ್ನು ತಾವು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ನನ್ನ ಎದುರಿಗೆ ಸುಳ್ಳು ಹೇಳಿದ್ದಕ್ಕೆ ನಾನು ಕೆರಳಿ ಮಾತನಾಡಿದೆ’ ಎಂದಿದ್ದಾರೆ.

ಒಟ್ಟಿನಲ್ಲಿ ಸಿಟಿ ರವಿ, ಸಚಿವ ಕೆಎಸ್ ಈಶ್ವರಪ್ಪ ಬಳಿಕ ಸಂಸದ ಜಿ ಎಸ್ ಬಸವರಾಜ್ ಹಾಗೂ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಜನಪ್ರತಿನಿಧಿಗಳಿಂದ ಬರುವ ಅವಾಚ್ಯ ಶಬ್ದಗಳು ಜನರಿಗೆ ಯಾವ ಸಂದೇಶವನ್ನು ರವಾನಿಸುತ್ತವೆ ಎಂದು ಸಾರ್ವಜನಿಕರ ವಲಯದಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights