ಎಎಪಿ ಅಧಿಕಾರಕ್ಕೆ ಬಂದರೆ, ಪಂಜಾಬ್‌ ಜನರಿಗೆ ಉಚಿತ ವಿದ್ಯುತ್‌: ಅರವಿಂದ್‌ ಕೇಜ್ರಿವಾಲ್‌

2022ರಲ್ಲಿ ಪಂಜಾಬ್‌ ವಿಧಾನಸಭಾ ಚುನಾವಣೆ ನಡೆಯಲಿದೆ. ಆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಗೆದ್ದು, ಅಧಿಕಾರಕ್ಕೆ ಬಂದರೆ, ಪಂಜಾಬ್‌ ರಾಜ್ಯದ ಪ್ರತಿ ಮನೆಗೂ ತಿಂಗಳಿಗೆ 300 ಯುನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ದೆಹಲಿಯಲ್ಲಿ ನಾವು ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುತಿದ್ದೇವೆ. ಇದರಿಂದಾಗಿ ದೆಹಲಿಯ ಮಹಿಳೆಯರು ತುಂಬಾ ಸಂತೋಷವಾಗಿದ್ದಾರೆ. ಅದೇ ರೀತಿಯಲ್ಲಿ ಪಂಜಾಬ್‌ನಲ್ಲೂ ಉಚಿತ ವಿದ್ಯುತ್‌ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.

ಪಂಜಾಬ್‌ನ ಮಹಿಳೆಯರು ಹಣದುಬ್ಬರದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಪಂಜಾಬ್‌ನಲ್ಲಿ ಎಎಪಿ ಸರ್ಕಾರ ರಚನೆಯಾದರೆ, ಮಹಿಳೆಯ ಅಸಮಾಧಾನವನ್ನು ತೊಡೆದು ಹಾಕಲು ಶ್ರಮಿಸಲಿದೆ. ಅದಕ್ಕಾಗಿ ಪಂಜಾಬ್‌ನ ಪ್ರತಿ ಮನೆಗಳಿಗೂ ಉಚಿತ ವಿದ್ಯುತ್‌ ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದೆ. ಪಂಜಾಬ್ ವಿದ್ಯುತ್ ಉತ್ಪಾದಕ ರಾಜ್ಯವಾಗಿದ್ದರೂ ಅಲ್ಲಿ ವಿದ್ಯುತ್ ‘ವೆಚ್ಚದಾಯಕ’ವಾಗಿದೆ. ನಾವು ದೆಹಲಿಯಲ್ಲಿ ವಿದ್ಯುತ್‌ ಉತ್ಪಾದಿಸುತ್ತಿಲ್ಲ. ನಾವು ಇತರ ರಾಜ್ಯಗಳಿಂದ ಖರೀದಿಸುತ್ತಿದ್ದೇವೆ. ಆದರೂ, ನಾವು ಉಚಿತ ವಿದ್ಯುತ್‌ ನೀಡುತ್ತಿದ್ದೇವೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಇದನ್ನೂ ಓದಿ: ಜುಲೈ 31 ರವರೆಗೆ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆ ಜಾರಿಗೆ ತರಲು ಸುಪ್ರೀಂ ಆದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights