ಈ ಹಿಂದೆ ಬಿಜೆಪಿಯನ್ನು ಬೆಂಬಲಿಸಿ ನಾನು ತಪ್ಪುಮಾಡಿದೆ: ನರೇಶ್ ಟಿಕಾಯತ್

ಬಿಜೆಪಿ ಸರಕಾರ ರೈತರನ್ನು ನಾಶಗೊಳಿಸುವ ಉದ್ದೇಶ ಹೊಂದಿದೆ. ಈ ಹಿಂದೆ ಬಿಜೆಪಿಯನ್ನು ಬೆಂಬಲಿಸಿ ನಾನು ದೊಡ್ಡ ತಪ್ಪು ಮಾಡಿದೆ  ಎಂದು ಭಾರತೀಯ ಕಿಸಾನ್ ಯೂನಿಯನ್‍ನ ರಾಷ್ಟ್ರೀಯ ಅಧ್ಯಕ್ಷ ನರೇಶ್ ಟಿಕಾಯತ್ ಹೇಳಿದ್ದಾರೆ.

ಬಿಜೆಪಿ ಸರ್ಕಾರ ರೈತರೊಂದಿಗೆ ಸಂಘರ್ಷಕ್ಕಿಳಿದಿದೆ. ಶಾಂತಿಯುವ ಹೋರಾಟ ಮತ್ತು ಸೌಹಾರ್ದ ಮಾತುಕತೆಗಳ ಮೂಲಕ ನಾವು ಹೋರಾಟ ಗೆಲ್ಲಬೇಕು. ನಮ್ಮ ಕೃಷಿ ಭೂಮಿಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದ ರೈತರ ಮಹಾಪಂಚಾಯತ್‌ನಲ್ಲಿ ನರೇಶ್‌ ಟಿಕಾಯತ್‌ ಹೇಳಿದ್ದಾರೆ.

ಕೃಷಿ ಕಾಯ್ದೆಗಳು ನಮ್ಮ ಕೃಷಿ ಭೂಮಿಯನ್ನು ಕಸಿದುಕೊಳ್ಳುತ್ತವೆ. ನಮ್ಮ ಭೂಮಿಯನ್ನೂ ಕಳದುಕೊಂಡು, ಕೃಷಿಯನ್ನೂ ಮಾಡಲು ಸಾಧ್ಯವಾಗದಿದ್ದರೆ, ನಮಗೆ ಮತ್ತೇನು ಉಳಿಯಲಿದೆ? ನಾವು ಯಾವುದೇ ಕಾರಣಕ್ಕೂ ನಮ್ಮ ಭೂಮಿಯನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

“ಈ ಸರ್ಕಾರವು ಅಪಾಯಕಾರಿ ಉದ್ದೇಶವನ್ನು ಹೊಂದಿದೆ. ಸಣ್ಣ ವರ್ತಕರನ್ನು ನಾಶ ಮಾಡಿ, ಎಲ್ಲಾ ವಸ್ತುಗಳೂ ದೊಡ್ಡ ಮಾಲ್‍ಗಳಲ್ಲಿ ಮಾತ್ರ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕಾರ್ಪೋರೇಟ್‌ಗಳಿಗೆ ನೆರವು ನೀಡಲು ಮುಂದಾಗಿದೆ. ಇಂತಹ ಬಿಜೆಪಿ ಶಾಸಕರ ಜೊತೆ ಯಾವುದೇ ಸಂಬಂಧ ಇಟ್ಟುಕೊಳ್ಳಬೇಡಿ, ಅವರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಬೇಡಿ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 04 ಲಕ್ಷ ಅಲ್ಲ 40 ಲಕ್ಷ ಟ್ರಾಕ್ಟರ್‌ಗಳು ಸಂಸತ್‌ಗೆ ಮುತ್ತಿಗೆ ಹಾಕಲಿವೆ: ರೈತ ನಾಯಕ ರಾಕೇಶ್ ಟಿಕಾಯತ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights