ಮದುವೆಯಾಗುವೆ ಬಾ… ಕಾಮುಕನ ಉಡಾಫೆ ಮಾತಿಗೆ ಬೇಸತ್ತು ದೂರು ಕೊಟ್ಟ ಯುವತಿ!

“ನಿನ್ನಂತೆ ನನಗೆ ತುಂಬಾ ಹುಡುಗಿಯರು ಇದ್ದಾರೆ ಎಲ್ಲರಿಗೂ ಬಾಳು ಕೊಡಲು ಸಾಧ್ಯವಿಲ್ಲ” ನಂಬಿಸಿ ಮೋಸ ಮಾಡಿದ್ದ ಕಾಮುಕ ಸಂತ್ರಸ್ತೆಗೆ ಹೇಳಿದ ಮಾತಿದು. ಇದೊಂದೇ ಒಂದು ಮಾತಿನಿಂತ ಕಾಮಕ ಪ್ರೇಮಿಯ ಅಸಲಿಯತ್ತು ಬಯಲಾಗಿ ಮೋಸ ಹೋದ ಯುವತಿ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಹೌದು.. ಹೀಗೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆಲಸ ಕೊಡಿಸುವುದಾಗಿ ಹೇಳಿ ಬೆಂಗಳೂರಿಗೆ ಯುವತಿಯನ್ನು ಕರೆಸಿಕೊಂಡು ಸಾಗರ್ ಗೌಡ ಮತ್ತು ಬರೋ ಕೇಕ್ ಕೊಟ್ಟು ಅತ್ಯಾಚಾರವೆಸಗಿ ಬ್ಲಾಕ್ ಮೇಲ್ ಮೂಲಕ ಹಣ ಪೀಕಿದ್ದಾನೆ ಕಾಮುಕನೊಬ್ಬ. ಯುವತಿಗೆ ಕೆಲಸ ಕೊಡಿಸುವುದಾಗಿ ಬೆಂಗಳೂರಿಗೆ ಕರೆಸಿಕೊಂಡ ಪರಿಚಯಸ್ಥನಾಗಿದ್ದ ಸಾಗರ್ ಗೌಡ ನಾಯಂಡಳ್ಳಿ ಸರ್ಕಲ್ ಗೆ ಬರಲು ತಿಳಿಸಿದ್ದಾನೆ. ರೆಸ್ಯೂಮ್ ಸಮೇತ ಬಂದ ಯುವತಿಗೆ ತನ್ನ ಅಕ್ಕನ ಮಗನ ಹುಟ್ಟುಹಬ್ಬವೆಂದು ಕೇಕ್ ತಂದು ಕೊಟ್ಟಿದ್ದಾನೆ. ಕೇಕ್ ತಿಂದ ಬಳಿಕ ಯುವತಿಗೆ ತಲೆ ಸುತ್ತು ಕಾಣಿಸಿಕೊಂಡಿದೆ. ಕೂಡಲೆ ಯುವಕ ತನ್ನ ಅಕ್ಕನ ಮನೆಗೆ ಹೋಗಿ ಕೊಂಚ ರೆಸ್ಟ್ ಮಾಡಿ ಬಳಿಕ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಮನೆಯಲ್ಲಿ ತನ್ನ ಅಕ್ಕ ಕೂಡ ಇರುತ್ತಾಳೆಂದು ಯುವತಿಯನ್ನು ಕರೆದುಕೊಮಡು ಹೋಗಿದ್ದಾನೆ.

ಮೊದಲ ದೌರ್ಜನ್ಯ:

ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಅದನ್ನ ವೀಡಿಯೋ ಕೂಡ ಮಾಡಿ ಒಂದು ಲಕ್ಷ ಕೊಡಲು ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ಕೊಡದೇ ಹೋದರೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಇದಕ್ಕೆ ಹೆದರಿದ ಯುವತಿ ಹಣವನ್ನೂ ಕೊಟ್ಟಿದ್ದಳು. ನಂತರ ಆತ ಮದುವೆಯಾಗುವುದಾಗಿ ನಂಬಿಸಿ ಪ್ರೀತಿ ನಾಟಕವಾಡಿ ಆಕೆಯನ್ನು ಬಳಸಿಕೊಂಡಿದ್ದಾನೆ. ಯುವತಿ ಮದುವೆಯಾಗಲು ಕೇಳಿದಾಗ ನಿರಾಕರಿಸಿದ್ದಾನೆ.

ಪ್ರೀತಿ ನಾಟಕ:

ಹೀಗಾಗಿ ಯುವತಿ ಯುವಕನ ತಂದೆ ಬಳಿ ಹೋಗಿ ನಡೆದ ಘಟನೆ ಹೇಳಿದ್ದಾಳೆ. ಆದರೆ ಸಾಗರ್ ಗೌಡ ನ ತಂದೆ ನಿನ್ನಂತೆ ತನ್ನ ಮಗನಿಗೆ 26 ಜನ ಹುಡುಕಿಯರಿದ್ದಾರೆ. ಅವರಿಗೆಲ್ಲಾ ಬಾಳು ಕೊಟ್ಟು ನಂತರ ನಿನಗೆ ಬಾಳು ಕೊಡುತ್ತಾನೆ ನನ್ನ ಮಗ ಎಂದು ಉಡಾಫೆ ಮಾತನ್ನಾಡಿದ್ದಾರೆ. ಇದರಿಂದ ಬೇಸತ್ತ ಯುವತಿ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಿಸಿದ್ದಾಳೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights